Asianet Suvarna News Asianet Suvarna News

ಬ್ರಿಟನ್ ನೂತನ ಪ್ರಧಾನಿ ರಿಷಿ ಸುನಕ್‌ಗೆ ಶುಭಕೋರಿದ ನರೇಂದ್ರ ಮೋದಿ!

ಎಸ್‌ಸಿ ಎಸ್‌ಟಿ ಸಮುದಾಯಕ್ಕೆ ದೀಪಾವಳಿ ಗಿಫ್ಟ್, ಮೀಸಲಾತಿ ಹೆಚ್ಚಳ ಸುಗ್ರೀವಾಜ್ಞೆ ಪ್ರತಿ ಸ್ವಾಮೀಜಿಗೆ ಹಸ್ತಾಂತರ, ರಿಷಿ ಸುನಕ್ ಬ್ರಿಟನ್ ಪ್ರಧಾನಿಯಾಗಿ ಆಯ್ಕೆ, ಬಂಡೇಮಠದ ಶ್ರೀ ನೇಣಿಗೆ ಶರಣು ಸೇರಿದಂತೆ ಇಂದಿನ ಪ್ರಮುಖ ಸುದ್ದಿಗಳ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.

First Published Oct 24, 2022, 10:31 PM IST | Last Updated Oct 24, 2022, 10:31 PM IST

ಬ್ರಿಟನ್ ನೂತನ ಪ್ರಧಾನಿಯಾಗಿ ಭಾರತೀಯ ಮೂಲಕ ರಿಷಿ ಸುನಕ್ ಆಯ್ಕೆಯಾಗಿದ್ದಾರೆ. ಲಿಜ್ ಟ್ರಸ್ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಸುನಕ್ ಕನ್ಸರ್ವೇಟೀವ್ ಪಾರ್ಟಿ ನಾಯಕರಾಗಿ ಹೊರಹೊಮ್ಮಿದ್ದಾರೆ. ಸುನಕ್ ಆಯ್ಕೆಯಾಗುತ್ತಿದ್ದಂತೆ ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ. ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮೂಲಕ ಶುಭಕೋರಿದ್ದಾರೆ. ಇದೇ ವೇಳೆ ಭಾರತ ಹಾಗೂ ಬ್ರಿಟನ್ ನಡುವಿನ ಸಂಬಂಧ ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಜೊತೆಯಾಗಿ ಹೆಜ್ಜೆಹಾಕೋಣ ಎಂದಿದ್ದಾರೆ. ಇನ್ನು ರಾಜ್ಯದಲ್ಲಿ ಎಸ್‌ಸಿ ಎಸ್‌ಟಿ ಸಮುದಾಕ್ಕೆ ನೀಡಿರುವ ಮೀಸಲಾತಿ ವಿಚಾರ ಇದೀಗ ರಾಜಕೀಯ ಪಕ್ಷಗಳ ಕ್ರೆಡಿಟ್ ವಾರ್‌ಗೆ ಕಾರಣಾಗಿದೆ. ಇದರ ಜೊತೆ ಇಂದಿನ ಹಲವು ಸುದ್ದಿಗಳ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ

Video Top Stories