'ಉಪಕಣದಲ್ಲಿ ಕಂಬಳಿ ಸಮರ, ಮತ್ತೆ ಡೆಲ್ಟಾ ಅವಾಂತರ!

* ಕರ್ನಾಟಕದಲ್ಲಿ ಉಪಚುನಾವಣೆಯದ್ದೇ  ಕಾವು
* 'ಉಪಕಣದಲ್ಲಿ ಕಂಬಳಿ ಸಮರ...  ಗೇಟ್ ಕೀಪರ್'
* ಜಮೀರ್ ಮತ್ತು ಎಚ್‌ಡಿಕೆ ನಡುವೆ ಮುಗಿಯದ ಸಮರ
* ಮತ್ತೆ ಕಾಡಿದ ಡೆಲ್ಟಾ ಆತಂಕ

Share this Video
  • FB
  • Linkdin
  • Whatsapp

ಬೆಂಗಳೂರು(ಅ. 26) ವಿಪಕ್ಷ ನಾಯಕ ಸಿದ್ದರಾಮಯ್ಯ( Siddaramaiah) ಮೇಲೆ ಸಚಿವ ಕೆಎಸ್ ಈಶ್ವರಪ್ಪ(KS Eshwarappa) ಕೆಂಡ ಕಾರಿದ್ದಾರೆ. ಇನ್ನೊಂದು ಕಡೆ ನಳೀನ್ ಕುಮಾರ್ ಕಟೀಲ್ ಸಹ ವಾಗ್ದಾಳಿ ಮಾಡಿದ್ದಾರೆ. ಉಪಕಣದಲ್ಲಿ ಜಮೀರ್ ಅಹಮದ್ ಖಾನ್ (Zameer Ahmed Khan)ಮತ್ತು ಕುಮಾರಸ್ವಾಮಿ ನಡುವೆ ವಾಕ್ ಸಮರ ಮುಗಿಯುವ ಲಕ್ಷಣ ಕಾಣುತ್ತಿಲ್ಲ. ಒಬ್ಬರ ಮೇಲೆ ಒಬ್ಬರು ಹಳೆ ದೋಸ್ತಿಗಳು ತಿರುಗಿ ಬಿದ್ದಿದ್ದಾರೆ.

'ವಿಷ ಬೀಜ ಬಿತ್ತುವ ಕಾರ್ಯಕ್ರಮ ತಂದಿದ್ದೆ ಸಿದ್ದರಾಮಯ್ಯ'

ಬ್ರಿಟನ್ ನಲ್ಲಿ(UK) ಕಂಡುಬಂದಿರುವ ಡೆಲ್ಟಾ (Delta coronavirus) ರೂಪಾಂತರಿ ಭಾರತಕ್ಕೂ(India) ಆತಂಕ ತಂದಿಟ್ಟಿದೆ. ಕೊರೋನಾ ಇಳಿಕೆ ನಡುವೆ ಚೀನಾ (China) ಮತ್ತು ಬ್ರಿಟನ್ ನಲ್ಲಿ ಪತ್ತೆಯಾಗುತ್ತಿರುವ ಪ್ರಕರಣಗಳು ಹೊಸ ಸೂಚನೆ ಕೊಟ್ಟಿವೆ. ಹಳೆಯ ನೋಟುಗಳನ್ನು ತೋರಿಸಿ ಜನರಿಗೆ ವಂಚನೆ (Fraud) ಮಾಡುತ್ತಿದ್ದ ಗ್ಯಾಂಗ್ ಬೆಂಗಳೂರು ಪೊಲೀಸರ ಬಲೆಗೆ ಬಿದ್ದಿದೆ. ದಾಳಿ ಮಾಡಿದಾಗ ಹಳೆಯ ನೋಟುಗಳನ್ನು ಝೆರಾಕ್ಸ್ ಮಾಡಿ ಇಟ್ಟುಕೊಂಡವರನ್ನು ಸೆರೆ ಹಿಡಿಯಲಾಗಿದೆ ಇಡೀ ದಿನದ ಸುದ್ದಿ ನ್ಯೂಸ್ ಅವರ್ ನಲ್ಲಿ

Related Video