ಭಾರತವನ್ನು ಇಸ್ಲಾಮೀಕರಣ ಮಾಡಲು ಹೊರಟ PFI ವಿರುದ್ಧ NIA ದಾಳಿ, 45 ಶಂಕಿತರು ಅರೆಸ್ಟ್!

2047ರ ಹೊತ್ತಿಗೆ ಇಸ್ಲಾಮ್ ದೇಶವನ್ನಾಗಿ ಮಾಡಲು ಸಂಚು ರೂಪಿಸಿದ್ದ ಪಿಎಫ್ಐಗೆ ಇದೀಗ ಒಂದರ ಮೇಲೊಂದರಂತೆ ಶಾಕ್ ಎದುರಾಗಿದೆ. ಇದು 15 ರಾಜ್ಯಗಳಲ್ಲಿ 93 ಕಡೆಗಳಲ್ಲಿ ಪಿಎಫ್ಐ ಮೇಲೆ   NIA ದಾಳಿ ಮಾಡಿದೆ. ಇನ್ನು ರಾಜ್ಯ ರಾಜಕೀಯದಲ್ಲಿ ಪೋಸ್ಟರ್ ಬಡಿದಾಟ ಸೇರಿದಂತೆ ಇಂದಿನ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.

Share this Video
  • FB
  • Linkdin
  • Whatsapp

ಪ್ರಧಾನಿ ನರೇದ್ರ ಮೋದಿ ಬಿಹಾರದ ಪಾಟ್ನಾ ಭೇಟಿಗೂ ಮೊದಲು ಪಿಎಫ್ಐ ಕಚೇರಿ ಮೇಲೆ ದಾಳಿ ನಡೆದಿತ್ತು. ಈ ದಾಳಿಯಲ್ಲಿ ಭಾರತವನ್ನು 2047ರ ವೇಳೆ ಸಂಪೂರ್ಣವಾಗಿ ಇಸ್ಲಾಮ್ ರಾಜ್ಯವನ್ನಾಗಿ ಮಾಡುವುದು ಹೇಗೆ ಅನ್ನೋ ಕುರಿತು ವಿವರವಾಗಿ ಹೇಳಲಾಗಿತ್ತು. ದಾಳಿ ಬೆನ್ನಲ್ಲೇ ಪಿಎಫ್ಐ ಸಂಘಟನೆ ಮೇಲೆ ರಾಷ್ಟ್ರೀಯ ತನಿಖಾ ದಳ ಹದ್ದಿನ ಕಣ್ಣಿಟ್ಟಿತ್ತು. ಹಲವು ವರ್ಷಗಳ ಹಿಂದೆ ನಡೆದ ಬಿಹಾರ ದಾಳಿ ಬಳಿಕ ಪಿಎಫ್ಐ ಮೇಲಿನ ತನಿಖೆ ಚುರುಕುಗೊಂಡಿತ್ತು. ಇದರ ಭಾಗವಾಗಿ ಇದೀಗ NIA ಇಂದು 15 ರಾಜ್ಯಗಳಲ್ಲಿ ದಾಳಿ ನಡೆಸಿ 45 ಶಂಕಿತರನ್ನು ಬಂಧಿಸಿದೆ. ದಕ್ಷಿಣ ಕನ್ನಡದ 9 ಕಡೆ ಪಿಎಫ್ಐ ಕಚೇರಿ, ನಾಯಕರ ಕಚೇರಿಗಳ ಮೇಲೆ ರಾಷ್ಟ್ರೀಯ ತನಿಖಾ ದಳ ದಾಳಿ ಮಾಡಿದ್ದರೆ, ಕರ್ನಾಟಕ ರಾಜ್ಯ ಪೊಲೀಸರು 7 ಕಡೆ ದಾಳಿ ನಡೆಸಿದ್ದಾರೆ. ಯಾವ ನಾಯಕರು ಬಂಧನಕ್ಕೊಳಗಾಗಿದ್ದಾರೆ? ಇಲ್ಲಿದೆ ವಿವರ.

Related Video