ದತ್ತಪೀಠದಲ್ಲಿ ಏನಾಗ್ತಿದೆ? ಉಪಚುನಾವಣೆಗೂ ಮುನ್ನ ಬಂಡಾಯದ ಬಿಸಿ

* ದತ್ತಪೀಠದಲ್ಲಿ ಪೂಜೆ, ಸರ್ಕಾರಕ್ಕೆ ಹೈಕೋರ್ಟ್ ಚಾಟಿ
*ಪಂಜಾಬ್ ನಲ್ಲಿ ಸಿಧು ಆಟ..ಕಾಂಗ್ರೆಸ್ ಪರದಾಟ
* ಪಾಕ್ ಉಗ್ರರ ತವರು... ಕೊನೆಗೂ ಅಮೆರಿಕಕ್ಕೆ ಬುದ್ಧಿ ಬಂತು...!
* ಉಪಚುನಾವಣೆಗೂ ಮುನ್ನ ಕಾಂಗ್ರೆಸ್‌ ನಲ್ಲಿ ಬಂಡಾಯ

Share this Video
  • FB
  • Linkdin
  • Whatsapp

ಬೆಂಗಳೂರು(ಸೆ. 29) ಚಿಕ್ಕಮಗಳೂರಿನ ದತ್ತಪೀಠದ ಪೂಜೆಗೆ ಸಂಬಂಧಿಸಿ ಹೈಕೋರ್ಟ್ ಕರ್ನಾಟಕ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ಧರ್ಮಗಳ ನಡುವಿನ ಜಿಜ್ಞಾಸೆಯನ್ನು ವಿಮರ್ಶಿಸಿದೆ. ಸಿದ್ದರಾಮಯ್ಯನವರು ಆರ್‌ಎಸ್‌ಎಸ್‌ಗೆ ತಾಲಿಬಾನ್ ಎಂದಿರುವುದು ಬಿಜೆಪಿ ನಾಯಕರನ್ನ ಕೆರಳಿಸಿದೆ. ಇದಕ್ಕೆ ಸಂಬಂಧಿಸಿದಂತೆ ಸಿಟಿ ರವಿ ಅವರ ಪಂಚೆ ಹೇಳಿಕೆಗೆ ಸಿದ್ದು ಪ್ಯಾಂಟ್ ಗಟ್ಟಿಯಾಗಿ ಇಟ್ಟುಕೊಳ್ಳಿ ಎಂದು ಗುದ್ದು ಕೊಟ್ಟಿದ್ದಾರೆ. 

ಕರ್ನಾಟಕ ಬಿಜೆಪಿಗೂ ತಟ್ಟಿದ ಬಂಡಾಯದ ಬಿಸಿ

ಹಾನಗಲ್ ಹಾಗೂ ಸಿಂದಗಿಗೆ ಉಪಚುನಾವಣೆ ಘೋಷಣೆಯಾಗಿದೆ. ಈಗ ಟಿಕೆಟ್‌ಗಳ ಫೈನಲ್ ಆಗ್ಬೇಕು. ಆದ್ರೆ, ಹಾನಗಲ್ ಕಾಂಗ್ರೆಸ್‌ ಪಾಳಯದಲ್ಲಿ ಬಂಡಾಯ ಸ್ಫೋಟಗೊಂಡಿದೆ. ನವಜೋತ್ ಸಿಂಗ್ ಸಿಧು ಪಂಜಾಬ್ ಕಾಂಗ್ರೆಸ್ ಗೆ ದೊಡ್ಡ ತಲೆನೋವು ತಂದಿದ್ದಾರೆ. ಅವರು ಗೊಂದಲದ ವರ್ತನೆಗೆ ಕಾಂಗ್ರೆಸ್ ಹೈಕಮಾಂಡ್ ಹೈರಾಣವಾಗಿದೆ. ಪಾಕಿಸ್ತಾನ ಉಗ್ರರ ತವರು ಎಂಬ ವಿಚಾರವನ್ನು ಇದೀಗ ಅಮೆರಿಕವೇ ಒಪ್ಪಿಕೊಂಡಿದೆ. ಕೊನೆಗೂ ಅಮೆರಿಕ್ಕೆ ಅಸಲಿತನ ಗೊತ್ತಾಯಿತಾ? ಇಡೀ ದಿನದ ಸುದ್ದಿಗಳು ನ್ಯೂಸ್ ಅವರ್ ನಲ್ಲಿ

Related Video