
ಬಡತನದ ಕಾರ್ಗತ್ತಲಲ್ಲಿ ಮೂಡಿತ್ತು ಭರವಸೆಯ ಬೆಳಕು: 11 ವರ್ಷ, ಹತ್ತಾರು ಯೋಜನೆ, ಅದೊಂದು ಮಹಾನ್ ಗುರಿ!
ಭಾರತದಲ್ಲಿ ಪ್ರತಿ ಬಾರಿ ಸರ್ಕಾರ ಬದಲಾದಾಗ ಬಡವರ್ಗದ ಜನರು ಬದಲಾವಣೆಯ ನಿರೀಕ್ಷೆಯಲ್ಲಿರುತ್ತಾರೆ. ನರೇಂದ್ರ ಮೋದಿ ಅವರು ಪ್ರಧಾನಿಯಾದ 11 ವರ್ಷಗಳಲ್ಲಿ ಬಡವರ ಬದುಕು ಸುಧಾರಿಸಲು ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ.
ಬೆಂಗಳೂರು (ಜೂ.10): ಭಾರತದಲ್ಲಿ ಪ್ರತಿ ಬಾರಿ ಸರ್ಕಾರ ಬದಲಾದಾಗಲೂ, ಹೊಸ ನಾಯಕ ಸಿಕ್ಕಾಗಲೂ ಎಲ್ಲರಿಗಿಂತ ಹೆಚ್ಚಾಗಿ ಅದೊಂದು ವರ್ಗ ಕಣ್ಣರಳಿಸಿ ನೋಡುತ್ತಾ ಇರುತ್ತೆ. ಬಡತನದ ಬೇಗೆಯಲ್ಲಿ ಬೇಯುತ್ತಿರೋ ಈ ಬದುಕು ಇನ್ನಾದರು ಬದಲಾಗುತ್ತಾ..? ಸುಧಾರಣೆಯ ಹಾದಿ ಹಿಡಿಯುತ್ತಾ.? ಎಂದು ಕಾದು ಕೂರುವ ಬಡವರ್ಗವದು.
Add Asianetnews Kannada as a Preferred Source

ಸರ್ಕಾರಗಳು ಬದಲಾದವೂ, ನಾಯಕರುಗಳು ಬಂದು ಹೋದ್ರು. ಆದರೆ, ಆ ಕಣ್ಣುಗಳಲ್ಲಿ ನಿರೀಕ್ಷೆ ಹಾಗೇಯೆ ಇತ್ತು. ಆದ್ರೆ, ಮೊದಲ ಬಾರಿ ಆ ವರ್ಗಕ್ಕೆ ನಮ್ಮ ನಿರೀಕ್ಷೆಯೂ ನಿಜವಾಗಬಹುದು ಎಂಬ ಗಟ್ಟಿ ನಂಬಿಕೆ ಮೂಡಿತ್ತು.
ನರೇಂದ್ರ ಮೋದಿ ದೇಶದ ಪ್ರಧಾನ ಮಂತ್ರಿಯಾಗಿ 11 ವರ್ಷಗಳ ಹಿಂದೆ ಮೊದಲ ಬಾರಿ ಅಧಿಕಾರ ಸ್ವೀಕರಿಸಿದ್ರಲ್ಲಾ ಆಗಲೇ ಭಾರತದ ಬಡವರ್ಗದ ಜನರಲ್ಲಿ ಒಂದು ಗಟ್ಟಿ ನಂಬಿಕೆ ಮೂಡಿತ್ತು. ಅವರ ನಂಬಿಕೆ ಹುಸಿಯಾಗಲಿಲ್ಲ. ವರ್ಷಗಳು ಉರುಳಿದಂತೆ ನಂಬಿಕೆ ಗಟ್ಟಿಯಾಗ್ತಲೇ ಇದೆ. ಅದಕ್ಕೆ ಕಾರಣ ಕಳೆದ 11 ವರ್ಷಗಳಲ್ಲಿ ನಮೋ ಸರ್ಕಾರ ಈ ಬಡವರ್ಗಕ್ಕೆ ಕೊಟ್ಟಿರೋ ಯೋಜನೆಗಳು. ಅವರ ಬದುಕನ್ನ ಸುಧಾರಿಸೋಕೆ ತೆಗೆದುಕೊಂಡ ದಿಟ್ಟ ಕ್ರಮಗಳು.