ರಾಜೀನಾಮೆ ಬಳಿಕ ಕಟೀಲ್ ವಿರುದ್ಧ ಅಸಮಾಧಾನ, ಬಿಎಸ್‌ವೈ ಭೇಟಿಯಾದ ಸುರೇಶ್ ಗೌಡ

* ಮಾಜಿ ಸಿಎಂ ಬಿಎಸ್ ವೈ ಭೇಟಿಯಾದ ಸುರೇಶ್ ಗೌಡ 
* ಕಾವೇರಿ ನಿವಾಸದಲ್ಲಿ ಬಿಎಸ್ ವೈ ಭೇಟಿಯಾಗಿರುವ ಸುರೇಶ್ ಗೌಡ..
* ಇತ್ತೀಚೆಗೆ ತುಮಕೂರು ಜಿಲ್ಲಾ ಬಿಜೆಪಿಗೆ ರಾಜೀನಾಮೆ ಸಲ್ಲಿಸಿದ್ದ ಸುರೇಶ್ ಗೌಡ..
* ಪಕ್ಷದಲ್ಲಿನ ಕೆಲ ವಿದ್ಯಾಮನಗಳಿಂದ ಅಸಮಾಧಾನಗೊಂಡಿದ್ದ ಸುರೇಶ್ ಗೌಡ..

B Suresh Gowda Meets BS Yediyurappa after resigned to Tumakuru BJP President Post rbj

ಬೆಂಗಳೂರು, (ಸೆ.29): ಬಿಜೆಪಿ ತುಮಕೂರು ಜಿಲ್ಲಾಧ್ಯಕ್ಷ ಸ್ಥಾನಕ್ಕೆ ರಾತ್ರೋರಾತ್ರಿ ರಾಜೀನಾಮೆ ನೀಡಿದ್ದ,  ಮಾಜಿ ಶಾಸಕ ಬಿ. ಸುರೇಶ್‌ ಗೌಡ (B Suresh Gowda) ಮಾಜಿ ಸಿಎಂ ಬಿಎಸ್ ಯಡಿಯುರಪ್ಪ (BS Yediyurappa) ಅವರನ್ನ ಭೇಟಿ ಮಾಡಿದರು.

ಇಂದು (ಸೆ.29) ಬೆಂಗಳೂರಿನ (Bengaluru) ಕಾವೇರಿ ನಿವಾಸದಲ್ಲಿ ತಮ್ಮ ಗುರು ಬಿಎಸ್‌ವೈ ಭೇಟಿಯಾದ ಸುರೇಶ್ ಗೌಡ, ಪಕ್ಷದಲ್ಲಿನ ಕೆಲ ವಿಚಾರಗಳ ಬಗ್ಗೆ ಚರ್ಚೆ ಮಾಡಿದ್ದಾರೆ. ಅಲ್ಲದೇ ಪಕ್ಷದಲ್ಲಿನ ಕೆಲ ವಿದ್ಯಾಮನಗಳ ಬಗ್ಗೆ ಅಸಮಾಧಾನ ತೋಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

"

ರಾಜೀನಾಮೆ ಕೊಟ್ಟ ಸುರೇಶ್​ ಗೌಡ ಕಾಂಗ್ರೆಸ್ ಸೇರ್ತಾರಾ? ಈ ಬಗ್ಗೆ ಸ್ಪಷ್ಟನೆ ಕೊಟ್ಟ ಬಿಎಸ್‌ವೈ ಆಪ್ತ

ಸ್ವಕ್ಷೇತ್ರ ತುಮಕೂರು ಗ್ರಾಮಾಂತರಕ್ಕೆ ಒತ್ತು ನೀಡುವ ದೃಷ್ಟಿಯಿಂದ ರಾಜೀನಾಮೆ ನೀಡಿರುವೆ ಎಂದಿದ್ದ ಸುರೇಶ್‌ ಗೌಡ, ಮಂಗಳವಾರ ನೇರವಾಗಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ (Nalin Kumar Kateel) ವಿರುದ್ಧ ಅಸಮಾಧಾನ ಹೊರ ಹಾಕಿದ್ದರು. ಪಕ್ಷದಲ್ಲಿ ಎಲ್ಲವೂ ಸರಿಯಿಲ್ಲ ಎಂಬುದನ್ನು ಬಹಿರಂಗವಾಗಿಯೇ ಹೇಳಿದ್ದರು.

ಜಿಲ್ಲಾಧ್ಯಕ್ಷನಾಗಲು ಬಯಸಿರಲಿಲ್ಲ. ಕಟೀಲ್‌ ವಿನಂತಿಸಿಕೊಂಡಿದ್ದರು. ರಾಜೀನಾಮೆಗೆ ಕಾರಣ ಅವರಲ್ಲೇ ಕೇಳಬೇಕು. ಸತ್ಯಗಳು ಕಠೋರವಾಗಿರುತ್ತವೆ. ಸಮಯ ಬಂದಾಗ ಹೇಳುತ್ತೇನೆ ಎಂದು ಸುರೇಶ್ ಗೌಡ ಗುಡುಗಿದ್ದರು.

ಸುರೇಶ್ ಗೌಡ ಅವರ ಈ ಮಾತುಗಳನ್ನ ಕೇಳಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗುತ್ತಾರೆ ಎನ್ನುವ ಚರ್ಚೆಗಳು ನಡೆದಿವೆ. ಆದ್ರೆ, ಕಾಂಗ್ರೆಸ್ ಸೇರುವುದನ್ನು ಅಲ್ಲಗಳೆದಿದ್ದಾರೆ. ಇದೀಗ ಅಂತಿಮವಾಗಿ ಬಿಎಸ್‌ವೈ ಅವರನ್ನ ಭೇಟಿ ಮಾಡಿದ್ದು, ಮುಂದೆ ಯಾವ ಹೆಜ್ಜೆ ಇಡಲಿದ್ದಾರೆ ಎನ್ನುವುದು ಕುತೂಹಲ ಮೂಡಿಸಿದೆ.

 

Latest Videos
Follow Us:
Download App:
  • android
  • ios