
ಭಾರತದ ಪ್ರತಿದಾಳಿಗೆ ಬೆದರಿ ಪಾಕ್ ಸಚಿವನ ಪುಡಿ ರೌಡಿ ಹೇಳಿಕೆ
ಪೆಹಲ್ಗಾಂ ದಾಳಿಗೆ ಭಾರತ ಪ್ರತೀಕಾರ ತೀರಿಸಲು ಸಜ್ಜಾಗುತ್ತಿದೆ. ಸಿಂಧೂ ನದಿ ಒಪ್ಪಂದ ರದ್ದು ಮಾಡಲಾಗಿದೆ. ಇದರ ಬೆನ್ನಲ್ಲೇ ಪಾಕಿಸ್ತಾನ ಕಂಗಾಲಾಗಿದೆ. ದಿಕ್ಕು ತೋಚದ, ಅಣು ಬಾಂಬ್, ಸಿಂದೂ ನದಿಯಲ್ಲಿ ನೆತ್ತರು ಸೇರಿದಂತೆ ಹಲವು ಬೆದರಿಕೆ ತಂತ್ರವನ್ನು ಪ್ರಯೋಗಿಸುತ್ತಿದೆ.
ಭಾರತ ಹಾಗೂ ಪಾಕಿಸ್ತಾನ ನಡುವಿನ ಸಂಬಂಧ ಸಂಪೂರ್ಣ ಕಟ್ ಆಗಿದೆ. ಪೆಹಲ್ಗಾಂ ದಾಳಿಯಲ್ಲಿ ಅಮಾಯಕರ ಜೀವ ಬಲಿ ತೆಗೆದ ಉಗ್ರರಿಗೆ ಪಾಠ ಕಲಿಸಲು ಭಾರತ ಮುಂದಾಗಿದೆ. ಈ ಉಗ್ರರು ಪಾಕಿಸ್ತಾನ ಸೇನಾ ಬೆಂಬಲದಲ್ಲೇ ದಾಳಿ ನಡೆಸಿದ್ದಾರೆ ಅನ್ನೋದು ಬಹಿರಂಗವಾಗಿದೆ. ಇತ್ತ ಸಿಂಧೂ ನದಿ ಒಪ್ಪಂದವನ್ನು ಭಾರತ ಅಂತ್ಯಗೊಳಿಸಿದೆ. ಇದೀಗ ಪಾಕಿಸ್ತಾನ ಬಾಯಿ ಮಾತಿನಲ್ಲಿ ಭಾರಿ ಕೊಚ್ಚಿಕೊಳ್ಳುತ್ತಿದೆ. ಬೆದರಿಕೆ ಹಾಕುತ್ತಿದೆ. ಆದರೆ ಒಳಗೊಳಗೆ ವಿಲವಿಲ ಒದ್ದಾಡುತ್ತಿದೆ.