Asianet Suvarna News Asianet Suvarna News

ಸಂಸತ್‌ ಭವನದ ಛಾವಣಿ ಮೇಲೆ ರಾಷ್ಟ್ರೀಯ ಲಾಂಛನ, ಪ್ರಧಾನಿ ಅನಾವರಣ ಮಾಡಿದ್ದಕ್ಕೆ ಓವೈಸಿ ಆಕ್ಷೇಪ!

ಭಾರತದ ಸಂವಿಧಾನದಲ್ಲಿ ಸಂಸತ್‌ ಭವನ, ಸರ್ಕಾರ ಹಾಗೂ ನ್ಯಾಯಾಂಗದ ಅಧಿಕಾರಗಳೇನು ಎನ್ನುವುದನ್ನು ಸ್ಪಷ್ಟವಾಗಿದೆ. ಲೋಕಸಭೆಯ ಸ್ಪೀಕರ್‌ ಯಾವುದೇ ಸರ್ಕಾರಕ್ಕೆ ಅಧೀನರಲ್ಲ ಎನ್ನುವುದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು ಎಂದು ಅಸಾದುದ್ದೀನ್‌ ಓವೈಸಿ ಟ್ವೀಟ್‌ ಮಾಡಿದ್ದಾರೆ.
 

asaduddin owaisi says PM Narendra Modi cannot unveil National Emblem at new Parliament building Speaker deserves it san
Author
Bengaluru, First Published Jul 11, 2022, 5:08 PM IST

ನವದೆಹಲಿ (ಜುಲೈ 11): ನೂತನ ಸಂಸತ್‌ ಭವನದ  ಛಾವಣಿ ಮೇಲೆ ಇರಿಸಲಾಗುವ ಅಂದಾಜು 9500 ಕೆಜಿ ತೂಕದ ಬೃಹತ್ ಅಶೋಕ ಸ್ತಂಭವನ್ನು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಅನಾವರಣ ಮಾಡಿದರು. ಆದರೆ, ಸಂಸತ್‌ ಭವನದ ಕಾಮಗಾರಿಯನ್ನು ಪ್ರಧಾನಿ ನರೇಂದ್ರ ಮೋದಿ ಒಬ್ಬರೇ ಅನಾವರಣ ಮಾಡಿದ್ದಕ್ಕೆ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್‌ ಓವೈಸಿ ಆಕ್ಷೇಪ ವ್ಯಕ್ತಪಡಿಸಿದ್ದು, ಈ ಹಕ್ಕು ಲೋಕಸಭೆ ಸ್ಪೀಕರ್‌ಗೆ ಸೇರಿದ್ದು ಎಂದು ಓವೈಸಿ ಟ್ವೀಟ್‌ ಮಾಡಿದ್ದಾರೆ. ನಮ್ಮ ದೇಶದ ಸಂವಿಧಾನದಲ್ಲಿ ಸರ್ಕಾರ ಮತ್ತು ನ್ಯಾಯಾಂಗದ ಅಧಿಕಾರಗಳನ್ನು ತುಂಬಾ ಪ್ರತ್ಯೇಕವಾಗಿ ಚಿತ್ರಿಸಲಾಗಿದೆ. ಪ್ರಧಾನಿ ಮೋದಿ ಅವರ ಸರ್ಕಾರ ಮುಖ್ಯಸ್ಥರಾಗಿದ್ದಾರೆ. ಹೊ ಸಂಸತ್ತಿನ ಕಟ್ಟಡದ ಮೇಲೆ ರಾಷ್ಟ್ರೀಯ ಲಾಂಛನವನ್ನು ಅವರು ಅನಾವರಣ ಮಾಡಬಾರದು. ಸಂಸತ್‌ ಭವನದ ಎಲ್ಲಾ ಅಧಿಕಾರಗಳೂ ಸ್ಪೀಕರ್‌ಗಳ ಅಧಿಕಾರದ ವ್ಯಾಪ್ತಿಗೆ ಬರುತ್ತದೆ ಎಂದು ಬರೆದುಕೊಂಡಿದ್ದಾರೆ. ದೇಶದ ಸಂಸತ್‌ ಸ್ಪೀಕರ್‌ ಯಾವುದೇ ಸರ್ಕಾರಕ್ಕಾಗಲಿ, ಪಕ್ಷಕ್ಕಾಗಲಿ ಅಧೀನರಲ್ಲ. ಪ್ರಧಾನಿಯವರು ಎಲ್ಲಾ ಸಾಂವಿಧಾನಿಕ ನಿಯಮಗಳನ್ನು ಉಲ್ಲಂಘೆನ ಮಾಡಿದ್ದಾರೆ. ಪ್ರಧಾನಿ ಮೋದಿ ಸರ್ಕಾರದ ಮುಖ್ಯಸ್ಥರೇ ಹೊರತು ಲೋಕಸಭೆಯ ಮುಖ್ಯಸ್ಥರಲ್ಲ ಎಂದು ಓವೈಸಿ ಹೇಳಿದ್ದಾರೆ.


ಸಂಸತ್ ಭವನದ ಮೇಲಿನ ಕಂಚಿನ ರಾಷ್ಟ್ರೀಯ ಲಾಂಛನವನ್ನು (National Emblem) ನರೇಂದ್ರ ಮೋದಿ (PM Modi) ಸೋಮವಾರ ಅನಾವರಣಗೊಳಿಸಿದರು. ಇದು 9500 ಕೆಜಿ ಭಾರ ಹೊಂದಿದೆ. ಲೋಕಸಭೆಯ ಸ್ಪೀಕರ್‌ ಸಂಸತ್‌ ಭವನದ (Parliment House) ಮುಖ್ಯಸ್ಥರು. ಈ ಲಾಂಛನವನ್ನು ಅವರೇ ಅನಾವರಣಗೊಳಿಸಬೇಕಾಗಿತ್ತು. ಮೋದಿ ಅನಾವರಣಗೊಳಿಸುವ ಅಗತ್ಯವಿರಲಿಲ್ಲ ಎಂದಿದ್ದಾರೆ. ಸಂಸತ್‌ ಭವನದ ಮೇಲೆ ನಿರ್ಮಾಣವಾಗಲಿರುವ ಈ ಲಾಂಛನವು 6.5 ಮೀಟರ್ ಎತ್ತರವಿರಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಟ್ಟಡದ ಮೇಲೆ ಎಲ್ಲರೂ ಕಾಣುವಂಥ ರೀತಿಯನ್ನು ಇದನ್ನು ಸಂಯೋಜನೆ ಮಾಡಲಾಗುತ್ತದೆ. ಇದಕ್ಕೆ ಆಧಾರ ನೀಡುವ ನಿಟ್ಟಿನಲ್ಲಿ 6500 ಕೆಜಿ ತೂಕದ ಉಕ್ಕಿನ ರಚನೆಯನ್ನು ನಿರ್ಮಾಣ ಮಾಡಲಾಗಿದೆ.

ಎಂಟು ವಿವಿಧ ಹಂತಗಳಲ್ಲಿ ಸಂಸತ್‌ ಭವನದ ಕಾಮಗಾರಿ:  ಇದೇ ವೇಳೆ ಸಂಸತ್ ಭವನ ನಿರ್ಮಾಣ ಕಾಮಗಾರಿಯಲ್ಲಿ ನಿರತರಾಗಿರುವ ಕಾರ್ಮಿಕರೊಂದಿಗೆ ಮೋದಿ ಸಂವಾದ ನಡೆಸಿದರು. ನೂತನ ಸಂಸತ್ ಭವನದ ಮೇಲ್ಛಾವಣಿಯಲ್ಲಿ ರಾಷ್ಟ್ರೀಯ ಲಾಂಛನ ಅಳವಡಿಸುವ ಕಾರ್ಯ ಎಂಟು ವಿವಿಧ ಹಂತಗಳಲ್ಲಿ ನಡೆಯಲಿದೆ ಎಂದು ಮಾಹಿತಿ ನೀಡಿದರು. ಪೂರ್ಣಗೊಂಡಿತು. ಇದು ಜೇಡಿಮಣ್ಣಿನ ಮಾದರಿ ತಯಾರಿಕೆಯಿಂದ ಕಂಪ್ಯೂಟರ್ ಗ್ರಾಫಿಕ್ಸ್ ತಯಾರಿಕೆ ಮತ್ತು ಕಂಚಿನ ಫೈ ನ ಪಾಲಿಶ್ ಮಾಡುವವರೆಗೆ ಇತ್ತು.

ಹೊಸ ಸಂಸತ್ ಭವನದ ಛಾವಣಿ ಮೇಲೆ ರಾರಾಜಿಸಲಿದೆ 9,500 ಕೆಜಿ ಕಂಚಿನ ರಾಷ್ಟ್ರೀಯ ಲಾಂಛನ!

ಒಟ್ಟಾರೆ ತೂಕ 16 ಸಾವಿರ ಕೆಜಿ:
ಒಟ್ಟಾರೆ ಈ ಲಾಂಛನ ಹಾಗೂ ಅದಕ್ಕೆ ಬೆಂಬಲಿತವಾಗಿ ನಿಲ್ಲುವ ಉಕ್ಕಿನ ರಚನೆಯ ತೂಕ 16 ಸಾವಿರ ಕೆಜಿ ಆಗಿರಲಿದೆ. ಸಂಪೂರ್ಣವಾಗಿ ಈ ರಚನೆಯನ್ನು ಭಾರತದ ಕಲಾವಿದರೇ ನಿರ್ಮಾಣ ಮಾಡಿದ್ದು, ಶುದ್ಧ ಕಂಚಿನಿಂದ ತಯಾರಿಸಲಾಗಿದೆ. ಭಾರತದ ರಾಜ್ಯ ಲಾಂಛನವು ಸಾರಾನಾಥ ಮ್ಯೂಸಿಯಂನಲ್ಲಿ ಸಂರಕ್ಷಿಸಲ್ಪಟ್ಟ ಅಶೋಕನ ಸಾರಾನಾಥ ಸಿಂಹ ರಾಜಧಾನಿಯಿಂದ ರೂಪಾಂತರವಾಗಿದೆ. ದೇಶದ ವಿವಿಧ ಭಾಗಗಳಿಂದ 100 ಕ್ಕೂ ಹೆಚ್ಚು ಕುಶಲಕರ್ಮಿಗಳು ಲಾಂಛನದ ವಿನ್ಯಾಸ, ಕರಕುಶಲ ಕಲಾವಿರು ಆರು ತಿಂಗಳ ಕಾಲ ಕೆಲಸ ಮಾಡಿದ್ದಾರೆ.. ವಸ್ತು ಮತ್ತು ಕರಕುಶಲತೆಯ ದೃಷ್ಟಿಕೋನದಿಂದ ಭಾರತದಲ್ಲಿ ಬೇರೆಲ್ಲಿಯೂ ಇದೇ ರೀತಿಯ ಲಾಂಛನದ ಚಿತ್ರಣವಿಲ್ಲ.

'ನೂತ​ನ ಸಂಸತ್‌ ಭವನಕ್ಕೆ ಅನುಭವ ಮಂಟಪ ಹೆಸರಿಡಿ'

ಅನಾವರಣ ಮಾಡುವ ವೇಳೆ, ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಲೋಕಸಭೆ ಸ್ಪೀಕರ್‌ ಓಂ ಬಿರ್ಲಾ, ರಾಜ್ಯಸಭೆಯ ಉಪಾಧ್ಯಕ್ಷ ಹರಿವಂಶ್‌, ನಗರಾಭಿವೃದ್ಧಿ ಸಚಿವ ಹರ್ದೀಪ್‌ ಸಿಂಗ್ ಪೂರಿ ಇದ್ದರು.

Follow Us:
Download App:
  • android
  • ios