Asianet Suvarna News Asianet Suvarna News

ಬದಲಾದ ಬೋಗಿ, ಬದುಕುಳಿಯಿತು ಜೀವ; ಅಪಘಾತ ರೈಲಿನಲ್ಲಿದ್ದ 110 ಕನ್ನಡಿಗರು ಸೇಫ್!

ಕೊರಮಂಡಲ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಅಪಘಾತಗಳೇ ಹೆಚ್ಚು, ಒಂದೇ ನಿಮಿಷದ ಅಂತರದಲ್ಲಿ ನಡೆಯಿತು ಘೋರ ದುರಂತ, ಕನ್ನಡಿಗರು ಸುರಕ್ಷಿತ, ಕಾಂಗ್ರೆಸ್ ಐದು ಗ್ಯಾರೆಂಟಿ ಯೋಜನೆ ಜಾರಿ, ಹತ್ತು ಹಲವು ಪ್ರಶ್ನೆ ಸೇರಿದಂತೆ ಇಂದಿನ ಇಡೀ ದಿನದ ಪ್ರಮುಖ ಸುದ್ದಿಯ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.

ಒಡಿಶಾ ದುರಂತ ನಡೆದ ರೈಲು ನಿಲ್ದಾಣದ ಬಳಿ ಎರಡು ಲೂಪ್ ಲೈನ್ ಇತ್ತು. ಆದರೆ ಈ ಲೂಪ್ ಲೈನ್‌ನಲ್ಲಿ ಎರಡು ಗೂಡ್ಸ್ ರೈಲು ನಿಂತಿತ್ತು. ನಿಂತಿದ್ದ ಗೂಡ್ಸ್ ರೈಲಿಗೆ ಕೊರಮಂಡಲ್ ಡಿಕ್ಕಿ ಹೊಡೆದರೆ, ಕೊರಮಂಡಲ್ ಎಕ್ಸ್‌ಪ್ರೆಸ್ ರೈಲಿಗೆ ಯಶವಂತಪುರ ರೈಲು ಡಿಕ್ಕಿ ಹೊಡೆದಿದೆ. ಇವೆಲ್ಲ ಒಂದೇ ನಿಮಿಷದಲ್ಲಿ ನಡೆದುಹೋಗಿದೆ. ಈ ಅಪಘಾತವಾದ ರೈಲಿನಲ್ಲಿದ್ದ ಕನ್ನಡಿಗರು ಸುರಕ್ಷಿತವಾಗಿದ್ದಾರೆ. ಒಡಿಶಾದ ಜೈನ ತೀರ್ಥಯಾತ್ರೆಗೆ ಹೊರಟಿದ್ದ 110 ಕನ್ನಡಿಗರು ಸೇಫ್ ಆಗಿದ್ದಾರೆ. ಯಶವಂತಪುರ- ಹೌರ ರೈಲಿನಲ್ಲಿ ಪ್ರಯಾಣ ಮಾಡಿದ್ದ 110 ಕನ್ನಡಿಗರು ರಿಸರ್ವೇಶನ್ ವಿಚಾರದಲ್ಲಿ ಬೇರೆ ಬೋಗಿಯಲ್ಲಿ ಪ್ರಯಾಣ ಮುಂದುವರಿಸಿದ್ದರು. ಇದರಿಂದ ಕನ್ನಡಿಗರು ಸುರಕ್ಷಿತವಾಗಿದ್ದಾರೆ.