ನೆಹರು ಹಾಕಿದ್ದ ಅಡಿಗಲ್ಲು ಮೋದಿ ಕಾಲದಲ್ಲಿ ನೀರು: ನದಿಗೆ ಅಡ್ಡ ನಿಂತಿದ್ದು ಯಾರು?

ನೆಹರು ಕಾಲದಲ್ಲಿ ಅಡಿಗಲ್ಲು ಕಂಡಿದ್ದ ಯೋಜನೆ ಮೋದಿ ಕಾಲದಲ್ಲಿ ಕಂಪ್ಲೀಟ್ ಆಗಿದೆ. ಏನಿದು ಸಾಹಸ? ಏನಿದು ಮೋದಿಯ ಯಶೋಗಾಥೆ ಅನ್ನೋದನ್ನ ನೋಡೋಣ ಬನ್ನಿ

Share this Video
  • FB
  • Linkdin
  • Whatsapp

ನವದೆಹಲಿ (ಜುಲೈ 11): 75 ವರ್ಷ, 734 ಕಿಲೋ ಮೀಟರ್‌ ದೂರ, ಉಪ್ಪಿನ ಮರುಭೂಮಿಗೆ ಕೊನೆಗೂ ಬಂದಳು ನರ್ಮದೆ. ಅಂದಿನ ಪ್ರಧಾನಿ ಜವಹರಲಾಲ್‌ ನೆಹರು ಹಾಕಿದ್ದ ಅಡಿಗಲ್ಲಿನ ಯೋಜನೆ ಈಗಿನ ಪ್ರಧಾನಿ ನರೇಂದ್ರ ಮೋದಿ ಕಾಲದಲ್ಲಿ ಕಂಪ್ಲೀಟ್‌ ಆಗಿದೆ. ಇಂಥದ್ದೊಂದು ಮಹತ್ವಾಕಾಂಕ್ಷೆಯ ಯೋಜನೆ ಇಷ್ಟು ವಿಳಂಬವಾಗಿದ್ದೇಕೆ?

ಅಷ್ಟಕ್ಕೂ ನದಿ ನೀರಿಗೆ ಅಡ್ಡವಾಗಿ ನಿಂತಿದ್ದು ಯಾರು ಎನ್ನುವ ಕುತೂಹಲ ಎಲ್ಲರಲ್ಲಿದೆ. ಸುದೀರ್ಘ ವರ್ಷಗಳ ಕನಸು ನನಸಾದ ಸಂಭ್ರಮದಲ್ಲಿರುವ ಗುಜರಾತ್‌ನ (Gujarat) ಜನತೆ ಪ್ರಧಾನಿ ನರೇಂದ್ರ ಮೋದಿಗೆ (PM Modi) ಉಘೇ ಉಘೇ ಎಂದಿದ್ದಾರೆ. ಮೋದಿ ಇದ್ದರೆ ಎಲ್ಲವೂ ಸಾಧ್ಯ ಎನ್ನುತ್ತಿದ್ದಾರೆ. ಅಷ್ಟಕ್ಕೂ ಈ ಯೋಜನೆಗಾಗಿ ಮೋದಿ ಪಟ್ಟ ಶ್ರಮವೆಷ್ಟು ಎನ್ನುವುದರ ರಿಪೋರ್ಟ್‌.

ಇದನ್ನೂ ಓದಿ: ಸರ್ದಾರ್ ಪಟೇಲ್ ಏಕತಾ ಪ್ರತಿಮೆ ಬಳಿಯ 300 ಮೊಸಳೆಗಳ ಸ್ಥಳಾಂತರ: ಯಾಕೆ..?

ಕಳೆದ ಗುರುವಾರ ಅಂದರೆ, ಜುಲೈ 7ರ ಮಧ್ಯರಾತ್ರಿ 1.15ರ ಸುಮಾರಿಗೆ ಉಪ್ಪಿನ ಮರುಭೂಮಿ ಕಛ್‌ ಜಿಲ್ಲೆಯ ಮಾಂಡ್ವಿ (Mandvi) ತಾಲೂಕಿನ ಮೊಡ್‌ ಕುಬಾ ಗ್ರಾಮಕ್ಕೆ ನರ್ಮದೆ ಹರಿದಾಗ ಇಡೀ ಗ್ರಾಮದ ಆಕಾಶ ಪಟಾಕಿಯಿಂದ ತುಂಬಿಹೋಗಿತ್ತು. 750 ಕಿಲೋಮೀಟರ್‌ ದೂರದ ನರ್ಮದಾ ಅಣೆಕಟ್ಟಿನಿಂದ ಕಛ್ ಬ್ರ್ಯಾಂಚ್‌ ಚನಲ್‌ (KBC) ಮೂಲಕ ನೀರು ಗ್ರಾಮಕ್ಕೆ ತಲುಪಿತ್ತು.

Related Video