'ಮಹಾ' ದಲ್ಲಿ ಲಾಕ್‌ಡೌನ್, ಬಳ್ಳಾರಿಯಲ್ಲಿ ಆಫ್ರಿಕಾ ವೈರಸ್, ವ್ಯಾಕ್ಸಿನ್‌ಗೆ ಸವಾಲು..!

ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕು ಹೆಚ್ಚಳವಾಗುತ್ತಿದೆ. ನಿರ್ಬಂಧಗಳನ್ನು ಇನ್ನಷ್ಟು ತೀವ್ರಗೊಳಿಸಲಾಗಿದೆ. ಪುಣೆ, ಪರಭಣಿ, ಅಕೋಲಾದಲ್ಲಿ ನೈಟ್ ಕರ್ಫ್ಯೂ ಜಾರಿಗೊಳಿಸಲಾಗಿದೆ. ನಾಗಪುರದಲ್ಲಿ ಮಾ. 15 ರಿಂದ ಲಾಕ್‌ಡೌನ್ ಮಾಡುವ ಚಿಂತನೆ ನಡೆಸಲಾಗಿದೆ.

First Published Mar 13, 2021, 2:17 PM IST | Last Updated Mar 13, 2021, 2:17 PM IST

ಬೆಂಗಳೂರು (ಮಾ. 13): ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕು ಹೆಚ್ಚಳವಾಗುತ್ತಿದೆ. ನಿರ್ಬಂಧಗಳನ್ನು ಇನ್ನಷ್ಟು ತೀವ್ರಗೊಳಿಸಲಾಗಿದೆ. ಪುಣೆ, ಪರಭಣಿ, ಅಕೋಲಾದಲ್ಲಿ ನೈಟ್ ಕರ್ಫ್ಯೂ ಜಾರಿಗೊಳಿಸಲಾಗಿದೆ. ನಾಗಪುರದಲ್ಲಿ ಮಾ. 15 ರಿಂದ ಲಾಕ್‌ಡೌನ್ ಮಾಡುವ ಚಿಂತನೆ ನಡೆಸಲಾಗಿದೆ. ಇನ್ನು ದಕ್ಷಿಣ ಆಫ್ರಿಕಾದ ರೂಪಾಂತರಿ ವೈರಸ್ ಬಳ್ಳಾರಿಗೆ ಕಾಲಿಟ್ಟಿದೆ. ಶಿವಮೊಗ್ಗ ಆಯ್ತು, ಬಳ್ಳಾರಿಯಲ್ಲೂ ದಕ್ಷಿಣ ಆಫ್ರಿಕಾ ಸೋಂಕು ಪತ್ತೆಯಾಗಿದ್ದು ಆತಂಕ ಮೂಡಿಸಿದೆ. ಒಟ್ಟಿನಲ್ಲಿ ರಾಜ್ಯಕ್ಕೆ 2 ನೇ ಅಲೆ ಭೀತಿ ಶುರುವಾಗಿದೆ. 

ಕೊರೊನಾ 2 ನೇ ಅಲೆ, ಬೆಂಗಳೂರಿನ 3 ವಲಯಗಳು ಮೋಸ್ಟ್ ಡೇಂಜರಸ್ ಅಂತೆ!