Asianet Suvarna News Asianet Suvarna News

ದೇವಾಲಯ ಧ್ವಂಸಕ್ಕೆ ಟಾರ್ಗೆಟ್ ಕೊಟ್ಟ ಸಿಎಸ್‌.. ಬೆಚ್ಚಿ ಬೀಳಿಸುವ ಪಟ್ಟಿ!

Sep 14, 2021, 11:40 PM IST

ಬೆಂಗಳೂರು/ಮೈಸೂರು(ಸೆ. 14) ಮೈಸೂರಿನಲ್ಲಿ ದೇವಸ್ಥಾನ ತೆರವು ವಿವಾದಕ್ಕೆ ಸಂಬಂಧಿಸಿದಂತೆ ಕೊನೆಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮೌನ ಮುರಿದಿದ್ದಾರೆ. ಮೈಸೂರಿನಲ್ಲಿ ದೇಗುಲ ತೆರವು ವಿಚಾರಕ್ಕೆ ಸಂಬಂಧಿಸಿದಂತೆ ಕಾರಣ ಕೇಳಿ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ.ಹಿಂದು ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ದೇವಾಲಯ ಧ್ವಂಸ ಮಾಡುವ ಮೊದಲು ಸ್ಥಳೀಯವಾಗಿ ಚರ್ಚೆ ಮಾಡಬೇಕಿತ್ತು ಎಂದು ವಿಪಕ್ಷದ ನಾಯಕರೆ ಹೇಳಿದ್ದಾರೆ.

ದೇವಾಲಯ ಧ್ವಂಸದ ಹಿಂದಿನ ಕಾರಣ ಹೇಳಿದ ಹಿರಿಯ ವಕೀಲ

ಸುಪ್ರೀಂ ಕೋರ್ಟ್ ನೀಡಿದ್ದ ಆದೇಶವೇ ಒಂದು..ರಾಜ್ಯದ ಮುಖ್ಯ ಕಾರ್ಯದರ್ಶಿ ನೀಡಿದ ಆದೇಶವೇ ಒಂದು. ಸಿಎಸ್ ರವಿಕುಮಾರ್  ಹಾಗಾದರೆ ತಪ್ಪು ಮಾಡಿದ್ರಾ? ದೇವಾಲಯ ಧ್ವಂಸ ಪ್ರಕರಣ ಹಲವು ತಿರುವು ಪಡೆದುಕೊಂಡಿದೆ.  ಉಗ್ರ ಸಂಘಟನೆಯ ಜಾಲವನ್ನು ಭೇದಿಸಿರುವ ದೆಹಲಿ ಪೊಲೀಸರು ಪಾಕಿಸ್ತಾನದಲ್ಲಿ ತರಬೇತಿ ಪಡೆದಿದ್ದ ಇಬ್ಬರು ಸೇರಿದಂತೆ ಆರು ಶಂಕಿತ ಉಗ್ರರನ್ನು ಬಂಧಿಸಿದ್ದಾರೆ. ಇದರಿಂದ  ಮಹಾ ದುರಂತವೊಂದು ತಪ್ಪಿದಂತಾಗಿದೆ. ದಿನದ ಎಲ್ಲ ಸುದ್ದಿ  ನ್ಯೂಸ್ ಅವರ್