News Hour:ರಾಮನಗರ ಜಿಲ್ಲಾಡಳಿತಕ್ಕೆ ಫುಲ್ ಪವರ್, ಹಿಂದೆ ಸರಿಯಲ್ಲ ಅಂದ್ರು ಡಿಕೆ ಬ್ರದರ್!

* ಹೈಕೋರ್ಟ್ ಛೀಮಾರಿ ನಂತರ ಎಚ್ಚೆತ್ತ ಸರ್ಕಾರ, ಪಾದಯಾತ್ರೆ ನಿರ್ಬಂಧಕ್ಕೆ ಅಧಿಕೃತ ಆದೇಶ
* ಪಾದಯಾತ್ರೆ ಕೈಬಿಡಲು ಕೈ ನಾಯಕರಿಗೆ ಎಸ್ ಎಂ ಕೃಷ್ಣ ಮನವಿ
* ಕೈ ನಾಯಕರ ಮೇಲೆ ಮೂರನೇ ಎಫ್‌ಐಆರ್
* ಕರ್ನಾಟಕದಲ್ಲಿ ಕೊರೋನಾ ಆರ್ಭಟ

First Published Jan 13, 2022, 12:09 AM IST | Last Updated Jan 13, 2022, 12:11 AM IST

ಬೆಂಗಳೂರು(ಜ. 12)  ಮೇಕೆದಾಟು (Mekedatu) ಯೋಜನೆಗೆ ಆಗ್ರಹಿಸಿ ಕೊರೋನಾ (Coronavirus)  ನಿಯಮಗಳ ನಡುವೆಯೇ ಕಾಂಗ್ರೆಸ್  (Congress)  ಹಮ್ಮಿಕೊಂಡಿದ್ದ ಪಾದಯಾತ್ರೆಗೆ ರಾಜ್ಯ ಸರ್ಕಾರ (Karnataka Govt) ಕೊನೆಗೂ ಬ್ರೇಕ್ ಹಾಕಿದೆ.  ಕಠಿಣ ಕ್ರಮ ತೆಗೆದುಕೊಳ್ಳುವಂತೆ ರಾಮನಗರ  (Ramanagara) ಜಿಲ್ಲಾಧಿಕಾರಿಗೆ ಪವರ್ ನೀಡಲಾಗಿದೆ. ಕಾಂಗ್ರೆಸ್ ನಿಂದ ಸಿಎಂ ಆಗಿ ಈಗ ಬಿಜೆಪಿಯಲ್ಲಿರುವ ಹಿರಿಯ ನಾಯಕ ಎಸ್‌ಎಂ ಕೃಷ್ಣ (SM Krishna) ಪತ್ರ ಬರೆದಿದ್ದು ಮೇಕೆದಾಟು ಯೋಜನೆಗೆ ನನ್ನ ಸಹಮತವಿದೆ. ಆದರೆ ಕೊರೋನಾ ಸಂದರ್ಭದಲ್ಲಿ ಪಾದಯಾತ್ರೆ ಬೇಡ ಎಂದು  ಎಸ್‌ಎಂ ಕೃಷ್ಣ ಕೇಳಿಕೊಂಡಿದ್ದಾರೆ.

ಮೂರನೇ ಅಲೆ ಇದೆನಾ? ಏರುತ್ತಲೇ ಇದೆ ಕೊರೋನಾ..ಕರ್ನಾಟಕದ ಲೆಕ್ಕ

ಕಾಂಗ್ರೆಸ್ ಪಾದಯಾತ್ರೆ ಕೊರೋನಾ ನಿಯಮಗಳನ್ನು ಮುರಿದ ಕಾರಣಕ್ಕೆ ಮೂರನೇ ಎಫ್ಐಆರ್ ದಾಖಲಾಗಿದೆ. ಇದಕ್ಕೆಲ್ಲ ನಾವು ತಲೆ ಕೆಡಿಸಿಕೊಳ್ಳಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.  ಇದೆಲ್ಲದರ ನಡುವೆ ಕರ್ನಾಟಕದಲ್ಲಿ ಮೂರನೇ ಅಲೆ ಅಬ್ಬರಿಸಿದ್ದು ಒಂದೇ ದಿನ ಇಪ್ಪತ್ತು ಸಾವಿರಕ್ಕೂ ಹೊಸ ಕೇಸ್ ಗಳು ಬಂದಿವೆ.


 

Video Top Stories