ಉಮೇಶ್ ಪಾಲ್ ಹತ್ಯೆ ಮಾಡಿದದ್ದ ಆರೋಪಿ ಆಪ್ತನ ಮನೆ ಮೇಲೆ ಬುಲ್ಡೋಡರ್ ಹತ್ತಿಸಿದ ಯೋಗಿ ಸರ್ಕಾರ!
ಸರ್ಕಾರದ ಘೋಷಣೆ ಬೆನ್ನಲ್ಲೇ ಮುಷ್ಕರ ಕೈಬಿಟ್ಟು ಕರ್ತವ್ಯಕ್ಕೆ ಹಾಜರಾದ ಸರ್ಕಾರಿ ನೌಕರರು, ಮಲೆಮಹಾದೇಶ್ವರ ಬೆಟ್ಟದಲ್ಲಿ ಬಿಜೆಪಿ ಯಾತ್ರೆಗೆ ಜೆಪಿ ನಡ್ಡಾ ಚಾಲನೆ, ರಮೇಶ್ ಜಾರಕಿಹೊಳಿ ವಿರುದ್ಧ ಲಕ್ಷ್ಮಿ ಹೆಬ್ಬಾಳ್ಕರ್ ವಾಗ್ದಾಳಿ ಸೇರಿದಂತೆ ಇಂದಿನ ಸುದ್ದಿಗಳ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.
ವಕೀಲ ಉಮೇಶ್ ಪಾಲ್‌ನ್ನು ಹಾಡಹಗಲೇ ಉತ್ತರ ಪ್ರದೇಶದಲ್ಲಿ ಗುಂಡಿನ ದಾಳಿ ಮೂಲಕ ಹತ್ಯೆ ಮಾಡಲಾಗಿತ್ತು. ಮಾರುಕಟ್ಟೆ ನಡುವೆ ಈ ಭೀಕರ ಕೊಲೆ ನಡೆದಿತ್ತು. ಇದೀಗ ಉಮೇಶ್ ಪಾಲ್ ಹತ್ಯೆ ಮಾಡಿದ್ದ ಆರೋಪಿ ಆಪ್ತನ ಮನೆ ಮೇಲೆ ಯೋಗಿ ಸರ್ಕಾರ ಬುಲ್ಡೋಜರ್ ಹತ್ತಿಸಿದೆ. 2005ರಲ್ಲಿ ಶಾಸಕ ರಾಜ್ ಪಾಲ್‌ನನ್ನು ಹತ್ಯೆ ಮಾಡಲಾಗಿತ್ತು. ಸೋಲಿಗೆ ತಿರುಗೇಟು ನೀಡಲು ಅಭ್ಯರ್ಥಿ ಅಶ್ರಫ್ ಅಹಮ್ಮದ್ ಹತ್ಯೆ ಮಾಡಲಾಗಿತ್ತು. ಈ ಕೊಲೆ ಪ್ರಕರಣದಲ್ಲಿ ಸಾಕ್ಷಿಯಾಗಿದ್ದ ಉಮೇಶ್ ಪಾಲ್‌ನನ್ನು ಇದೀಗ ಹಾಡಹಗಲೇ ಹತ್ಯೆ ಮಾಡಲಾಗಿತ್ತು.ಈ ಘಟನೆ ಉತ್ತರ ಪ್ರದೇಶ ಮಾತ್ರವಲ್ಲ ಭಾರತವನ್ನೇ ಬೆಚ್ಚಿ ಬೀಳಿಸಿತ್ತು. ಈ ಕುರಿತು ಅಖಿಲೇಶ್ ಯಾದವ್ ಪ್ರಶ್ನೆಗೆ ಸಿಎಂ ಯೋಗಿ ಆದಿತ್ಯನಾಥ್ ಕೆಂಡಾಮಂಡಲವಾಗಿದ್ದಾರೆ. ಇದರ ಬೆನ್ನಲ್ಲೇ ಕ್ರಿಮಿನಲ್‌ಗಳನ್ನು ಬಿಡುವುದಿಲ್ಲ, ಒಬ್ಬೊಬ್ಬರನ್ನೂ ಹೂತು ಹಾಕುತ್ತೇವೆ ಎಂದು ಯೋಗಿ ತಿರುಗೇಟು ನೀಡಿದ್ದಾರೆ. ಇದರಂತೆ ಕಾರ್ಯಾಚರಣೆ ಆರಂಭಿಸಿದ್ದಾರೆ.