Asianet Suvarna News Asianet Suvarna News

ಮೂಡಿತು ಭರವಸೆ; ಡಿಸಂಬರ್ ಅಂತ್ಯಕ್ಕೆ ಕೈ ಸೇರಲಿದೆ ಕೋವಿಡ್ ಲಸಿಕೆ?

ಮಹಾಮಾರಿ ಕೋವಿಡ್‌ಗೆ ದೇಶದಲ್ಲಿ ಲಸಿಕೆ ಸಿದ್ಧವಾಗುತ್ತಿದೆ.  ಡಿಸಂಬರ್ ತಿಂಗಳ ಅಂತ್ಯಕ್ಕೆ ಲಸಿಕೆ ಕೈ ಸೇರಲಿದೆ ಎಂದು ಸೆರಂ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಮುಖ್ಯಸ್ಥ ಆದರ್ ಪುನಾವಾಲಾ ಭರವಸೆ ನೀಡಿದ್ದಾರೆ. 

ಬೆಂಗಳೂರು (ನ. 02): ಮಹಾಮಾರಿ ಕೋವಿಡ್‌ಗೆ ದೇಶದಲ್ಲಿ ಲಸಿಕೆ ಸಿದ್ಧವಾಗುತ್ತಿದೆ.  ಡಿಸಂಬರ್ ತಿಂಗಳ ಅಂತ್ಯಕ್ಕೆ ಲಸಿಕೆ ಕೈ ಸೇರಲಿದೆ ಎಂದು ಸೆರಂ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಮುಖ್ಯಸ್ಥ ಆದರ್ ಪುನಾವಾಲಾ ಭರವಸೆ ನೀಡಿದ್ದಾರೆ. 

ಕೊರೊನಾ ಸೋಂಕು ಇಳಿಕೆಯಾದರೂ ICU ದಾಖಲಾತಿ ಹೆಚ್ಚಾಗುತ್ತಿರುವುದೇಕೆ?

ಬ್ರಿಟನ್‌ನ ಆಕ್ಸ್‌ಫರ್ಡ್‌ ವಿವಿ ಹಾಗೂ ಆಸ್ಟ್ರಾಜೆನೆಕಾ ಕಂಪನಿ ಒಗ್ಗೂಡಿ ಕೋವಿಡ್‌ಶೀಲ್ಡ್ ಎಂಬ ಹೆಸರಿನಲ್ಲಿ ಲಸಿಕೆ ಅಭಿವೃದ್ಧಿಪಡಿಸುತ್ತಿವೆ. ಭಾರತದಲ್ಲಿ ಪ್ರಯೋಗಗಳು ಡಿಸೆಂಬರ್‌ ಅಂತ್ಯದಲ್ಲಿ ಪೂರ್ಣಗೊಳ್ಳಲಿದ್ದು, ಜನವರಿಯಲ್ಲಿ ನಾವು ಲೈಸೆನ್ಸ್‌ಗೆ ಅರ್ಜಿ ಸಲ್ಲಿಸಬಹುದು. ಆದರೆ ಬ್ರಿಟನ್‌ನಲ್ಲಿ ಈಗಾಗಲೇ ಮೂರನೇ ಹಂತದ ಪರೀಕ್ಷೆ ಅಂತಿಮ ಹಂತಕ್ಕೆ ಬಂದಿದೆ. ಹೀಗಾಗಿ ಅಲ್ಲಿ ನಡೆಸಿದ ಪರೀಕ್ಷೆಯಲ್ಲಿ ಕೋವಿಶೀಲ್ಡ್‌ ಸುರಕ್ಷಿತವಾಗಿದೆ ಎಂದು ತಿಳಿದುಬಂದರೆ ಅದನ್ನು ಭಾರತೀಯರಿಗೂ ನೀಡಲು ಅನುಮತಿ ಕೋರಿ ಡಿಸೆಂಬರ್‌ನಲ್ಲೇ ತುರ್ತು ಲೈಸೆನ್ಸ್‌ಗೆ ಅರ್ಜಿ ಸಲ್ಲಿಸಲಾಗುವುದು ಎಂದು ಆದರ್ ಪುನಾವಾಲಾ ಭರವಸೆ ನೀಡಿದ್ದಾರೆ. 

 

Video Top Stories