ಅಂಬಾನಿ ಮನೆಯಲ್ಲಿ ವಿವಾಹ ವೈಭವ! ಅತಿಥಿಗಳ ಓಡಾಟಕ್ಕೆ 3 ಜೆಟ್.. 100 ಪ್ರೈವೇಟ್ ಪ್ಲೇನ್!

ಮದುವೆ ಸಂಭ್ರಮದಲ್ಲಿ ಭಾಗಿಯಾಯ್ತು ಬಾಲಿವುಡ್!
ದಿನಕ್ಕೊಂದು ವಿಶೇಷತೆ.. ಕ್ಷಣಕ್ಕೊಂದು ಕೌತುಕ..!
ಆಪ್ತಮಿತ್ರರ ಆತ್ಮಬಂಧನದ ಪ್ರೇಮ್ ಕಹಾನಿ ಇದು..!
 

Share this Video
  • FB
  • Linkdin
  • Whatsapp

ಜಗತ್ತಿನ ದಿಗ್ಗಜರನ್ನೇ ದಿಗ್ಭ್ರಾಂತಗೊಳಿಸಿದೆ ಅಂಬಾನಿ ಮನೆಯ ಮದುವೆ ಸಂಭ್ರಮ. ಶುಭವಿವಾಹದಿಂದ ಮಂಗಳೋತ್ಸವದ ತನಕ ಸಾವಿರಾರು ಸ್ಪೆಷಾಲಿಟಿ ಇದೆ. 1500 ಕೋಟಿ ಬಜೆಟ್ ಮದುವೆಲಿ ಅಡ್ಡಾಡೋಕೆ ಬುಕ್ ಆಗಿವೆ 3 ಫ್ಯಾಲ್ಕನ್-2000 ಜೆಟ್. ಭಾರತದಲ್ಲಿ ಸಾಮಾನ್ಯ ಜನರ ಪಾಲಿಗೆ ಮದುವೆ ಅನ್ನೋದು ದೊಡ್ಡ ಜವಾಬ್ದಾರಿ. ಅತಿ ದೊಡ್ಡ ಸವಾಲು. ಮುಕೇಶ್ ಅಂಬಾನಿ(Mukesh Ambani) ಹೇಳಿ ಕೇಳಿ ದೇಶದ ನಂಬರ್ 1 ಶ್ರೀಮಂತ. ಕಲಿಯುಗದ ಕುಬೇರ. ಅವರು ಕಿರಿಯ ಮಗನ ಮದುವೆ (Marriage) ಮಾಡ್ತಾ ಇದಾರೆ. ವೆಡ್ಡಿಂಗ್ ಕಾರ್ಡ್‌ನಿಂದ ಹಿಡಿದು, ವಿವಾಹ ವೇದಿಕೆ ತನಕ.. ಮದು ಮಕ್ಕಳು ಹಾಕೋ ಬಟ್ಟೆಯಿಂದ ಮೊದಲ್ಗೊಂದು ಎಲೆತುದಿಗೆ ಬಡಿಸೋ ವಿವಾಹ ಭೋಜನದ ತನಕ, ಎಲ್ಲೆಲ್ಲೂ ವೈಭೋಗವೇ ತುಂಬಿ ತುಳುಕ್ತಾ ಇದೆ. ನೀವು ಈ ವೈಭವವನ್ನ ಬಿಲಿಯನ್ ಡಾಲರ್ ಬಜೆಟ್‌ ಸಿನಿಮಾಗಳಲ್ಲೂ ನೋಡಿರೋಕೆ ಸಾಧ್ಯವೇ ಇಲ್ಲ ಬಿಡಿ. ಮುಕೇಶ್ ಅಂಬಾನಿ, ನೀತಾ ಅಂಬಾನಿ(Nita Ambani), ಈ ಭಲೆ ಜೋಡಿಯ ಮೂರನೇ ಸಂತಾನ ಈ ಅನಂತ್ ಅಂಬಾನಿ(Anant Ambani). ಮೊದಲೇ ಮಗನ ಮದುವೆನಾ ಹಾಗೂ ಹೀಗೂ ಮಾಡಿ ಮುಗಿಸಿದ್ದ ಈ ಇಬ್ಬರು, ತಮ್ಮ ಕಿರಿಮಗನ ಮದುವೆನಾ ಮಾತ್ರ ಅತ್ಯಂತ ವೈಭವಯುತವಾಗಿ ಮಾಡ್ತಿದ್ದಾರೆ.

ಇದನ್ನೂ ವೀಕ್ಷಿಸಿ: ಸುವರ್ಣ ಸೌಧದಲ್ಲಿ ನಡೆದ ಕೆಡಿಸಿ ಸಭೆಗೆ ಒಂದೇ ಕಾರಿನಲ್ಲಿ ಬಂದ ತಂದೆ ಮಗಳು!

Related Video