Asianet Suvarna News Asianet Suvarna News

News Hour: ಮೇಕೆದಾಟು ಯಾತ್ರೆ ಮೇಲೆ ಕಾನೂನು ಪ್ರಹಾರ, ಜಿಲ್ಲೆಗಳಲ್ಲಿಯೂ ಕೊರೋನಾ ಸ್ಫೋಟ

* ಕೊರೋನಾ ನಿಯಮ ಇಲ್ಲಿ ಲೆಕ್ಕಕ್ಕೆ ಬರುವುದಿಲ್ಲ
* ಕಾಂಗ್ರೆಸ್ ಪಾದಯಾತ್ರೆ ಬಲು ಜೋರು
* ಎಲ್ಲಾ ಜಿಲ್ಲೆಗಳಲ್ಲಿಯೂ ಏರಿಕೆ ಕಾಣುತ್ತಿರುವ ಕೊರೋನಾ
* ಪಾದಯಾತ್ರೆಯಲ್ಲಿಯೂ ಸೋಂಕು ಸ್ಫೋಟ

ಕೋವಿಡ್ ನಿಯಮ (Coeronavirus) ಉಲ್ಲಂಘಿಸಿ ನಡೆಯುತ್ತಿರುವ ಕಾಂಗ್ರೆಸ್ ನ (Congress) ಮೇಕೆದಾಟು (Mekedatu Padayatra) ಪಾದಯಾತ್ರೆ ವಿರುದ್ಧ ಮತ್ತೊಂದು ಎಫ್ ಐಆರ್ (FIR)ದಾಖಲಾಗಿದೆ. ಸೋಮವಾರ 30 ಮಂದಿ ಹಾಗೂ ಮಂಗಳವಾರ 41 ಮಂದಿಯ ವಿರುದ್ಧ ಎಫ್ ಐಆರ್ ದಾಖಲಾಗಿದೆ. ವಿಪತ್ತು ನಿರ್ವಹಣೆ ಕಾಯ್ದೆಯ ಅಡಿಯಲ್ಲಿ ಎಫ್ ಐಆರ್ ದಾಖಲಾಗಿದೆ.

Karnataka Covid Guidelines ಕರ್ನಾಟಕದಲ್ಲಿ ಮತ್ತಷ್ಟು ಟಫ್ ರೂಲ್ಸ್,

ಮೇಕೆದಾಟು ಯೋಜನೆಗೆ ಆಗ್ರಹಿಸಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಸಾರಥ್ಯದಲ್ಲಿ ನಡೆಯುತ್ತಿರುವ ಪಾದಯಾತ್ರೆಗೆ ಕರೋನಾವೈರಸ್ ದೊಡ್ಡ ಶಾಕ್ ನೀಡಿದೆ. ಯಾತ್ರೆಗೆ ಹೋದವರಲ್ಲಿ ಬಹುತೇಕರಿಗೆ ಕೋವಿಡ್ ಪಾಸಿಟಿವ್ ಆಗಿದೆ. ಇಂದು ಮೂವರು ನಾಯಕರಿಗೆ ಸೋಂಕು ತಗುಲಿದೆ. ಕರ್ನಾಟಕವನ್ನು ಕರೋನಾ ಇನ್ನಿಲ್ಲದಂತೆ ಬಾಧಿಸುತ್ತಿದೆ. ಎಲ್ಲಾ ಜಿಲ್ಲೆಗಳಲ್ಲೂ ಪಾಸಿಟಿವಿಟಿ ದರದಲ್ಲಿ ಏರಿಕೆ ಕಾಣುತ್ತಿದೆ. ಬೆಂಗಳೂರು ಮಾತ್ರವಲ್ಲದೆ, ಮಂಡ್ಯ ಹಾಗೂ ಮೈಸೂರು ಜಿಲ್ಲೆಗಳಲ್ಲೂ ಕರೋನಾ ಆತಂಕ ಹೆಚ್ಚಾಗಿದೆ. ಇಡೀ ದಿನದ ಸುದ್ದಿ ನ್ಯೂಸ್ ಅವರ್ ನಲ್ಲಿ