ಮಹಿಳಾ ಸಬಲೀಕರಣಕ್ಕೆ ಕೇಂದ್ರದ ಕ್ರಾಂತಿಕಾರಿ ನಡೆ,ಭಾರತೀಯ ನಾರಿಯರ ಮನಗೆದ್ದ ಯೋಜನೆ ಯಾವುದು
ಮೋದಿ ಸರ್ಕಾರ ಕಳೆದ 11 ವರ್ಷದಲ್ಲಿ ಹಲವು ಕ್ರಾಂತಿಕಾರ ಹೆಜ್ಜೆ ಇಟ್ಟಿದೆ. ಇದರ ನಡುವೆ ಮಹಿಳಾ ಸಬಲೀಕರಣಕ್ಕೆ ರೂಪಿಸಿದ ಯೋಜನೆಗಳು ಹೊಸ ಮೈಲಿಗಲ್ಲು ನಿರ್ಮಿಸಿದೆ. ಕಳೆದ 11 ವರ್ಷದಲ್ಲಿ ಮಹಿಳಾ ಶಕ್ತಿಯ ಸದ್ಭಳಿಕೆ ಆಗಿದ್ದು ಹೇಗೆ..? ಸ್ತ್ರೀ ಸಬಲೀಕರಣದಲ್ಲಿ ಮೋದಿ ಸರ್ಕಾರದ ಮೈಲಿಗಲ್ಲುಗಳೇನು..?
ಕಳೆದ 11 ವರ್ಷದಿಂದ ನರೇಂದ್ರ ಮೋದಿಯವರ ಕೇಂದ್ರ ಸರ್ಕಾರವು ಭಾರತದ ಅಭಿವೃದ್ಧಿ ಪ್ರಯಾಣದಲ್ಲಿ ನಾರಿಶಕ್ತಿಯನ್ನ ಮುಂಚೂಣಿಯಲ್ಲಿರಿಸಿದೆ. ಮಹಿಳೆಯ ಕಲ್ಯಾಣಕ್ಕಾಗಿ ವಿವಿಧ ಹಂತಗಳಲ್ಲಿ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದೆ ಕೇಂದ್ರ ಸರ್ಕಾರ. ಮಹಿಳೆಯರನ್ನ ಸಬಲೀಕರಣಗೊಳಿಸಲು ಹಾಗೂ ಅವರನ್ನ ಸದಾ ಕಾಡ್ತಾ ಇರೋ ಸಾಮಾಜಿಕ ಹಾಗೂ ಆರ್ಥಿಕ ಅಡೆತಡೆಯನ್ನ ಇಲ್ಲವಾಗಿಸೋಕೆ ಕೇಂದ್ರ ಸರ್ಕಾರ ಹಿಂದೆಂದೂ ಕಂಡಿರದಷ್ಟು ಯೋಜನೆಗಳು ಜಾರಿಗೆ ತಂದಿದೆ.