Suvarna Focus: ಅಲ್ಲಿ ಎನ್ಕೌಂಟರ್.. ಇಲ್ಲಿ ಬುಲ್ಡೋಜರ್.. ಮಾಫಿಯಾ ಕ್ರಿಮಿಗಳಿಗೆ ಯೋಗಿಯೇ ಡೇಂಜರ್..!

ಉತ್ತರ ಪ್ರದೇಶದಲ್ಲಿ  ಕ್ರಿಮಿನಲ್‌ಗಳಿಗೆ ಒಂದು ಕಡೆ ಎನ್‌ಕೌಂಟರ್‌ ಹಾಗೂ ಮತ್ತೊಂದೆಡೆ ಬುಲ್ಡೋಜರ್‌ ಶಾಕ್‌ ನೀಡಿರುವ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಮಾಫಿಯಾ ಕ್ರಿಮಿಗಳನ್ನು ಬುಡಸಮೇತ ಕಿತ್ತುಹಾಕಲು ಮುಂದಾಗಿದ್ದಾರೆ.

First Published Mar 2, 2023, 3:47 PM IST | Last Updated Mar 2, 2023, 3:47 PM IST

ಬೆಂಗಳೂರು (ಮಾ.02): ದೇಶದ ಅತಿದೊಡ್ಡ ರಾಜ್ಯವಾಘಗಿರುವ ಉತ್ತರ ಪ್ರದೇಶದಲ್ಲಿ ಮತ್ತೆ ಬುಲ್ಡೋಜರ್ ಬಾಬಾ ಘರ್ಜನೆ ಶುರುವಾಗಿದೆ. ಕ್ರಿಮಿನಲ್‌ಗಳು ಹಾಗೂ ಗ್ಯಾಂಗ್‌ಸ್ಟರ್‌ಗಳ ಮನೆಗಳನ್ನು ಬುಲ್ಡೋಜರ್ನಿಂದ ಒಡೆಸಿ ಪುಡಿ ಪುಡಿ ಮಾಡಲಾಗುತ್ತಿದೆ. ಕ್ರಿಮಿನಲ್‌ಗಳಿಗೆ ಒಂದು ಕಡೆ ಎನ್‌ಕೌಂಟರ್‌ ಹಾಗೂ ಮತ್ತೊಂದೆಡೆ ಬುಲ್ಡೋಜರ್‌ ಶಾಕ್‌ ನೀಡಿರುವ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಮಾಫಿಯಾ ಕ್ರಿಮಿಗಳನ್ನು ಬುಡಸಮೇತ ಕಿತ್ತುಹಾಕಲು ಮುಂದಾಗಿದ್ದಾರೆ.

ಉತ್ತರ ಪ್ರದೇಶದಲ್ಲಿ ಮತ್ತೆ ಬುಲ್ಡೋಜರ್ ಘರ್ಜಿಸುತ್ತಿವೆ. ಗುಂಡಿನ ಸದ್ದು ಕಿವಿಗೆ ಅಪ್ಪಳಿಸುತ್ತಿವೆ. ಇಡೀ ರಾಜ್ಯದಲ್ಲಿ ಇರುವ ಕ್ರೈಂ ಮತ್ತು ರೌಡಿಸಂ ಮಾಫಿಯಾವನ್ನು ಮಣ್ಣು ಮಾಡ್ತೀನಿ ಅಂತ  ಮಹಾಶಪಥ ಮಾಡಿರುವ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಈಗ ತಮ್ಮ ಅಸಲಿ ಆಟ ಶುರು ಮಾಡಿದ್ದಾರೆ. ಯಾವ ಜಾಗದಲ್ಲಿ ಉಮೇಶ್ ಪಾಲ್  ಹತ್ಯೆ ನಡೆದಿದೆಯೋ ಆ ಜಾಗದಿಂದ ಜಸ್ಟ್ 400 ಮೀಟರ್ ದೂರದಲ್ಲೇ, 18 ವರ್ಷಗಳ ಹಿಂದೆ, ರಾಜ್ ಪಾಲ್ ಮರ್ಡರ್ ಆಗಿತ್ತು. ಹಾಗಾದರೆ, 2005ರ  ಜನವರಿ 20ರಂದು ನಡೆದ ಬಹುಜನ ಸಮಾಜ ಪಕ್ಷ ಶಾಸಕ ರಾಜ್ ಪಾಲ್‌ ಅವರ ದಾರುಣ ಹತ್ಯೆ ನಡೆದಿತ್ತು.

ಉಮೇಶ್ ಪಾಲ್ ಹತ್ಯೆ ಮಾಡಿದದ್ದ ಆರೋಪಿ ಆಪ್ತನ ಮನೆ ಮೇಲೆ ಬುಲ್ಡೋಡರ್ ಹತ್ತಿಸಿದ ಯೋಗಿ ಸರ್ಕಾರ!

ಯೋಗಿ ಆದಿತ್ಯನಾಥ್ ಗುಡುಗಿಗೆ, ಉತ್ತರ ಪ್ರದೇಶದ ಪುಢಾರಿಗಳು, ರೌಡಿಗಳು, ರಕ್ತಪಿಪಾಸುಗಳು ಕಂಗೆಟ್ಟು ಕೂತಿದ್ದಾರೆ. ಯೋಗಿಯಿಂದ ಕಾಪಾಡೋರು ಯಾರಿದ್ದಾರೆ ಅನ್ನೋ ಪ್ರಶ್ನೆಯ ಹುಡುಕಾಟದಲ್ಲಿ ಅವರೆಲ್ಲಾ ಬ್ಯುಸಿಯಾಗಿದಾರೆ. ಸಿಎಂ ಯೋಗಿ ಆದಿತ್ಯನಾಥ ಒಮ್ಮೆ ಶಪಥ ಮಾಡಿದರೆ ರೌಡಿಗಳು, ಗ್ಯಾಂಗ್ ಸ್ಟರ್‌ಗಳ ಎದೆಯಲ್ಲಿ ನಡುಕ ಹುಟ್ಟುತ್ತದೆ. ಈಗ ಮಾಫಿಯಾನಾ ಮಟ್ಟ ಹಾಕೋಕೆ ದಿಟ್ಟ ಹೆಜ್ಜೆ ಇಟ್ಟಿರುವ ಯೋಗಿ, ಹಂತಕರಿಗೆ ಎನ್ಕೌಂಟರ್ ಮೂಲಕ ನಡುಕ ಹುಟ್ಟಿಸಿದ್ದಾರೆ. ಮಾಫಿಯಾಗಳ ವಿರುದ್ಧ ಕ್ರಮಕೈಕೊಳ್ಳಲು ಉತ್ತರ ಪ್ರದೇಶ ಸರ್ಕಾರ ಪೊಲೀಸರಿಗೆ ಫ್ರೀ ಹ್ಯಾಂಡ್ ಕೊಟ್ಟಿದೆ. ಇದೇ ವೇಳೆ ಎನ್‌ಕೌಂಟರ್ ಭೀತಿಗೆ ಯುಪಿ ಗ್ಯಾಂಗ್‌ ಸ್ಟರ್ ನ್ಯಾಯಾಲಯ ಮೊರೆ ಹೋಗಿದ್ದಾನೆ. 

Video Top Stories