Asianet Suvarna News Asianet Suvarna News

News Hour: ಮೇಕ್ ಇನ್ ಇಂಡಿಯಾದ ಮಹತ್ವ ಸಾರಿದ ಮೋದಿ,  ಹೊಸದಾಗಿ ಕಾಣಿಸಿಕೊಂಡ ನೀಲಿ ಶಾಲು

* ಸಂಸತ್‌ನಲ್ಲಿ ಮೇಕ್ ಇನ್ ಇಂಡಿಯಾದ ಅರ್ಥ  ಹೇಳಿದ ಮೋದಿ
* ಕಾಂಗ್ರೆಸ್ ಮೇಲೆ ಪ್ರಧಾನಿ ವಾಗ್ದಾಳಿ
* ಭಾರತದ ವಿರೋಧಿ ಪೋಸ್ಟ್ ಹಾಕಿ ಕ್ಷಮೆ ಕೇಳಿದ ಕೆಎಫ್‌ಸಿ 
*  ಹಿಜಾಬ್, ಕೇಸರಿ ಶಾಲು ಜತೆ  ನೀಲಿ ಶಾಲು! ಮುಗಿಯದ ವಿವಾದ 

First Published Feb 7, 2022, 11:44 PM IST | Last Updated Feb 7, 2022, 11:44 PM IST

ಬೆಂಗಳೂರು(ಫೆ. 07)   ಸಂಸತ್ ನಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ (Narendra Modi) ಯಾವ  ಕಾರಣಕ್ಕೆ ದೇಶ  ಮೇಕ್ ಇನ್ ಇಂಡಿಯಾ (Make In India) ಆಯ್ಕೆ ಮಾಡಿಕೊಂಡಿತು ಎಂಬುದನ್ನು ಬಿಚ್ಚಿಟ್ಟರು. ಪ್ರತ್ಯೇಕ ಕಾಶ್ಮೀರದ (Kashmir)ಕಿಡಿ ಹೊತ್ತಿಸಿದ ಹ್ಯುಂಡೈ, ಕೆಎಫ್‌ಸಿ ಇದೀಗ ದಂಡ ತೆತ್ತಿದೆ. ಭಾರತದಲ್ಲಿ ಬಾಯ್‌ಕಾಟ್ ಅಭಿಯಾನದಿಂದ ಬೆಚ್ಚಿ ಬಿದ್ದ ಹ್ಯುಂಡೈ ಕ್ಷಮೆ ಕೇಳಿ ಭಾರತದ ಸೌರ್ವಭೌಮಕ್ಕೆ ಧಕ್ಕೆಯಾಗಂತೆ ನೋಡಿಕೊಳ್ಳುವುದಾಗಿ ಹೇಳಿತ್ತು. ಇದರ ಬೆನ್ನಲ್ಲೇ ಇದೇ ಕಳೆದ ವರ್ಷ ಕಾಶ್ಮೀರ ವಿಚಾರದಲ್ಲಿ ಮೂಗು ತೂರಿಸಿ ಟ್ವೀಟ್ ಮಾಡಿದ್ದ  ಕೆಎಫ್‌ಸಿ ವರ್ಷದ ಬಳಿಕ ಭಾರತೀಯರಲ್ಲಿ ಕ್ಷಮೆ ಯಾಚಿಸಿದೆ. 

Sexual Harassment : 'ನ್ಯಾಯ ಕೇಳಿದ್ದಕ್ಕೆ ಠಾಣೆಗೆ ಕರೆಸಿ ಕೂರಿಸಿಕೊಂಡರು'

ಕರ್ನಾಟಕದಲ್ಲಿ ಹಿಜಾಬ್ (Hijab) ವಿಚಾರದಲ್ಲಿ  ಹೊತ್ತಿಕೊಂಡ ಗೊಂದಲ ಮುಂದುವರಿದೆ ಇದೆ. ಹದಿನಾಲ್ಕು ಜಿಲ್ಲೆಗಳಿಗೆ ಇದು ವ್ಯಾಪಿಸಿದೆ. ಹಿಜಾಬ್ ಪ್ರಕರಣ ನ್ಯಾಯಾಲಯದಲ್ಲಿ ಇದ್ದರೂ ಬಿಜೆಪಿ (BJP) ಮತ್ತು ಕಾಂಗ್ರೆಸ್ (Congress) ನಾಯಕರ ನಡುವೆ ವಾಕ್ ಸಮರ ಮುಂದುವರಿದಿದೆ.  ಸಂಸದ ಪ್ರತಾಪ್ ಸಿಂಹ ಮತ್ತು ಶಾಸಕ ತನ್ವೀರ್ ಸೇಠ್ ನಡುವೆ ವಾಗ್ವಾದ ನಡೆದಿದೆ  ಇಡೀ ದಿನದ ಸುದ್ದಿ ನ್ಯೂಸ್ ಅವರ್ ನಲ್ಲಿ

 

Video Top Stories