ಮಹಾರಾಷ್ಟ್ರದಲ್ಲಿ ‘ಮೈತ್ರಿ’ಗೆ ಹೊಸ ಭಾಷ್ಯ; ಶಿವಸೇನೆಗೆ NCP-ಕಾಂಗ್ರೆಸ್ ಸಹಕಾರ?

ಮಹಾರಾಷ್ಟ್ರ ರಾಜಕೀಯ ಹೈಡ್ರಾಮಾಕ್ಕೆ ಸಾಕ್ಷಿಯಾಗಿದೆ.  ಸರ್ಕಾರ ರಚನೆಗೆ ಕುರಿತು ಬಿಜೆಪಿ ಮತ್ತು ಶಿವಸೇನೆ ನಡುವೆ ಉಂಟಾದ ಬಿಕ್ಕಟ್ಟು ಮೈತ್ರಿ ರಾಜಕೀಯದಲ್ಲಿ ಹೊಸ ಅಧ್ಯಾಯದ ಆರಂಭಕ್ಕೆ ನಾಂದಿ ಹಾಡಿದೆ. 

ವಿಧಾನಸಭೆ ಫಲಿತಾಂಶ ಪ್ರಕಟವಾಗಿ 17 ದಿನಗಳು ಕಳೆದಿದ್ದರೂ,  ಸರ್ಕಾರ ರಚನೆ ಕಗ್ಗಾಂಟಗಿಯೇ ಉಳಿದಿದೆ. ಈಗ ಶರದ್ ಪವಾರ್ ನೇತೃತ್ವದ NCP ಮತ್ತು ಕಾಂಗ್ರೆಸ್ ಬೆಂಬಲದೊಂದಿಗೆ ಸರ್ಕಾರ ರಚಿಸಲು ಹೊರಟಿದೆ. ಕಾಂಗ್ರೆಸ್ ಬೆಂಬಲ ಯಾವ ರೀತಿ ಇರಲಿದೆ ಎಂದು ಕಾದುನೋಡಬೇಕಾಗಿದೆ.

First Published Nov 11, 2019, 5:08 PM IST | Last Updated Nov 11, 2019, 5:08 PM IST

ಮುಂಬೈ (ನ.11) ಮಹಾರಾಷ್ಟ್ರ ರಾಜಕೀಯ ಹೈಡ್ರಾಮಾಕ್ಕೆ ಸಾಕ್ಷಿಯಾಗಿದೆ. ಸರ್ಕಾರ ರಚನೆಗೆ ಕುರಿತು ಬಿಜೆಪಿ ಮತ್ತು ಶಿವಸೇನೆ ನಡುವೆ ಉಂಟಾದ ಬಿಕ್ಕಟ್ಟು ಮೈತ್ರಿ ರಾಜಕೀಯದಲ್ಲಿ ಹೊಸ ಅಧ್ಯಾಯದ ಆರಂಭಕ್ಕೆ ನಾಂದಿ ಹಾಡಿದೆ. 

ವಿಧಾನಸಭೆ ಫಲಿತಾಂಶ ಪ್ರಕಟವಾಗಿ 17 ದಿನಗಳು ಕಳೆದಿದ್ದರೂ, ಸರ್ಕಾರ ರಚನೆ ಕಗ್ಗಾಂಟಗಿಯೇ ಉಳಿದಿದೆ. ಈಗ ಶರದ್ ಪವಾರ್ ನೇತೃತ್ವದ NCP ಮತ್ತು ಕಾಂಗ್ರೆಸ್ ಬೆಂಬಲದೊಂದಿಗೆ ಸರ್ಕಾರ ರಚಿಸಲು ಹೊರಟಿದೆ. ಕಾಂಗ್ರೆಸ್ ಬೆಂಬಲ ಯಾವ ರೀತಿ ಇರಲಿದೆ ಎಂದು ಕಾದುನೋಡಬೇಕಾಗಿದೆ.

ಕಳೆದ ಅ. 24 ರಂದು ವಿಧಾನಸಭೆ ಫಲಿತಾಂಶಗಳು ಪ್ರಕಟವಾಗಿದ್ದು, ಬಿಜೆಪಿ-ಶಿವಸೇನೆ ಮೈತ್ರಿಕೂಟ ಬಹುಮತ ಪಡೆದಿದೆ. ಆದರೆ, ಎರಡೂ ಪಕ್ಷಗಳು ಮುಖ್ಯಮಂತ್ರಿ ಸ್ಥಾನಕ್ಕೆ ಪಟ್ಟು ಹಿಡಿದಿದ್ದು, ಸರ್ಕಾರ ರಚನೆ ಕಗ್ಗಾಂಟಾಗಿಯೇ ಉಳಿದಿದೆ.
 288 ಸದಸ್ಯಬಲದ ವಿಧಾನಸಭೆಯಲ್ಲಿ, ಬಿಜೆಪಿ105 ಸ್ಥಾನ ಗಳಿಸಿದರೆ, ಮಿತ್ರಪಕ್ಷ ಶಿವಸೇನೆ 56 ಸ್ಥಾನಗಳನ್ನು ಬಾಚಿಕೊಂಡಿದೆ.