ಏನಿದು ಒಂದು ರಾಷ್ಟ್ರ.. ಒಂದು ಚುನಾವಣೆ..? ವಿಪಕ್ಷಗಳಿಂದ ವಿರೋಧ ಯಾಕೆ?
ಒಂದೇ ಸಲ ಲೋಕಸಭೆ, ವಿಧಾನಸಭೆ ಚುನಾವಣೆ ನಡೆಸುವ ಲೆಕ್ಕಾಚಾರ
ಚುನಾವಣೆ ವೆಚ್ಚವನ್ನೂ ತಗ್ಗಿಸುವ ಉದ್ದೇಶದಿಂದ 1983ರಲ್ಲಿ ಪ್ರಸ್ತಾಪ..!
1983 ರಲ್ಲಿ ಕೇಂದ್ರ ಚುನಾವಣಾ ಆಯೋಗದಿಂದ ಈ ಬಗ್ಗೆ ಪಸ್ತಾವನೆ..!
ಕೇಂದ್ರ ಸರ್ಕಾರದ ದೇಶಕ್ಕೊಂದೇ ಚುನಾವಣೆ ಚಿಂತನೆಗೆ ವಿಪಕ್ಷಗಳು ವಿರೋಧ ವ್ಯಕ್ತಪಡಿಸಿವೆ. ಇದು ಒಕ್ಕೂಟ ವ್ಯವಸ್ಥೆಯ ಕಗ್ಗೊಲೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ರಾಹುಲ್ ಸೇರಿದಂತೆ ಇಂಡಿಯಾ(I.N.D.I.A) ಕೂಟದ ನಾಯಕರು ಸಹ ಇದಕ್ಕೆ ವಿರೋಧವನ್ನು ವ್ಯಕ್ತಪಡಿಸಿದ್ದಾರೆ. ದೇಶಕ್ಕೊಂದೇ ಚುನಾವಣೆ ಬಗ್ಗೆ ಸಚಿವ ಅನುರಾಗ್ ಠಾಕೂರ್ ಸಮರ್ಥನೆ ಮಾಡಿಕೊಂಡಿದ್ದಾರೆ. ಒಂದು ರಾಷ್ಟ್ರ ಒಂದು ತೆರಿಗೆ(One nation one tax) ಪದ್ಧತಿಗೆ ವಿಪಕ್ಷಗಳು ವಿರೋಧಿಸಿದ್ದವು, ಆದ್ರೆ ಇಂದು ದಾಖಲೆ ಪ್ರಮಾಣದಲ್ಲಿ ಜಿಎಸ್‌ಟಿ(GST) ಸಂಗ್ರಹ ಆಗುತ್ತಿದೆ. ಅದೇ ರೀತಿ ದೇಶಕ್ಕೊಂದೇ ಚುನಾವಣೆ ಬಗ್ಗೆ ಸರ್ಕಾರ ಚಿಂತನೆ ನಡೆಸಿದೆ. ಪ್ರಧಾನಿ ನರೇಂದ್ರ ಮೋದಿ ಕೂಡ ಇದಕ್ಕೆ ಬೆಂಬಲ ನೀಡಿದ್ದಾರೆ ಎಂದು ಹೇಳಿದರು. ಇದೇ ವೇಳೆ ಅವರು ಅವಧಿ ಪೂರ್ವ ಲೋಕಸಭೆ ಚುನಾವಣೆ ವದಂತಿ ತಳ್ಳಿಹಾಕಿದ್ದಾರೆ. ಕೇಂದ್ರ ಸರ್ಕಾರ ಸಂಪೂರ್ಣ ಅವಧಿ ಪೂರೈಸಲಿದೆ ಎಂದ ಅನುರಾಗ್ ಠಾಕೂರ್ ಹೇಳಿದ್ದಾರೆ.
ಇದನ್ನೂ ವೀಕ್ಷಿಸಿ: ದುರಂತದಲ್ಲಿ ಮಡಿದವರ ಕುಟುಂಬಕ್ಕೆ ಪರಿಹಾರ: ಉಸ್ತುವಾರಿ ಸಚಿವರಿಂದಲೇ ಚೆಕ್ ವಿತರಣೆ