ಭಿನ್ನಾಭಿಪ್ರಾಯವನ್ನು ಭಾರತ-ಕೆನಡಾ ಶೀಘ್ರ ಪರಿಹರಿಸಿಕೊಳ್ಳಬೇಕು: ಮೊಹಮದ್‌ ಎಲ್‌ಬರದಾಯ್‌

ಏಷ್ಯಾನೆಟ್‌ ನ್ಯೂಸ್‌ನ ಮ್ಯಾನ್‌ ಆಫ್‌ ಪೀಸ್‌ ಕಾರ್ಯಕ್ರಮದಲ್ಲಿ ಮಾತನಾಡಿದ 2005ರ ನೋಬೆಲ್‌ ಶಾಂತಿ ಪ್ರಶಸ್ತಿ ವಿಜೇತ ಮೊಹಮದ್‌ ಎಲ್‌ ಬರದಾಯ್‌, ಭಾರತ-ಕೆನಡಾ ದೇಶಗಳಿಗೆ ತಮ್ಮ ಕಿವಿಮಾತು ತಿಳಿಸಿದ್ದಾರೆ.

First Published Sep 28, 2023, 6:28 PM IST | Last Updated Sep 28, 2023, 6:28 PM IST

ಬೆಂಗಳೂರು (ಸೆ.28): ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತ ಮತ್ತು ಈಜಿಪ್ಟ್‌ನ ಮಾಜಿ ಉಪಾಧ್ಯಕ್ಷ ಮೊಹಮದ್ ಎಲ್‌ಬರದಾಯ್‌ ಏಷ್ಯಾನೆಟ್ ನ್ಯೂಸ್‌ನ ಮ್ಯಾನ್‌ ಆಫ್‌ ಪೀಸ್‌ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ವೇಳೆ ಮಾತನಾಡುತ್ತಾ,  ಭಾರತ-ಕೆನಡಾ ಭಿನ್ನಾಭಿಪ್ರಾಯವನ್ನು ಆದಷ್ಟು ಬೇಗ ಪರಿಹರಿಸಬೇಕು ಮತ್ತು ಕೆನಡಾ ಭಯೋತ್ಪಾದನೆಯನ್ನು ಹೆಚ್ಚು ಆಕ್ರಮಣಕಾರಿಯಾಗಿ ಕಡಿವಾಣ ಹಾಕಬೇಕಿದೆ ಎಂದು ಹೇಳಿದ್ದಾರೆ. ನೀವು ಜಗತ್ತಿನಲ್ಲಿ ಎಲ್ಲಿಗೆ ಹೋದರೂ, ನೀವು ಶ್ರಮಶೀಲ ಮತ್ತು ಬೌದ್ಧಿಕ ಭಾರತೀಯರನ್ನು ಕಾಣುತ್ತೀರಿ ಎಂದು ಇದೇ ವೇಳೆ ತಿಳಿಸಿದ್ದಾರೆ.

ಇದೇ ವೇಳೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಕಾರ್ಯನಿರ್ವಹಣೆಯ ಬಗ್ಗೆಯೂ ಅವರು ಮಾತನಾಡಿದ್ದಾರೆ. ಜಗತ್ತಿನ ಏಳನೇ ಒಂದು ಭಾಗದಷ್ಟು ಜನಸಂಖ್ಯೆಯನ್ನು ಭಾರತವೇ ಹೊಂದಿದೆ. ಹೀಗಿರುವಾಗ ಭಾರತವೇ ಇಲ್ಲದೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಹೇಗೆ ಇರಲು ಸಾಧ್ಯ ಎಂದು ಅವರು ಪ್ರಶ್ನೆ ಮಾಡಿದೆ. 

ರಾಜತಾಂತ್ರಿಕ ಮುನಿಸು..ಟ್ರುಡೋ ಸಾಮ್ರಾಜ್ಯಕ್ಕೆ ನಷ್ಟ: 6 ವರ್ಷಗಳಲ್ಲಿ 9 ಸುತ್ತಿನ ಮಾತುಕತೆ ವಿಫಲ..!

ಶಾಂತಿಗೆ ಜಾಗತಿಕ ಸಹಕಾರವೊಂದೇ ದಾರಿ ಎಂದಿರುವ ಎಲ್‌ಬರದಾಯ್‌, ಇತ್ತೀಚಿನ ಹಲವು ಜಾಗತಿಕ ವಿದ್ಯಮಾನಗಳ ಬಗ್ಗೆ ತಮ್ಮ ಅಭಿಪ್ರಾಯವನ್ನು ಅವರು ತಿಳಿಸಿದ್ದಾರೆ.