Asianet Suvarna News Asianet Suvarna News

ಭಾರತ್ ಬಯೋಟೆಕ್‌ನಿಂದ ಕೊರೋನಾಗೆ ಮತ್ತೊಂದು ರಾಮಬಾಣ!

ಕೊರೋನಾ ವಿರುದ್ಧದ ಹೋರಾಟಕ್ಕೆ ಸದ್ಯ ಮತ್ತೊಂದು ರಾಮಬಾಣ ಸಿದ್ಧವಾಗುತ್ತಿದೆ. ಭಾರತ್ ಬಯೋಟೆಕ್‌ನ ಮತ್ತೊಂದು ಲಸಿಕೆ ಸಜ್ಜಾಗುತ್ತಿದೆ. ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾದಿಂದ ಇದರ ಪ್ರಯೋಗಕ್ಕೆ ಅನುಮತಿ ಸಿಕ್ಕಿದೆ.

ಹೈದರಾಬಾದ್(ಮೇ.20): ಕೊರೋನಾ ವಿರುದ್ಧದ ಹೋರಾಟಕ್ಕೆ ಸದ್ಯ ಮತ್ತೊಂದು ರಾಮಬಾಣ ಸಿದ್ಧವಾಗುತ್ತಿದೆ. ಭಾರತ್ ಬಯೋಟೆಕ್‌ನ ಮತ್ತೊಂದು ಲಸಿಕೆ ಸಜ್ಜಾಗುತ್ತಿದೆ. ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾದಿಂದ ಇದರ ಪ್ರಯೋಗಕ್ಕೆ ಅನುಮತಿ ಸಿಕ್ಕಿದೆ.

ಭಾರತ್‌ ಬಯೋಟೆಕ್‌ನ ಈ ನೂತನ ನೇಸಲ್ ವ್ಯಾಕ್ಸಿನ್‌ನ ಮೊದಲ ಹಂತದ ಪ್ರಯೋಗ ಮುಕ್ತಾಯಗೊಂಡಿದೆ. ನಾಗ್ಪುರದ ರಾಹತೆ ಆಸ್ಪತ್ರೆಯಲ್ಲಿ ಐವತ್ತು ಜನರ ಮೇಲೆ ಈ ಪ್ರಯೋಗ ನಡೆದಿದೆ.

 ಮೂಗಿನ ಎರಡೂ ಹೊಳ್ಳೆಗೆ 0.2ml ಎರಡು ಡ್ರಾಪ್ ವ್ಯಾಕ್ಸಿನ್ ಹಾಕಿ ಈ ಪ್ರಯೋಗ ನಡೆಸಲಾಗಿದೆ. ಹೀಗಿರುವಾಗ ಈ BBBV154 ಕೊರೋನಾ ಶಮನಗೊಳಿಸುತ್ತಾ ಎಂಬ ಪ್ರಶ್ನೆ ಎದ್ದಿದೆ. 

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

Video Top Stories