ಹೊಸ ಸಂಸತ್‌ ಭವನದ ಮೇಲೆ ರಾರಾಜಿಸಲಿದೆ ರಾಷ್ಟ್ರೀಯ ಲಾಂಛನ, ಪ್ರಧಾನಿಯಿಂದ ಅನಾವರಣ

ದೇಶದ ಹೊಸ ಸಂಸತ್‌ ಭವನದ ನಿರ್ಮಾಣ ಪ್ರಕ್ರಿಯೆ ಭರದಿಂದ ಸಾಗಿದೆ. ಇದರ ನಡುವೆ ಸೋಮವಾರ, ಈ ಸಂಸತ್ ಭವನದ ಛಾವಣಿಯ ಮೇಲೆ ಇರಲಿರುವ ರಾಷ್ಟ್ರೀಯ ಲಾಂಛನವನ್ನು ಪ್ರಧಾನಿ ನರೇಂದ್ರ ಮೋದಿ ಅನಾವರಣ ಮಾಡಿದ್ದಾರೆ.

Share this Video
  • FB
  • Linkdin
  • Whatsapp

ನವದೆಹಲಿ (ಜುಲೈ 11): ನವದೆಹಲಿಯಲ್ಲಿ ಭವ್ಯವಾಗಿ ನಿರ್ಮಾಣವಾಗುತ್ತಿರುವ ನೂತನ ಸಂಸತ್‌ ಭವನದ ಛಾವಣಿಯಲ್ಲಿ ನಿಲ್ಲಲಿರುವ ರಾಷ್ಟ್ರೀಯ ಲಾಂಛನವನ್ನು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಅನಾವರಣ ಮಾಡಿದರು.

ಸಂಪೂರ್ಣ ಕಂಚಿನಿಂದ ನಿರ್ಮಾಣ ಮಾಡಲಾಗಿರುವ ಈ ಕಂಚಿನ ಲಾಂಛನ (Bronze National emblem ) ಬರೋಬ್ಬರಿ 9500 ಕೆಜಿ ತೂಕವಿದ್ದು, 6.5 ಮೀಟರ್‌ ಎತ್ತರವಿದೆ. ಹೊ ಸಂಸತ್‌ ಭವನದ (new parliament building ) ಛಾವಣಿಯಲ್ಲಿ ಇದನ್ನು ಇರಿಸಲಾಗುತ್ತದೆ. ಇದರ ಬೆಂಬಲಕ್ಕಾಗಿ ಉಕ್ಕಿನ ರಚನೆಯೂ ಇದರೊಂದಿಗೆ ಇರಲಿದೆ. ಈ ಉಕ್ಕಿನ ರಚನೆಯ ತೂಕ 6500 ಕೆಜಿ ಆಗಿರಲಿದೆ. ಒಟ್ಟಾರೆ ಈ ರಾಷ್ಟ್ರೀಯ ಲಾಂಛನದ ತೂಕ 16 ಸಾವಿರ ಕೆಜಿಗಿಂತಲೂ ಹೆಚ್ಚಾಗಲಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ.

ಸಂಸತ್‌ ಭವನದ ಛಾವಣಿ ಮೇಲೆ ರಾಷ್ಟ್ರೀಯ ಲಾಂಛನ, ಪ್ರಧಾನಿ ಅನಾವರಣ ಮಾಡಿದ್ದಕ್ಕೆ ಓವೈಸಿ ಆಕ್ಷೇಪ!

ಹೊಸ ಸಂಸತ್ತಿನ ಕಟ್ಟಡದ ಛಾವಣಿಯ ಮೇಲೆ ರಾಷ್ಟ್ರೀಯ ಲಾಂಛನವನ್ನು ಬಿತ್ತರಿಸುವ ಪರಿಕಲ್ಪನೆಯ ರೇಖಾಚಿತ್ರ ಮತ್ತು ಪ್ರಕ್ರಿಯೆಯು ಮಣ್ಣಿನ ಮಾಡೆಲಿಂಗ್, ಕಂಪ್ಯೂಟರ್ ಗ್ರಾಫಿಕ್ಸ್‌ನಿಂದ ಪ್ರಾರಂಭಿಸಿ ಕಂಚಿನ ಎರಕ ಮತ್ತು ಪಾಲಿಶ್ ಮಾಡುವವರೆಗೆ ಎಂಟು ಹಂತದ ತಯಾರಿಕೆಯ ಮೂಲಕ ಸಾಗಿದೆ ಎಂದು ಸರ್ಕಾರದ ಪ್ರಕಟಣೆಯಲ್ಲಿ ತಿಳಿಸಿದೆ.

Related Video