News Hour: ನೀವೇ ತೀರ್ಮಾನಿಸಿದ್ದೀರಿ, ನೋವಾಗಿದ್ದರೆ ಕ್ಷಮಿಸಿ ಎಂದ ರಮೇಶ್ ಕುಮಾರ್!
* ರಮೇಶ್ ಕುಮಾರ್ ಹೇಳಿಕೆ ಬಹುದೊಡ್ಡ ಚರ್ಚೆ
* ಮಾಜಿ ಸ್ಪೀಕರ್ ಹೇಳೀಕೆಗೆ ಪಕ್ಷಾತೀತ ಆಕ್ರೋಶ
* ಭಾರತದಲ್ಲಿ ಶತಕ ದಾಖಲಿಸಿದ ಓಮಿಕ್ರೋನ್
* ಅಮೆರಿಕ, ಇಂಗ್ಲೆಂಡ್‌ಗೆ ಕಾಟ ಕೊಡುತ್ತಿರುವ ರೂಪಾಂತರಿ
ಬೆಂಗಳೂರು(ಡಿ.17) ಅತ್ಯಾಚಾರದ (Rape) ಕುರಿತು ಮಾಜಿ ಸ್ಪೀಕರ್ ರಮೇಶ್ ಕುಮಾರ್ (Ramesh Kumar) ನೀಡಿದ ಹೇಳಿಕೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಲೇ ಇದೆ. ಅತ್ಯಾಚಾರದ ಕುರಿತಾಗಿ ಲಘು ಹೇಳಿಕೆ ನೀಡಿದ ರಮೇಶ್ ಕುಮಾರ್ ಮೇಲೆ ಪಕ್ಷಾತೀತವಾಗಿ ಆಕ್ರೋಶ ವ್ಯಕ್ತವಾಗಿದೆ. ರಮೇಶ್ ಕುಮಾರ್ ಕ್ಷಮೆ ಕೇಳುವ ರೀತಿಯ ಮಾತುಗಳನ್ನೂ ಆಡಿದ್ದರೂ ಅದು ಸಮಾಧಾನ ತಂದಿಲ್ಲ
. Ramesh Kumar Controversy: ರಮೇಶ್ ಕುಮಾರ್ ರೇಪ್ ಹೇಳಿಕೆಗೆ ಮಹಿಳಾ ಆಯೋಗ ಸೇರಿ ದೇಶದಾದ್ಯಂತ ಖಂಡನೆ
ಓಮಿಕ್ರೊನ್ (Omicron) ರೂಪಾಂತರಿ ನಿಧಾನಕ್ಕೆ ಆತಂಕ ಹೆಚ್ಚಿಸುತ್ತಿದೆ. ಭಾರತದಲ್ಲಿ (India) ರೂಪಾಂತರಿ ಕೇಸುಗಳ ಸಂಖ್ಯೆ ಶತಕ ದಾಟಿದೆ. ಅಮೆರಿಕ ಮತ್ತು ಇಂಗ್ಲೆಂಡ್ ನಲ್ಲಿ ರೂಪಾಂತರಿ ಕಾಟ ಕೊಡುತ್ತಿದೆ. ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಹೆಚ್ಚುತ್ತಲೆ ಇದೆ.