Asianet Suvarna News Asianet Suvarna News

Fight Against Omicron: ಮೂಗಿನಿಂದ ನೀಡುವ ಮೊದಲ ಲಸಿಕೆ ಶೀಘ್ರ ಮಾರುಕಟ್ಟೆಗೆ

ಹೊಸವರ್ಷದಿಂದ ಕೊರೋನಾ (Covid 19) ವಿರುದ್ಧದ ಹೋರಾಟಕ್ಕೆ ಇನ್ನಷ್ಟು ಬಲ ಬರಲಿದೆ. ಡಿಎನ್‌ಎ (DNA) ಆಧಾರಿತ ಮೊದಲ ಲಸಿಕೆ ಸಿದ್ಧಪಡಿಸಿದೆ ಭಾರತ. ಮೂಗಿನಿಂದ ನೀಡುವ ಮೊದಲ ಲಸಿಕೆ ಶೀಘ್ರ ಮಾರುಕಟ್ಟೆಗೆ ಬರಲಿದೆ. 

First Published Dec 26, 2021, 9:16 AM IST | Last Updated Dec 26, 2021, 9:16 AM IST

ಬೆಂಗಳೂರು (ಡಿ. 26): ಹೊಸವರ್ಷದಿಂದ ಕೊರೋನಾ ವಿರುದ್ಧದ ಹೋರಾಟಕ್ಕೆ (Covid 19) ಇನ್ನಷ್ಟು ಬಲ ಬರಲಿದೆ. ಡಿಎನ್‌ಎ (DNA) ಆಧಾರಿತ ಮೊದಲ ಲಸಿಕೆ ಸಿದ್ಧಪಡಿಸಿದೆ ಭಾರತ. ಮೂಗಿನಿಂದ ನೀಡುವ ಮೊದಲ ಲಸಿಕೆ ಶೀಘ್ರ ಮಾರುಕಟ್ಟೆಗೆ ಬರಲಿದೆ. 

ಜನವರಿ 3 ರಿಂದ 15-18 ವರ್ಷದೊಳಗಿನ ಮಕ್ಕಳಿಗೆ ಕೋವಿಡ್ ಲಸಿಕೆ ಅಭಿಯಾನ ನಡೆಯಲಿದೆ. 'ಜಗತ್ತಿನಾದ್ಯಂತ ಒಮಿಕ್ರೋನ್ ಅಬ್ಬರ ಆರಂಭವಾಗಿದೆ. ಭಾರತದಲ್ಲೂ ವೈರಸ್ ಪತ್ತೆಯಾಗುತ್ತಿದೆ. ಆತಂಕ ಬೇಡ. ಎಚ್ಚರದಿಂದಿರಿ. ಮಾಸ್ಕ್, ಸಾಮಾಜಿಕ ಅಂತರ ಸೇರಿ ಕೋವಿಡ್ ಸನ್ನಡತೆ ಪಾಲಿಸಿ' ಎಂದು ಪ್ರಧಾನಿ ಮೋದಿ ಮನವಿ ಮಾಡಿದರು.