Asianet Suvarna News Asianet Suvarna News

ಫಿಂಗರ್ ಎಂಟಲ್ಲ, ರಾಹುಲ್ ಗಾಂಧಿ ಪ್ರಕಾರ 'ಫಿಂಗರ್ 4' ನಮ್ಮ ಗಡಿ, ಪೇಚಿಗೆ ಸಿಲುಕಿದ ರಾಗಾ..!

ಲಡಾಖ್‌ ಗಡಿಯಲ್ಲಿ ಕಳೆದ 9 ತಿಂಗಳಿಂದ ಉದ್ಭವಿಸಿದ್ದ ತ್ವೇಷಮಯ ಪರಿಸ್ಥಿತಿಯನ್ನು ತಿಳಿಗೊಳಿಸಲು ಭಾರತ ಹಾಗೂ ಚೀನಾ ತಮ್ಮ ಸೇನಾ ಪಡೆಗಳನ್ನು ವಾಪಸ್‌ ಕರೆಸಿಕೊಳ್ಳಲು ನಿರ್ಧರಿಸಿದ ಬೆನ್ನಲ್ಲೇ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಮಾಡಿದ ಆರೋಪವೊಂದು ಅವರನ್ನು ಇಕ್ಕಟ್ಟಿಗೆ ಸಿಲುಕಿಸಿದೆ. 

ನವದೆಹಲಿ(ಫೆ. 14): ಲಡಾಖ್‌ ಗಡಿಯಲ್ಲಿ ಕಳೆದ 9 ತಿಂಗಳಿಂದ ಉದ್ಭವಿಸಿದ್ದ ತ್ವೇಷಮಯ ಪರಿಸ್ಥಿತಿಯನ್ನು ತಿಳಿಗೊಳಿಸಲು ಭಾರತ ಹಾಗೂ ಚೀನಾ ತಮ್ಮ ಸೇನಾ ಪಡೆಗಳನ್ನು ವಾಪಸ್‌ ಕರೆಸಿಕೊಳ್ಳಲು ನಿರ್ಧರಿಸಿದ ಬೆನ್ನಲ್ಲೇ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಮಾಡಿದ ಆರೋಪವೊಂದು ಅವರನ್ನು ಇಕ್ಕಟ್ಟಿಗೆ ಸಿಲುಕಿಸಿದೆ. 

ಮೀಸಲಾತಿ ಹೋರಾಟ, ಸಿದ್ದು - ಬಿಎಸ್‌ವೈಗೆ ಪ್ರಾಣ ಸಂಕಟ..!

ಚೀನಾ ಬಿಕ್ಕಟ್ಟಿನ ಕುರಿತು ರಕ್ಷಣಾ ಸಚಿವ ರಾಜನಾಥ ಸಿಂಗ್‌ ಅವರು ಹೇಡಿ ರೀತಿ ಹೇಳಿಕೆ ನೀಡಿದ್ದಾರೆ. ನರೇಂದ್ರ ಮೋದಿ ಅವರೇಕೆ ಸಂಸತ್ತಿನಲ್ಲಿ ಹೇಳಿಕೆ ನೀಡಲಿಲ್ಲ? ನಾನು ಚೀನಾಕ್ಕೆ ಭಾರತದ ಜಾಗ ಬಿಟ್ಟುಕೊಟ್ಟಿದ್ದೇನೆ ಎಂದು ಮೋದಿ ಅವರು ಸತ್ಯ ಹೇಳಬೇಕಿತ್ತು. ಪ್ಯಾಂಗಾಂಗ್‌ ಸರೋವರದ ಫಿಂಗರ್‌ 4ವರೆಗೂ ನಮ್ಮದೇ ಜಾಗ. ಅಲ್ಲಿ ನಮ್ಮ ಪಡೆಗಳು ಇರುತ್ತಿದ್ದವು. ಈಗ ಫಿಂಗರ್‌ 4ನಿಂದ ಫಿಂಗರ್‌ 3ಕ್ಕೆ ಪಡೆಗಳನ್ನು ವಾಪಸ್‌ ಕರೆಸಿಕೊಳ್ಳಲಾಗಿದೆ. ಈ ಜಾಗವನ್ನು ಮೋದಿ ಅವರು ಚೀನಾಕ್ಕೆ ಬಿಟ್ಟುಕೊಟ್ಟಿದ್ದೇಕೆ? ಇದಕ್ಕೆ ಅವರು ಉತ್ತರ ನೀಡಬೇಕು ಎಂದು ರಾಹುಲ್ ಗಾಂಧಿ ಹೇಳಿ ಪೇಚಿಗೆ ಸಿಲುಕಿಕೊಂಡರು.