Asianet Suvarna News Asianet Suvarna News

ರಾಷ್ಟ್ರ ಲಾಂಛನ ಅನಾವರಣ, ವಿಪಕ್ಷಗಳ ಆಕ್ರಂದನ!

ಹೊಸ ಸಂಸತ್ತಿನ ಛಾವಣಿಯ ಮೇಲೆ ಅನಾವರಣ ಮಾಡಲಾಗಿರುವ ರಾಷ್ಟ್ರ ಲಾಂಛನದ ವಿಚಾರವಾಗಿ ಕಾಂಗ್ರೆಸ್‌ ಆದಿಯಾಗಿ ಎಲ್ಲಾ ವಿಪಕ್ಷಗಳು ವಿರೋಧ ವ್ಯಕ್ತಪಡಿಸಿವೆ. ರಾಷ್ಟ್ರ ಲಾಂಛನವನ್ನು ಮೋದಿ ವಿರೂಪಗೊಳಿಸಿದ್ದಾರೆ ಎನ್ನುವ ಆರೋಪ ಮಾಡಲಾಗಿದೆ. ಅಸಲಿಗೆ ಮೋದಿ ರಾಷ್ಟ್ರ ಲಾಂಛನ ವಿರೂಪ ಮಾಡಿದ್ದಾರೆಯೇ?

ನವದೆಹಲಿ (ಜುಲೈ 13): ಹೊಸ ಸಂಸತ್ತಿನ ಛಾವಣಿಯ ಮೇಲೆ ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರ ಲಾಂಛನವನ್ನು ಅನಾವರಣ ಮಾಡಿದ ಕ್ಷಣದಿಂದಲೂ ಅದರ ಸುತ್ತ ವಿವಾದಗಳು ಹುಟ್ಟಿಕೊಂಡಿವೆ. ಅದರೊಂದಿಗೆ ಲೋಕಸಭೆಯ ಕಾರ್ಯಕ್ರಮವನ್ನು ಪ್ರಧಾನಿ ಮೋದಿ ಅನಾವರಣ ಮಾಡಿದ್ದು ತಪ್ಪು ಎನ್ನುವ ಆರೋಪ ಒಂದೆಡೆಯಾದರೆ, ರಾಷ್ಟ್ರಲಾಂಛನ ಅನಾವರಣ ಕಾರ್ಯಕ್ರಮಕ್ಕೆ ವಿಪಕ್ಷದ ಯಾವೊಬ್ಬ ಸದಸ್ಯರಿಗೂ ಆಹ್ವಾನ ನೀಡಿರಲಿಲ್ಲ ಎನ್ನುವ ಆರೋಪವೂ ಇದರೊಂದಿಗೆ ಸೇರಿದೆ.

ಹಾಗಿದ್ದರೆ, ಪ್ರಧಾನಮಂತ್ರಿಗಳಿಗೆ (Primeminister) ಲೋಕಸಭೆಯ (Loksabha) ಕಾರ್ಯಕ್ರಮಕ್ಕೆ ಚಾಲನೆ ನೀಡುವ ಸಾಂವಿಧಾನಿಕ ಹಕ್ಕಿಲ್ಲವೇ, ಸಂಸತ್ತಿನಲ್ಲಿ ಈ ಹಂದೆ ಯಾರೆಲ್ಲಾ, ಏನೆಲ್ಲಾ ಅನಾವರಣ ಮಾಡಿದ್ದರು ಎನ್ನುವ ಕಂಪ್ಲೀಟ್‌ ರಿಪೋರ್ಟ್‌. ಇನ್ನು ಪ್ರಧಾನಿ ಮೋದಿ (PM Narendra Modi) ಅವರು ಭಾವಿ ಸಂಸತ್ ಭವನದಲ್ಲಿ (New parliament building) ಪೂಜೆ ಮಾಡಿದ್ದಕ್ಕೆ, ಈಗ ವಿಪಕ್ಷಗಳು ತಿರುಗಿಬಿದ್ದಿವೆ.. ಇಂಥದ್ದನ್ನೆಲ್ಲಾ ಪ್ರಧಾನಿಯಾದವರು ಮಾಡೋ ಹಾಗಿಲ್ಲ ಅಂತಿದ್ದಾರೆ.. ಆದ್ರೆ ಇದರ ಹಿಂದಿರೋ ಅಸಲಿ ಮಿಸ್ಟರಿ ಏನು..? 

ಇದನ್ನೂ ಓದಿ: ರಾಷ್ಟ್ರ ಲಾಂಛನದ ಸಿಂಹದ ಉಗ್ರಾವತಾರಕ್ಕೆ ಕಾಂಗ್ರೆಸ್‌ ಕ್ಯಾತೆ, ಕೇಂದ್ರದ ವಿರುದ್ಧ ಮತ್ತೊಂದು ರಣಕಹಳೆ!

ಮೋದಿ ಅವರ ವಿರುದ್ಧ ವಿಪಕ್ಷಗಳೇನೋ ನಾ ಮುಂದು, ತಾ ಮುಂದು ಅನ್ನೋ ಹಾಗೆ ಬಿಲ್ಲು ಬಾಣ ಪ್ರಯೋಗಕ್ಕೆ ಮುಂದಾಗಿದ್ದಾರೆ. ಅದರ ನಡುವೆ ರಾಷ್ಟ್ರ ಲಾಂಛನವನ್ನು(National Emblem)  ವಿರೂಪ ಮಾಡಿದ್ದಾರೆ ಎನ್ನುವ ಆರೋಪವೂ ಮೋದಿ ಸರ್ಕಾರದ ಮೇಲೆ ಬಿದ್ದಿದೆ. ಇವೆಲ್ಲದಕ್ಕೂ ಸರ್ಕಾರ ಸ್ಪಷ್ಟನೆ ನೀಡಿದ್ದು ಲಾಂಛನವನ್ನು ವಿರೂಪ ಮಾಡಿಲ್ಲ ಎಂದು ಹೇಳಿದೆ.

Video Top Stories