Asianet Suvarna News Asianet Suvarna News

News Hour: ಮಲ್ಲಿಕಾರ್ಜುನ ಖರ್ಗೆಗೆ 'ಕೈ' ಸಾರಥ್ಯ ಫಿಕ್ಸ್: ಕರ್ನಾಟಕ ಕಾಂಗ್ರೆಸ್ಸಲ್ಲಿ ಪವರ್‌ ಸೆಂಟರ್‌ ಆಗ್ತಾರಾ?

Congress President Election: ಗಾಂಧಿ ಪರಿವಾರದ ನಿಷ್ಠೆಯ ಬಂಟ, ಕರ್ನಾಟಕ ದಲಿತ ಸಮುದಾಯ ಪ್ರಬಲ ನಾಯಕ, ಸಂಘಟನಾ ಚತುರ ಮಲ್ಲಿಕಾರ್ಜುನ ಖರ್ಗೆ AICC ಅಧ್ಯಕ್ಷ ಪದವಿಗೇರುವ ಕಾಲ ಸನ್ನಿಹಿತವಾಗಿದೆ

Oct 1, 2022, 10:56 PM IST

ನವದೆಹಲಿ (ಅ. 01): ಗಾಂಧಿ ಪರಿವಾರದ ನಿಷ್ಠೆಯ ಬಂಟ, ಕರ್ನಾಟಕ ದಲಿತ ಸಮುದಾಯ ಪ್ರಬಲ ನಾಯಕ, ಸಂಘಟನಾ ಚತುರ ಮಲ್ಲಿಕಾರ್ಜುನ ಖರ್ಗೆ ( Mallikarjun Kharge) AICC ಅಧ್ಯಕ್ಷ ಪದವಿಗೇರುವ ಕಾಲ ಸನ್ನಿಹಿತವಾಗಿದೆ. 2023ರ ಚುನಾವಣೆ ಮತ್ತು ಖರ್ಗೆಯವರಲ್ಲಿರುವ ಎಲ್ಲರನ್ನೂ ಒಳಗೊಳ್ಳುವ ಮನೋಭಾವಕ್ಕೆ ಮೇಡಂ ಸೋನಿಯಾ (Sonia Gandhi) ಮಣೆ ಹಾಕಿದ್ದು, ಅಕ್ಟೋಬರ್ 19ರಂದು ಹೊರ ಬೀಳಲಿರುವ ಫಲಿತಾಂಶ ಬಹುತೇಕ ಖರ್ಗೆ ಪರವೇ ಇರಲಿದೆ. ಇನ್ನು, G-23 ಬಂಡಾಯಗಾರರ ಗುಂಪಿನಿಂದಲೂ ಖರ್ಗೆಗೆ ಬೆಂಬಲ ಸಿಕ್ಕಿದ್ದು, ತರೂರ್ ಸುಲಭದ ತುತ್ತಾಗಲಿದ್ದಾರೆ. ಕನ್ನಡಿಗ ಖರ್ಗೆ AICC ಅಧ್ಯಕ್ಷ ಪದವಿಗೇರುತ್ತಿದ್ದಂತೆ ರಾಜ್ಯ ರಾಜಕಾರಣದ (Karnataka politics) ಮೇಲೂ ಪರಿಣಾಮ ಬೀರಲಿದೆ. ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್ ಬಣ ಬಡಿದಾಟದಿಂದ ಮುರಿದ ಮನೆಯಂತಾಗಿರುವ KPCCಗೆ ತೇಪೆ ಹಚ್ತಾರಾ ಎಂಬ ನಿರೀಕ್ಷೆಗಳು ಮೂಡಿವೆ. 

ಸೋನಿಯಾ ಗಾಂಧಿ ಅಳೆದು ತೂಗಿ ಮಲ್ಲಿಕಾರ್ಜುನ ಖರ್ಗೆಗೆ ಅಧ್ಯಕ್ಷ ಪಟ್ಟ ಕಟ್ಟುತ್ತಿರುವುದು ಕರ್ನಾಟಕ ಕಾಂಗ್ರೆಸ್‌ಗೆ ವರವಾಗಲಿದೆ ಎನ್ನಲಾಗ್ತಿದೆ. ಓಬಿಸಿ ಸಿದ್ದರಾಮಯ್ಯ, ಒಕ್ಕಲಿಗ ನಾಯಕ ಡಿಕೆಶಿ ನಂತರ, ಕಾಂಗ್ರೆಸ್ ದಲಿತ ನಾಯಕ ಖರ್ಗೆಗೆ ದೊಡ್ಡ ಸ್ಥಾನ ನೀಡಿದ್ದು, ಈಗ  ಮೂರು ಪ್ರಬಲ ಸಮುದಾಯದ ನಾಯಕರಿಗೆ ಸ್ಥಾನ ನೀಡಲಾಗಿದೆ. 

ಆದ್ರೆ ಈಗ ಕಾಂಗ್ರೆಸ್‌ನಲ್ಲಿ ಮೂರನೇ ಬಣ ಸೃಷ್ಟಿಯಾಗುವ ಆತಂಕವೂ ಎದುರಾಗಿದೆ. ಮತ್ತೊಂದು ಪವರ್ ಸೆಂಟರ್ ಮೂಲಕ ಖರ್ಗೆ, ಸಿದ್ದು-ಡಿಕೆಶಿ ಬಣ ಬಡಿದಾಟಕ್ಕೆ ಕಡಿವಾಣ ಹಾಕುವ ಸಾಧ್ಯತೆ ಇದೆ. ಇದರ ಜೊತೆಗೆ 2023ರ ಟಿಕೆಟ್ ಹಂಚಿಕೆಯಲ್ಲೂ ಖರ್ಗೆ ಪ್ರಭಾವದ ಸಾಧ್ಯತೆ ಇದೆ.  ಖರ್ಗೆ ಅಧ್ಯಕ್ಷರಾದ್ರೆ ರಾಜ್ಯ ಕಾಂಗ್ರೆಸ್‌ನ ಲೆಕ್ಕಾಚಾರ ಅದಲು ಬದಲಾಗಲಿದ್ದು, ದಲಿತ ವೊಟ್‌ ಬ್ಯಾಂಕ್ ಕಾಂಗ್ರೆಸ್ ಪರ ಗಟ್ಟಿಯಾಗೋ ಸಾಧ್ಯತೆ ಇದೆ

News Hour: ಪೇಸಿಎಂ ಅಸ್ತ್ರಕ್ಕೆ ಬಿಜೆಪಿ ನಾಯಕರ ಜಾತಿ ಪ್ರತ್ಯಸ್ತ್ರ!

ಖರ್ಗೆ AICC ಅಧ್ಯಕ್ಷ ಪದವಿಗೇರುತ್ತಿರುವುದಕ್ಕೆ ಬಿಜೆಪಿ ನಾಯಕರು ವ್ಯಂಗ್ಯವಾಡಿದ್ದಾರೆ. ಖರ್ಗೆ ಮೋಸ್ಟ್ ಸೀನಿಯರ್ ಲೀಡರ್ ಆದ್ರೆ, ಇವರು ಗಾಂಧಿ ಫ್ಯಾಮಿಲಿಯ ರಬ್ಬರ್ ಸ್ಟಾಂಪ್ ಆಗೋದು ಬೇಡ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕುಟುಕಿದ್ರೆ, ಮೊದಲು ರಾಜ್ಯದಲ್ಲಿ ಒಡೆದು ಚೂರಾಗಿರುವ ಕಾಂಗ್ರೆಸ್ ಪಕ್ಷವನ್ನ  ಸರಿಪಡಿಸಲಿ ಎಂದು MLC ರವಿಕುಮಾರ್ ಕಿಚಾಯಿಸಿದ್ದಾರೆ.

AICC ಅಧ್ಯಕ್ಷ ಚುನಾವಣೆಗೆ 3ನೇ ಅಭ್ಯರ್ಥಿಯಾಗಿದ್ದ ತ್ರಿಪಾಠಿ ನಾಮಪತ್ರ ತಿರಸ್ಕೃತಗೊಂಡಿದ್ದು, ಚುನಾವಣಾ ಕದನದಲ್ಲಿ ಖರ್ಗೆಗೆ ಎದುರಾಳಿಯಾಗಿ ಶಶಿ ತರೂರ್ ಉಳಿದುಕೊಂಡಿದ್ದಾರೆ. ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಖರ್ಗೆ ಆಯ್ಕೆ ನಿಶ್ಚಿತವಾಗಿದ್ದು ರಾಜ್ಯಸಭೆಯ ವಿರೋಧ ಪಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.