ರಾಷ್ಟ್ರ ರಾಜಧಾನಿಯಲ್ಲಿ ಏರ್ ಎಮರ್ಜೆನ್ಸಿ! ಕಂಡು ಕೇಳರಿಯದ ಶೀತಗಾಳಿ ದಾಳಿಗೆ ಏನು ಕಾರಣ?
ದೇಶದ ಮೂಲೆಮೂಲೆಯಲ್ಲೂ ಚಳಿಗಾಳಿ ದಾಳಿ ಮಾಡ್ತಾ ಇದೆ. ಈ ದಾಳಿ ಯಾವಾಗ ಮುಗಿಯುತ್ತೆ ಅನ್ನೋದನ್ನ ನೋಡೋಣ, ಅದಕ್ಕಿಂತಾ ಮುಂಚೆ ಈ ದಾಳಿ ಶುರುವಾಗಿರೋದ್ಯಾಕೆ ತಿಳಿಯೋಣ ಬನ್ನಿ
ಬೆಳ್ಳಂ ಬೆಳಗ್ಗೆಯಿಂದಲೂ ದಟ್ಟ ಮಂಜು ಕವಿದಿರುತ್ತೆ. ಪತರಗುಟ್ಟಿಸೋ ಚಳಿ ಕಾಡ್ತಾ ಇರುತ್ತೆ. ಜೀವ ಹಿಂಡೋ ಶೀತಗಾಳಿ ಹಿಂಸೆ ನೀಡುತ್ತೆ. ಇದು ಕಳೆದ ಹಲವು ವಾರಗಳಿಂದಲೂ ಉತ್ತರ ಭಾರತದ ಸ್ಥಿತಿ. ಏಳೆಂಟು ರಾಜ್ಯಗಳು ಕಂಡುಕೇಳರಿಯದ ಚಳಿ ಗಾಳಿಯ ದಾಳಿ ತುತ್ತಾಗಿವೆ. ಭೀಕರ ವಾತಾವರಣ ಸೃಷ್ಟಿಯಾಗಿದೆ. ಇದಕ್ಕೆಲ್ಲಾ ಏನು ಕಾರಣ? ಒಂದಂಕಿ ತಾಪಮಾನ ಜೀವವನ್ನೇ ತೆಗೆಯುತ್ತಾ, ಕರ್ನಾಟಕಕ್ಕೂ ಕಾದಿದೆಯಾ ಕಂಟಕ? ಅದೆಲ್ಲಕ್ಕೂ ಉತ್ತರವೇ ಇವತ್ತಿನ ಸುವರ್ಣ ಫೋಕಸ್, ಉತ್ತರ ಥರಥರ ತತ್ತರ!