
PM Modi Europe Visit ಮಕ್ಕಳೊಂದಿಗೆ ಮಗುವಾಗಿ ಬಿಡ್ತಾರೆ ಮೋದಿ, ಬರ್ಲಿನ್ ಚಿಣ್ಣರ ಜೊತೆ ಪ್ರಧಾನಿ ಸಂಭ್ರಮ!
- ಜರ್ಮನಿಯಲ್ಲಿ ಪುಟಾಣಿಯ ಹಾಡಿಗೆ ಮೋದಿ ಕ್ಲೀನ್ ಬೌಲ್ಡ್
- ಮೋದಿ ಮುಂದೆ ದೇಶಭಕ್ತಿ ಗೀತೆ ಹಾಡಿದ ಪುಟ್ಟ ಹುಡುಗ
- ಬಾಲಕಿ ಬಿಡಿಸಿದ ಮೋದಿ ಭಾವಚಿತ್ರಕ್ಕೆ ಪ್ರಧಾನಿ ಸಹಿ
ಬರ್ಲಿನ್(ಮೇ.03) ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಯುರೋಪ್ ಪ್ರವಾಸ ಸೋಮವಾರ ಶುರುವಾಗಿದೆ. ಪ್ರವಾಸದ ಮೊದಲ ಹೆಜ್ಜೆಯಲ್ಲಿ ಜರ್ಮನಿಯ ಬರ್ಲಿನ್'ಗೆ ತಲುಪಿದ ಮೋದಿಗೆ ಅನಿವಾಸಿ ಭಾರತೀಯರಿಂದ ಪ್ರೀತಿಯ ಅಭೂತಪೂರ್ವ ಸ್ವಾಗತ ದೊರೆಯಿತು. ಪ್ರಧಾನಿ ಮೋದಿಯವರಿಗೆ ಮಕ್ಕಳು, ಮಕ್ಕಳ ಜೊತೆ ಕಾಲ ಕಳೆಯೋದು ಎಷ್ಟು ಖುಷಿ ಕೊಡತ್ತೆ ಅನ್ನೋದಕ್ಕೆ ಈ ದೃಶ್ಯ ಮತ್ತೊಂದು ಸಾಕ್ಷಿ. ಜರ್ಮಿನಿಯ ಬರ್ಲಿನ್'ನಲ್ಲಿ ಅನಿವಾಸಿ ಭಾರತೀಯ ಕುಟುಂಬದ ಬಾಲಕನೊಬ್ಬ ಪ್ರಧಾನಿ ಮೋದಿಯವರ ಮುಂದೆ ನಿಂತು ದೇಶಭಕ್ತಿಗೀತೆಯೊಂದನ್ನು ಹಾಡಿದ. ಹುಡುಗನ ಹಾಡನ್ನು ತದೇಕಚಿತ್ತದಿಂದ ಆಲಿಸಿದ ಮೋದಿ ಬಾಲಕನ ಹಾಡು ಕೇಳಿ ಫುಲ್ ಖುಷ್ ಆದ್ರು. ಅಷ್ಟೇ ಅಲ್ಲ, ಪುಟ್ಟ ಹುಡುಗ ಹಾಡುವುದನ್ನು ಚಿಟಿಕೆ ಹೊಡೆಯುತ್ತಾ ಎಂಜಾಯ್ ಮಾಡಿದ್ರು.