Asianet Suvarna News Asianet Suvarna News

ಜನಸಂಖ್ಯಾ ನಿಯಂತ್ರಣದ ಸಂದೇಶ ಕೊಟ್ಟಿತಾ RSS?

ಆರೆಸ್ಸೆಸ್ ಸರಸಂಘಚಾಲಕ ಮೋಹನ್‌ ಭಾಗ್ವತ್‌, ವಾರ್ಷಿಕ ವಿಜಯದಶಮಿಯ ಭಾಷಣದಲ್ಲಿ ಈ ಬಾರಿ ಪ್ರಮುಖ ವಿಚಾರಗಳ ಬಗ್ಗೆ ಮಾತನಾಡಿತು. ಈ ವೇಳೆ ಜನಸಂಖ್ಯೆ ನಿಯಂತ್ರಣಕ್ಕೆ ನಿಯಮಬೇಕು ಎನ್ನುವ ಅಗತ್ಯವನ್ನು ಒತ್ತಿ ಹೇಳಿದೆ.

ಬೆಂಗಳೂರು (ಅ.6): ಆರೆಸ್ಸೆಸ್‌ನ ಮುಖ್ಯಸ್ಥ ಮೋಹನ್‌ ಭಾಗ್ವತ್‌ ಈ ಬಾರಿಯ ವಿಜಯದಶಮಿಯ ಭಾಷಣದಲ್ಲಿ ಸಾಕಷ್ಟು ವಿಚಾರಗಳ ಬಗ್ಗೆ ಮಾತನಾಡಿದರು. ಈ ವೇಳೆ ಜನಸಂಖ್ಯೆ ನಿಯಂತ್ರಣದ ಬಗ್ಗೆಯೂ ಸಂದೇಶ ಕೊಟ್ಟಿದೆ. ಧರ್ಮಾಧಾರಿತ ಜನಸಂಖ್ಯೆ ಬಗ್ಗೆ ಆರೆಸ್ಸೆಸ್‌ ಬಗ್ಗೆ ದೊಡ್ಡ ಮಟ್ಟದ ಶಂಕೆ ಕಾಡಿದೆ. ಇದರ ನಿಟ್ಟಿನಲ್ಲಿ ಸರ್ಕಾರಕ್ಕೆ ಮಹತ್ವದ ಸಂದೇಶವನ್ನು ನೀಡಿದೆ.

ಭಾರತದಲ್ಲಿ ಜನಸಂಖ್ಯಾ ನಿಯಂತ್ರಣಕ್ಕೆ ಒಂದು ಕಾನೂನು ಬರ್ಬೇಕು ಅನ್ನೋದು ಆರೆಸ್ಸೆಸ್ ಮುಖ್ಯಸ್ಥರಾದ ವ್ಯಕ್ತಿಗಳು ಬಹಳ ವರ್ಷಗಳಿಂದ ಹೇಳುತ್ತಿರುವ ಮಾತು. ಅದಕ್ಕೆ ಕೆಲವೊಮ್ಮೆ ಸರ್ಕಾರ ಸ್ಪಂದನೆ ನೀಡಿದ್ದರೂ ಅದಿನ್ನೂ ಜಾರಿಯಾಗಿಲ್ಲ.

ನಾವು ಒಗ್ಗಟ್ಟಾಗಿರಬೇಕು, ಅಲ್ಪಸಂಖ್ಯಾತರಿಗೆ ಭಾರತದಲ್ಲಿ ಅಪಾಯವಿಲ್ಲ: ಮೋಹನ್‌ ಭಾಗ್ವತ್‌

ನಾಗ್ಪುರದಲ್ಲಿ ಈ ಬಾರಿಯ ಭಾಷಣದಲ್ಲಿ ಮೋಹನ್‌ ಭಾಗ್ವತ್‌ ಅವರು ಜನಸಂಖ್ಯೆ ಹೆಚ್ಚಳದಿಂದ ಏನಾಗಲಿದೆ ಎನ್ನುವುದನ್ನು ಸೂಚ್ಯವಾಗಿ ವಿವರಿಸಿದರು. 50 ವರ್ಷಗಳ ಹಿಂದೆ ಇದೇ ಅಸಮತೋಲನದಿಂದಾಗಿ ದೇಶ ವಿಭಜನೆ ಆಗಿತ್ತು. ಮತ್ತೆ ಅಸಮತೋಲನವಾದಲ್ಲಿ, ದೇಶ ವಿಭಜನೆಯಾಗುವ ಆತಂಕವೂ ಇದೆ ಎಂದು ಹೇಳಿದ್ದಾರೆ.