News Hour: ಸಾವು ಗೆದ್ದು ಬಂದಿದ್ದ ರಾವತ್ ದುರಂತದಲ್ಲೇ ಮಡಿದರು

* ರಷ್ಯನ್ ನಿರ್ಮಿತ ಹೆಲಿಕಾಪ್ಟರ್ ದುರಂತಕ್ಕೆ ಈಡಾಗಿದ್ದು ಯಾಕೆ?
* ಬಿಪಿನ್‌ ರಾವತ್‌ ಸಾವಿನ ಹಿಂದೆ ಸಂಚಿದೆಯೇ?: ತಜ್ಞರಿಗೆ ಅನುಮಾನ
*ಸಾವು ಗೆದ್ದು ಬಂದಿದ್ದ ರಾವತ್ ಕೊನೆಗೂ ದುರಂತದಲ್ಲೇ ಕೊನೆಯಾದರು
* ಘೋರ ದುರಂತದಲ್ಲಿ ಅಗಲಿದ ಬಿಪಿನ್ ರಾವತ್‌ಗೆ ದೇಶದ ನಮನ 

First Published Dec 9, 2021, 2:58 AM IST | Last Updated Dec 9, 2021, 2:58 AM IST

ಚೆನ್ನೈ/ ಬೆಂಗಳೂರು(ಡಿ. 09)  ದೇಶದ ಸೇನೆಗೆ (Indian Army) ಹೊಸ ರೂಪ ಕೊಟ್ಟಿದ್ದ ಸೇನಾ ಮುಖ್ಯಸ್ಥ ಬಿಪಿನ್ ರಾವತ್ (Bipin Rawat) ಸೇನಾ ಹೆಲಿಕಾಪ್ಟರ್ ದುರಂತದಲ್ಲಿ (IAF Chopper Crash) ಸಾವು ಕಂಡಿದ್ದಾರೆ. ಅತ್ಯಾಧುನಿಕ ಹೆಲಿಕಾಪ್ಟರ್ ದುರಂತಕ್ಕೆ ಈಡಾಗಿದೆ. 

ನೀಲಗಿರಿ ಹಾದಿಯಲ್ಲಿ ತೆರಳಿದ್ದೆ ತಪ್ಪಾಯಿತಾ?

ರಾವತ್‌ ಇದ್ದ ರಷ್ಯಾನಿರ್ಮಿತ ಅತ್ಯಾಧುನಿಕ ಎಂಐ17-ವಿ5 ಹೆಲಿಕಾಪ್ಟರ್‌ ಹಿಮಾಲಯದ ನೀರ್ಗಲ್ಲು ಪ್ರದೇಶದಲ್ಲೂ ಹಾರಾಡುವಂಥದ್ದು. ನೀಲಗಿರಿ (Tamilnadu)ಪರ್ವತ ಶ್ರೇಣಿಯಲ್ಲಿ ಹಿಮಾಲಯದಂಥ ಪ್ರತಿಕೂಲ ಹವಾಮಾನ ಇಲ್ಲ. ಹಾಗಾದರೆ ಈ ಘೋರ ದುರಂತಕ್ಕೆ ಏನು ಕಾರಣ ಎನ್ನುವ ಪ್ರಶ್ನೆಯೂ ಮೂಡಿದೆ.