ದಕ್ಷಿಣ ಭಾರತದಲ್ಲಿ 50 ಸೀಟ್ ಟಾರ್ಗೆಟ್: ತಮಿಳುನಾಡಿನ ರಾಮನಾಥಪುರದಿಂದ ಪ್ರಧಾನಿ ಮೋದಿ ಸ್ಪರ್ಧೆ?
ಮೋದಿಯನ್ನು ತಮಿಳುನಾಡಿನಲ್ಲಿ ಸ್ಪರ್ಧೆ ಮಾಡಿಸುವ ಮೂಲಕ ತಮಿಳುನಾಡಿನಲ್ಲೂ ಬಿಜೆಪಿ ಹೆಚ್ಚು ಶೇಕಡಾವಾರು ಮತಗಳನ್ನು ಗಳಿಸುವುದು. ಈ ಮೂಲಕ ದಕ್ಷಿಣ ಭಾರತದಲ್ಲಿ ಎನ್‌ಡಿಎಗೆ ಹೆಚ್ಚು ಲಾಭವೂ ಅಗುತ್ತೆ.
ಹೈದರಾಬಾದ್ (ಜುಲೈ 12, 2023): ಗುಜರಾತ್ ಸಿಎಂ ಅಗಿದ್ದ ನರೇಂದ್ರ ಮೋದಿ 2014 ರಲ್ಲಿ ಗಾಂದಿ ನಗರ ಹಾಗೂ ವಾರಾಣಸಿಯಲ್ಲಿ ಸ್ಪರ್ಧೆ ಮಾಡುವ ಮೂಲಕ ಪ್ರಧಾನಿಯಾದ್ರು. ಬಿಜೆಪಿಗೆ ಭರ್ಜರಿ ಬಹುಮತ ತಂದುಕೊಟ್ರು. ವಾರಾಣಸಿ ಲೋಕಸಭಾ ಸ್ಥಾನದಲ್ಲಿ ಸ್ಪರ್ಧೆಯಿಂದ ಯುಪಿಯಲ್ಲಿ ಬಿಜೆಪಿ 80 ಕ್ಷೇತ್ರಗಳ ಪೈಕಿ ಬರೋಬ್ಬರಿ 70ಕ್ಕೂ ಹೆಚ್ಚು ಸೀಟುಗಳಲ್ಲಿ ಭರ್ಜರಿ ಗೆಲುವು ಸಾಧಿಸಿತು. ಗುಜರಾತ್‌ನ ಲೋಕಸಭೆ ಕ್ಷೇತ್ರವನ್ನು ಬಿಟ್ಟುಕೊಟ್ಟು ವಾರಾಣಸಿ ಕ್ಷೇತ್ರದ ಮೂಲಕ ಸಂಸದರಾದ್ರೂ 2019ರ ಲೋಕಸಭೆ ಚುನಾವಣೆಯಲ್ಲಿ ಮತ್ತೆ ಬಿಜೆಪಿಗೆ ಭರ್ಜರಿ ಗೆಲುವು ಸಿಕ್ತು. ಅದೇ ರೀತಿ, ಯುಪಿ ಹಾಗೂ ಗುಜರಾತ್‌ನಲ್ಲೂ ಸಹ ದೊರೆಯಿತು.
ಆದರೆ, 2024 ರ ಲೋಕಸಭೆ ಚುನಾವಣೆ ಬಿಜೆಪಿಗೆ ಸವಾಲಾಗಿದೆ. ಏಕೆಂದರೆ ವಿಪಕ್ಷಗಳೆಲ್ಲ ಒಗ್ಗೂಡಿ ಮೈತ್ರಿ ಮಾಡಿಕೊಳ್ಳಲು ಯತ್ನಿಸಿದೆ. ಈ ಹಿನ್ನೆಲೆ ಬಿಜೆಪಿ ಬೇರೊಂದು ಮಾಸ್ಟರ್ ಪ್ಲ್ಯಾನ್ ಮಾಡ್ತಿದೆ. ಅದೇನೆಂದರೆ ಮೋದಿಯನ್ನು ತಮಿಳುನಾಡಿನಲ್ಲಿ ಸ್ಪರ್ಧೆ ಮಾಡಿಸುವ ಮೂಲಕ ತಮಿಳುನಾಡಿನಲ್ಲೂ ಬಿಜೆಪಿ ಹೆಚ್ಚು ಶೇಕಡಾವಾರು ಮತಗಳನ್ನು ಗಳಿಸುವುದು. ಈ ಮೂಲಕ ವಿಪಕ್ಷಗಳ ಮೈತ್ರಿಕೂಟಕ್ಕೆ ಹಿನ್ನೆಡೆ ಅಗ್ಬಹುದು. ಅಲ್ಲದೆ, ದಕ್ಷಿಣ ಭಾರತದಲ್ಲಿ ಎನ್‌ಡಿಎಗೆ ಮತ್ತಷ್ಟು ಲಾಭವೂ ಅಗುತ್ತೆ.
ಇದನ್ನು ಓದಿ: Good News: ಶೀಘ್ರದಲ್ಲೇ ಟೊಮ್ಯಾಟೋ ದರ ಇಳಿಕೆ; ಕೇಂದ್ರ ಸರ್ಕಾರದಿಂದ ಮಹತ್ವದ ಕ್ರಮ
ಬಿಜೆಪಿಯ ಕೇಂದ್ರ ನಾಯಕತ್ವವು ಈ ನಿಟ್ಟಿನಲ್ಲಿ ನಿರ್ಧಾರ ತೆಗೆದುಕೊಂಡರೆ ಮುಂದಿನ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ತಮಿಳುನಾಡಿನ ರಾಮನಾಥಪುರಂ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವ ಸಾಧ್ಯತೆಯಿದೆ. ತೆಲಂಗಾಣದ ನಾಂಪಲ್ಲಿಯ ಪಕ್ಷದ ಕಚೇರಿಯಲ್ಲಿ ಭಾನುವಾರ ನಡೆದ 11 ರಾಜ್ಯಗಳ ಬಿಜೆಪಿ ಅಧ್ಯಕ್ಷರು ಮತ್ತು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳ ಪ್ರಾದೇಶಿಕ ಸಮಾಲೋಚನಾ ಸಭೆಯಲ್ಲಿ ಈ ಅಭಿಪ್ರಾಯ ಕೇಳಿಬಂದಿದೆ. ಪಕ್ಷದ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ದಕ್ಷಿಣದಲ್ಲಿ ಪಕ್ಷಕ್ಕೆ ಗಟ್ಟಿಯಾಗಿ ಬೇರೂರಿಸುವ ಉದ್ದೇಶದಿಂದ ದಕ್ಷಿಣ ಭಾರತದ ರಾಜ್ಯವೊಂದರಿಂದ ಮೋದಿ ಅವರನ್ನು ಕಣಕ್ಕಿಳಿಸಲು ನಿರ್ಧರಿಸಿದೆ ಎಂದು ಪ್ರತಿನಿಧಿಗಳಿಗೆ ತಿಳಿಸಿದರು.
ಪ್ರತಿನಿಧಿಗಳ ಅಭಿಪ್ರಾಯ ಕೇಳಿದಾಗ ಬಹುತೇಕರು ನರೇಂದ್ರ ಮೋದಿ ಅವರನ್ನು ತಮಿಳುನಾಡಿನ ರಾಮನಾಥಪುರದಿಂದ ಸ್ಪರ್ಧಿಸುವಂತೆ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ. ಪ್ರಸ್ತುತ, ಇಂಡಿಯನ್ ಮುಸ್ಲಿಂ ಲೀಗ್‌ನ ಕೆ. ನವಾಸ್ ಕನಿ ಕ್ಷೇತ್ರದ ಸಂಸದರಾಗಿದ್ದಾರೆ.
ಇದನ್ನೂ ಓದಿ: ಗೀತಾ ಪ್ರೆಸ್ ದೇಗುಲಕ್ಕೆ ಸಮ: ಗಾಂಧಿ ಪ್ರಶಸ್ತಿ ವಿರೋಧಿಸಿದ್ದ ಕಾಂಗ್ರೆಸ್‌ಗೆ ಮೋದಿ ಟಾಂಗ್
ಪಕ್ಷದ ನಾಯಕರ ಸಲಹೆಯು ಮಹತ್ವದ್ದಾಗಿದೆ ಮತ್ತು ಸವಾಲಿನದ್ದಾಗಿದೆ. ಏಕೆಂದರೆ ಮೋದಿ ಪ್ರಸ್ತುತ ಹಿಂದೂ ಪ್ರಾಬಲ್ಯದ ವಾರಾಣಸಿಯನ್ನು ಪ್ರತಿನಿಧಿಸುತ್ತಿದ್ದಾರೆ ಮತ್ತು ಗಮನಾರ್ಹ ಮುಸ್ಲಿಂ ಮತಗಳನ್ನು ಹೊಂದಿರುವ ರಾಮನಾಥಪುರದಿಂದ ನವಸ್ಕನಿ ಅವರನ್ನು ಸೋಲಿಸಲು ಸಾಧ್ಯವಾದರೆ, ಅದು ಇಡೀ ದಕ್ಷಿಣ ಭಾರತದ ರಾಜ್ಯಗಳಿಗೆ ಸಂದೇಶವನ್ನು ನೀಡುತ್ತದೆ. ಬಿಜೆಪಿಯನ್ನು ಬೆಂಬಲಿಸಲು ಹಿಂದೂಗಳು ಮತ ಬ್ಯಾಂಕ್ ಆಗಿ ಸಂಘಟಿತವಾದರೆ ಏನು ಬೇಕಾದರೂ ಸಾಧ್ಯ ಎಂಬುದು ಈ ಮೂಲಕ ಸಾಬೀತು ಪಡಿಸಿದಂತಾಗುತ್ತದೆ.
2024 ರ ಲೋಕಸಭೆ ಚುನಾವಣೆಯಲ್ಲಿ ದಕ್ಷಿಣ ಭಾರತದ ರಾಜ್ಯಗಳಿಂದ ಬಿಜೆಪಿ 50 ಸ್ಥಾನಗಳನ್ನು ಮೀರಬೇಕು ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಟಾರ್ಗೆಟ್ ನೀಡಿದ್ದಾರೆ. ಆಡಳಿತ ವಿರೋಧಿ ಅಂಶದಿಂದಾಗಿ ಉತ್ತರದ ಕೆಲವು ರಾಜ್ಯಗಳಲ್ಲಿ ಪಕ್ಷದ ಸೋಲಿನ ಸಂಭವನೀಯತೆಯನ್ನು ಸಮತೋಲನಗೊಳಿಸುವ ತಂತ್ರವಾಗಿ ಈ ಗುರಿಯನ್ನು ನೋಡಲಾಗುತ್ತಿದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ನಾಳೆ 6 ಪಥ ಸುರಂಗಕ್ಕೆ ಪ್ರಧಾನಿ ಮೋದಿ ಶಂಕು, ವನ್ಯಜೀವಿಗಳಿಗೂ ಇಲ್ಲ ಕುತ್ತು!
ಆದರೆ, ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್‌ನಿಂದ ಚುನಾಯಿತರಾದ ನವಾಸ್ ಕನಿ, ರಾಮೇಶ್ವರವು ಕಾಶಿಯ ನಂತರ ಹಿಂದೂಗಳಿಗೆ ಹೆಚ್ಚಿನ ಧಾರ್ಮಿಕ ಮಹತ್ವವನ್ನು ಹೊಂದಿದೆ. ಹೀಗಾಗಿ ಮೋದಿ ಅವರು ಈ ಕ್ಷೇತ್ರದಿಂದ ಸ್ಪರ್ಧಿಲು ಸಂಭಾವ್ಯ ಆಯ್ಕೆ ಮಾಡಿರಬಹುದು. ಆದರೆ, ಇಲ್ಲಿನ ಪರಿಸ್ಥಿತಿಯೇ ಬೇರೆ, ಪ್ರಧಾನಿ ನರೇಂದ್ರ ಮೋದಿ ಇಲ್ಲಿ ಸ್ಪರ್ಧಿಸಿದರೂ ಅವರ ವಿರುದ್ಧ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್‌ನಿಂದ ನಾನೇ ಗೆಲ್ಲುತ್ತೇನೆ ಎಂದು ನವಾಸ್ ಕನಿ ಹೇಳಿದ್ದಾರೆ.
ಇದನ್ನೂ ಓದಿ: BSNL ಪುನರುಜ್ಜೀವ, ಬೆಳವಣಿಗೆಗೆ ಕೇಂದ್ರ ಸರ್ಕಾರ ಬದ್ಧ; ಸಂಸ್ಥೆ ಈಗ ಲಾಭದಲ್ಲಿದೆ: ಅಶ್ವಿನಿ ವೈಷ್ಣವ್