Party Rounds: ದಕ್ಷಿಣದ ದಂಡಯಾತ್ರೆಗೆ ಸಜ್ಜಾದ ಪ್ರಧಾನಿ ನರೇಂದ್ರ ಮೋದಿ?

ಕರ್ನಾಟಕ ವಿಧಾನಸಭೆಯಲ್ಲಿ ಬಿಜೆಪಿ ಸೋಲು ಕಂಡ ಬೆನ್ನಲ್ಲಿಯೇ ಕೇಸರಿ ಪಾಳಯ ತನ್ನ ರಣತಂತ್ರವನ್ನು ಬದಲಾಯಿಸುತ್ತಿರುವ ಸೂಚನೆ ಸಿಕ್ಕಿದೆ. ಮೂಲಗಳ ಪ್ರಕಾರ ನರೇಂದ್ರ ಮೋದಿ ಮುಂದಿನ ಲೋಕಸಭೆ ಚುನಾವಣೆಯಲ್ಲಿ ತಮಿಳುನಾಡಿನಿಂದ ಸ್ಪರ್ಧೆ ಮಾಡುವ ಸಾಧ್ಯತೆ ಇದೆ.
 

First Published Jul 12, 2023, 11:37 PM IST | Last Updated Jul 12, 2023, 11:37 PM IST

ಬೆಂಗಳೂರು (ಜು.12): ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಹೈದರಾಬಾದ್‌ನಲ್ಲಿ ನಡೆದ ಸಭೆಯಲ್ಲಿ ಪ್ರಧಾನಿ ಮೋದಿ ಈ ಬಾರಿ ದಕ್ಷಿಣದ ಯಾವುದಾದರೂ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಬಹುದು ಎಂದಿ ಹೇಳಿರುವುದು ಚರ್ಚೆಗೆ ಗ್ರಾಸವಾಗಿದೆ. 

ಮೂಲಗಳ ಪ್ರಕಾರ ತಮಿಳುನಾಡಿನ ರಾಮನಾಥಪುರಂ ಅಥವಾ ಕನ್ಯಾಕುಮಾರಿಯಿಂದ ಸ್ಪರ್ಧೆ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ. ಅದರೊಂದಿಗೆ ಉತ್ತರದಲ್ಲಿ ವಾರಣಾಸಿ ಕ್ಷೇತ್ರದಿಂದ ಸ್ಪರ್ಧೆ ಮಾಡಲಿದ್ದಾರೆ.

ದಕ್ಷಿಣ ಭಾರತದಲ್ಲಿ 50 ಸೀಟ್‌ ಟಾರ್ಗೆಟ್: ತಮಿಳುನಾಡಿನ ರಾಮನಾಥಪುರದಿಂದ ಪ್ರಧಾನಿ ಮೋದಿ ಸ್ಪರ್ಧೆ?

ಮುಂದಿನ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ದಕ್ಷಿಣದಿಂದ ಅಖಾಡಕ್ಕೆ ಇಳಿಯುವ ಸಾಧ್ಯತೆಗೆ ಹಲವಾರು ತಂತ್ರಗಳಿವೆ. ಕರ್ನಾಟಕ ವಿಧಾನಸಭೆ ಸೋತ ಬಳಿಕ ಬಿಜೆಪಿಯ ಹೊಸ ರಣತಂತ್ರ ಇದು ಎನ್ನಲಾಗಿದೆ.