ಬಿಜೆಪಿ ಟಿಕೆಟ್ ಉಳಿಸಿಕೊಂಡ ಗಾಂಧಿ ಕುಟುಂಬದ ಸೊಸೆ ಮನೇಕಾ ಗಾಂಧಿ, ವರುಣ್‌ಗೆ ಮಿಸ್ ಆಗಿದ್ದೇಕೆ?

100 ಸಂಸದರಿಗೆ ಬಿಜೆಪಿ ಹೈಕಮಾಂಡ್ ನಿರಾಕರಿಸಿದ್ದೇಕೆ?, ಬಿಜೆಪಿಯಿಂದ ಅಂತರ ಕಾಯ್ದುಕೊಂಡ  ವರುಣ್ ಗಾಂಧಿ, ವಾರಣಾಸಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಜಯ್ ರೈ ಪ್ರಚಾರ ಆರಂಭ ಸೇರಿದಂತೆ ಇಂದಿನ ಇಡೀ ದಿನದ ಪ್ರಮುಖ ಸುದ್ದಿ ನ್ಯೂಸ್ ಹವರ್ ಇಲ್ಲಿದೆ.
 

First Published Mar 25, 2024, 11:23 PM IST | Last Updated Mar 25, 2024, 11:23 PM IST

ಸಂಜಯ್ ಗಾಂಧಿ ನಿಧನದ ಬಳಿಕ ಗಾಂಧಿ ಕುಟುಂಬ ಮನೆಯಿಂದ ಹೊರಬಿದ್ದ ಮನೇಕಾ ಗಾಂಧಿ, ಸಂಪೂರ್ಣ ರಾಜಕೀಯ ಪ್ರವೇಶ ಮಾಡಿದ್ದರು. ಅಮೇಥಿ ಕ್ಷೇತ್ರದಲ್ಲಿ ಓಡಾಡಲು ಆರಂಭಿಸಿದ ಮನೇಕಾ ಗಾಂಧಿ, ವಿಪಿ ಸಿಂಗ್ ಜೊತೆ ಸೇರಿ ಚುನಾವಣೆಗೆ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಬಳಿಕ ಬಿಜೆಪಿಯಿಂದ ಗೆದ್ದ ಮನೇಕಾ ಗಾಂಧಿ ಸಂಸದೆಯಾಗಿ ಆಯ್ಕೆಯಾಗಿದ್ದಾರೆ. ಇತ್ತ ವರುಣ್ ಗಾಂಧಿ ಕೂಡ ಬಿಜೆಪಿ ಮೂಲಕ ಸಂಸದರಾಗಿ ಆಯ್ಕೆಯಾಗಿ ರಾಜಕೀಯ ಬದುಕು ಆರಂಭಿಸಿದ್ದರು. ಆದರೆ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ವರುಣ್ ಗಾಂಧಿಗೆ ಟಿಕೆಟ್ ನಿರಾಕರಿಸಲಾಗಿದೆ. ತಾಯಿ ಮನೇಕಾ ಗಾಂಧಿ ಸುಲ್ತಾನಪುರ ಕ್ಷೇತ್ರದಿಂದ ಟಿಕೆಟ್ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ವರುಣ್ ಗಾಂಧಿ ರೀತಿ 5 ಪಟ್ಟಿಯಲ್ಲಿ ಒಟ್ಟು 100 ಹಾಲಿ ಸಂಸದರಿಗೆ ಟಿಕೆಟ್ ಮಿಸ್ ಆಗಿದೆ. ಇದಕ್ಕೆ ಕಾರಣವೇನು?