ಮಹಾರಾಷ್ಟ್ರದಲ್ಲಿ ಮುಂದುವರಿದ 'ಪವಾರ್‌ ಪ್ಲೇ'! ಎರಡು ಬಣಗಳಿಂದ ಶಕ್ತಿ ಪ್ರದರ್ಶನ!

ಮಹಾರಾಷ್ಟ್ರ ರಾಜಕಾರಣದಲ್ಲಿ ಪವಾರ್‌ ಪ್ಲೇ ಮುಂದುವರಿದಿದೆ. ಡಿಸಿಎಂ ಅಜಿತ್‌ ಪವಾರ್‌ ಇಡೀ ಎನ್‌ಸಿಪಿ ಪಕ್ಷ ತನ್ನದು ಎಂದಿದ್ದರೆ, ಶರದ್‌ ಪವಾರ್‌ ಯಾವುದೇ ಕಾರಣಕ್ಕೂ ಪಕ್ಷವನ್ನು ಬಿಟ್ಟುಕೊಡುವ ಮನಸ್ಸಿನಲ್ಲಿಲ್ಲ.
 

Share this Video
  • FB
  • Linkdin
  • Whatsapp

ಬೆಂಗಳೂರು (ಜು.6): ಮಹಾರಾಷ್ಟ್ರದಲ್ಲಿ ಡಿಸಿಎಂ ಅಜಿತ್ ಪವಾರ್ ಶಕ್ತಿ ಪ್ರರ್ದಶನ ನಡೆಸಿದ್ದಾರೆ. ಬಹುತೇಕ ಪಕ್ಷದ ಪಾರುಪತ್ಯ ಅಜಿತ್‌ ಪವಾರ್‌ಗೆ ವರ್ಗಾವಣೆ ಆಗುವ ಸಾಧ್ಯತೆ ಇದೆ. ಬುಧವಾರ ನಡೆದ ಸಭೆಯಲ್ಲಿ ಅಜಿತ್‌ ಪವಾರ್‌ ಬಣದಲ್ಲಿ ಹೆಚ್ಚಿನ ಶಾಸಕರು ಗುರುತಿಸಿಕೊಂಡಿದ್ದಾರೆ.

ಹೆಚ್ಚಿನ ಶಾಸಕರು ಅಜಿತ್‌ ಪವಾರ್‌ ಬಣದಲ್ಲಿ ಇರುವುದರೊಂದಿಗೆ ಶರದ್‌ ಪವಾರ್‌ ವಿರುದ್ಧ ಅಜಿತ್‌ ಪವಾರ್‌ ಗೆದ್ದು ಬೀಗಿದ್ದಾರೆ. ಅಜಿತ್ ಪವಾರ್ ಗೆ ಬರೊಬ್ಬರಿ 31 ಶಾಸಕರ ಬಹುಮತ ಸಿಕ್ಕಿದೆ. ಇನ್ನು ಶರದ್‌ ಪವಾರ್‌ಗೆ ಕೇವಲ 14 ಶಾಸಕರ ಬಲ ಸಿಕ್ಕಿದೆ.

ಅಜಿತ್ ಪವಾರ್ ಜೊತೆ ಬಿಜೆಪಿಗೆ ಬೆಂಬಲ ನೀಡಿದ್ದ ಶಾಸಕರು ಯೂ ಟರ್ನ್,ಇಬ್ಬರು ಮರಳಿ ಗೂಡಿಗೆ!

ಬುಧವಾರ ಇಬ್ಬರೂ ನಾಯಕರು ಶಾಸಕರ ಸಭೆ ಕರೆದಿದ್ದರು. ಈ ವೇಳೆ 31 ಶಾಸಕರು ಅಜಿತ್ ಪವಾರ್ ಪರ 13 ಶಾಸಕರು ಶರದ್ ಪವಾರ್ ಪರ ಬಂದಿದ್ದಾರೆ. ಯಾರ ಕಡೆಯೂ ಹೋಗದೇ 9 ಶಾಸಕರು ತಟಸ್ಥವಾಗುಳಿದಿದ್ದಾರೆ. ತಾನೇ ಅಧ್ಯಕ್ಷ ಎಂದು ಚುನಾವಣಾ ಆಯೋಗಕ್ಕೆ ಅಜಿತ್ ಪವಾರ್ ಮಾಹಿತಿ ನೀಡಿದ್ದಾರೆ.

Related Video