Asianet Suvarna News Asianet Suvarna News

ನಾವು ಒಗ್ಗಟ್ಟಾಗಿರಬೇಕು, ಅಲ್ಪಸಂಖ್ಯಾತರಿಗೆ ಭಾರತದಲ್ಲಿ ಅಪಾಯವಿಲ್ಲ: ಮೋಹನ್‌ ಭಾಗ್ವತ್‌

ತಮ್ಮ ವಾರ್ಷಿಕ ವಿಜಯದಶಮಿ ಭಾಷಣದಲ್ಲಿ, ಬೆಳೆಯುತ್ತಿರುವ ಜನಸಂಖ್ಯೆಯನ್ನು ಪರಿಶೀಲಿಸಲು ದೇಶವು ಸಮಗ್ರ ನೀತಿಯನ್ನು ಹೊಂದಿರಬೇಕು ಎಂದು ಮತ್ತೊಮ್ಮೆ ಒತ್ತಿ ಹೇಳಿದರು. ಇದೇ ವೇಳೆ ದೇಶಕ್ಕೆ ಜನಸಂಖ್ಯಾ ನೀತಿ ಅಗತ್ಯವಿರುವ ಬಗ್ಗೆಯೂ ಮಾತನಾಡಿದರು.
 

RSS chief Mohan Bhagwat Vijayadashami speech No danger to minorities in India we have to stay together san
Author
First Published Oct 5, 2022, 11:34 PM IST

ನಾಗ್ಪುರ (ಅ.5): ಹಿಂದೂಗಳಿಂದಾಗಿ ಭಾರತದಲ್ಲಿ ಅಲ್ಪಸಂಖ್ಯಾತರಿಗೆ ಅಪಾಯವಿದೆ ಎಂದು ಹೇಳುವ ಮೂಲಕ ಕೆಲವರು ಹೆದರಿಸುವ ಕೆಲಸ ಮಾಡುತ್ತಿದ್ದಾರೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ ಮೋಹನ್ ಭಾಗ್ವತ್‌ ಬುಧವಾರ ಹೇಳಿದ್ದಾರೆ. "ಇದು ಸಂಘದ ಅಥವಾ ಹಿಂದೂಗಳ ಸ್ವಭಾವವಲ್ಲ" ಎಂದು ಅವರು ನಾಗ್ಪುರದಲ್ಲಿ ತಮ್ಮ ವಾರ್ಷಿಕ ವಿಜಯದಶಮಿ ಭಾಷಣದಲ್ಲಿ ಮಾತನಾಡಿದ್ದಾರೆ. "ಸಂಘವು ಸಹೋದರತ್ವ, ಸೌಹಾರ್ದತೆ ಮತ್ತು ಶಾಂತಿಯ ಪರವಾಗಿ ನಿಲ್ಲಲು ನಿರ್ಧರಿಸುತ್ತದೆ." ಹಿಂದೂ ರಾಷ್ಟ್ರ ಅಥವಾ ಹಿಂದೂ ರಾಷ್ಟ್ರದ ಪರಿಕಲ್ಪನೆಯನ್ನು ಈಗ ಗಂಭೀರವಾಗಿ ಪರಿಗಣಿಸಲಾಗುತ್ತಿದೆ ಎಂದು ಭಾಗ್ವತ್‌ ಇದೇ ವೇಳೆ ಹೇಳಿದ್ದಾರೆ. "ಅನೇಕ ಜನರು ಈ ಪರಿಕಲ್ಪನೆಯನ್ನು ಒಪ್ಪುತ್ತಾರೆ, ಆದರೆ 'ಹಿಂದೂ' ಪದವನ್ನು ವಿರೋಧಿಸುತ್ತಾರೆ ಮತ್ತು ಅವರು ಇತರ ಪದಗಳನ್ನು ಬಳಸಲು ಬಯಸುತ್ತಾರೆ" ಎಂದು ಅವರು ಹೇಳಿದರು. "ನಮಗೆ ಅದರಲ್ಲಿ ಯಾವುದೇ ಸಮಸ್ಯೆ ಇಲ್ಲ. ಪರಿಕಲ್ಪನೆಯ ಸ್ಪಷ್ಟತೆಗಾಗಿ, ನಾವು ನಮಗಾಗಿ ಹಿಂದೂ ಪದವನ್ನು ಬಳಸಿಕೊಳ್ಳುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ. ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥರು ಸಮಾಜವನ್ನು ವಿಭಜಿಸುವ ಪ್ರಯತ್ನಗಳು ನಡೆಯುತ್ತಿರುವಾಗ, "ನಾವು ಒಟ್ಟಿಗೆ ಇರಬೇಕು" ಎಂದು ಒತ್ತಿ ಹೇಳಿದ್ದಾರೆ.

ಆರೆಸ್ಸೆಸ್‌ ಬಗ್ಗೆ ತಪ್ಪು ಮಾಹಿತಿ ನೀಡಲಾಗುತ್ತಿದೆ ಎಂದು ಹೇಳಿರುವ ಮೋಹನ್‌ ಭಾಗ್ವತ್‌ (Rashtriya Swayamsevak Sangh chief Mohan Bhagwat ) ಅವರು, "ಭಯೋತ್ಪಾದಕ ಶಕ್ತಿಗಳಿಂದ" ದೇಶವನ್ನು ರಕ್ಷಿಸಲು ನಮ್ಮ ಸಂಘಟನೆ ಕೆಲಸ ಮಾಡುತ್ತದೆ ಎಂದು ಹೇಳಿದರು. ಇನ್ನೊಬ್ಬರ ಮೇಲೆ ಪ್ರಾಬಲ್ಯ ಸಾಧಿಸಬೇಕು ಎಂದು ಆರೆಸ್ಸೆಸ್‌ ಎಂದಿಗೂ ಬಯಸಿಲ್ಲ ಎಂದರು.
ನಾವು ಶಕ್ತಿಯನ್ನು ಪಡೆಯಲು ಯಾವುದನ್ನಾದರೂ ವಶಪಡಿಸಿಕೊಳ್ಳಬೇಕು ಎಂದು ಬಯಸುವುದಿಲ್ಲ. ಆರೆಸ್ಸೆಸ್‌ನವರು (RSS) ನಮಗೆ ಹೊಡೆಯುತ್ತಾರೆ ಎಂದು ಜನರು ಹೆದರುತ್ತಾರೆ. ಈ ಹಿಂದು ಸಂಘಟನೆ ಎಲ್ಲರನ್ನೂ ಹೊರಹಾಕುತ್ತದೆ ಎಂದುಕೊಳ್ಳುತ್ತಾರೆ. ಆದರೆ, ಈ ತಪ್ಪು ಮಾಹಿತಿಯನ್ನು ವಿಪರೀತವಾಗಿ ಹಂಚಲಾಗುತ್ತಿದೆ.  ಈ ಭಯದಿಂದಾಗಿಯೇ ಕಳೆದ ಕೆಲವು ವರ್ಷಗಳಿಂದ ಅಲ್ಪಸಂಖ್ಯಾತ ಸಮುದಾಯದ ಕೆಲವರು ನಮ್ಮನ್ನು ಭೇಟಿಯಾಗುತ್ತಿದ್ದಾರೆ. ನಾವು ಸಮುದಾಯದ ಜನರನ್ನು ಸಹ ಭೇಟಿ ಮಾಡುತ್ತಿದ್ದೇವೆ ಎಂದರು. ಕಳೆದ ತಿಂಗಳು, ಭಾಗ್ವತ್‌ ಅವರು ಮಾಜಿ ಮುಖ್ಯ ಚುನಾವಣಾ ಆಯುಕ್ತ ಎಸ್‌ವೈ ಖುರೈಷಿ, ದೆಹಲಿಯ ಮಾಜಿ ಲೆಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್, ನಿವೃತ್ತ ಸೇನಾ ಅಧಿಕಾರಿ ಜಮೀರ್ ಉದ್ದೀನ್ ಶಾ, ರಾಷ್ಟ್ರೀಯ ಲೋಕದಳದ ನಾಯಕ ಶಾಹಿದ್ ಸಿದ್ದಿಕಿ ಮತ್ತು ಉದ್ಯಮಿ ಸಯೀದ್ ಶೆರ್ವಾನಿ ಅವರನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ ಮೋಹನ್‌ ಭಾಗ್ವತ್‌ ಭೇಟಿ ಮಾಡಿದ್ದರು.

ಭಾಷಣದಲ್ಲಿ,ನೂಪುರ್ ಶರ್ಮಾ ಅವರು ಪ್ರವಾದಿ ಪೈಗಂಬರ್‌ ಬಗ್ಗೆ ಅವಹೇಳನಕಾರಿ ಹೇಳಿಕೆಗಳನ್ನು ಬೆಂಬಲಿಸಿದ ಆರೋಪದ ಮೇಲೆ ಉದಯಪುರ ಮತ್ತು ಅಮರಾವತಿಯಲ್ಲಿ ಇಬ್ಬರ ಹತ್ಯೆಯನ್ನು ಉದ್ದೇಶಿಸಿ ಭಾಗ್ವತ್‌ ಮಾತನಾಡಿದರು. ಘಟನೆಗಳನ್ನು "ಘೋರ ಅಪರಾಧಗಳು" ಎಂದು ಬಣ್ಣಿಸಿದ ಅವರು, ಇಡೀ ಸಮಾಜವು ಆಘಾತ, ದುಃಖ ಮತ್ತು ಕೋಪಗೊಂಡಿದೆ ಎಂದು ಹೇಳಿದರು.

ನಾನ್‌ ವೆಜ್‌ ತಿಂದರೆ ಕೆಟ್ಟ ಕೆಲಸ ಮಾಡುತ್ತೀರ: RSS ಮುಖ್ಯಸ್ಥ ಮೋಹನ್‌ ಭಗವತ್‌ ವಿವಾದ

"ಉದಯಪುರ (Udaipur incident) ಘಟನೆಯ ನಂತರ, ಮುಸ್ಲಿಮರ ಕೆಲವು ಪ್ರಮುಖ ವ್ಯಕ್ತಿಗಳು ಘಟನೆಯ ವಿರುದ್ಧ ತಮ್ಮ ಪ್ರತಿಭಟನೆಯನ್ನು ವ್ಯಕ್ತಪಡಿಸಿದ್ದಾರೆ" ಎಂದರು. "ಈ ರೀತಿಯ ಪ್ರತಿಭಟನೆಗಳು ಮುಸ್ಲಿಂ ಸಮಾಜದೊಳಗೆ ಒಂದು ಪ್ರತ್ಯೇಕ ವಿದ್ಯಮಾನವಾಗಬಾರದು ಬದಲಿಗೆ ಅದು ಅವರ ದೊಡ್ಡ ವರ್ಗಗಳ ಸ್ವರೂಪವಾಗಬೇಕು." ಹತ್ಯೆಗಳಿಗೆ ಇಡೀ ಸಮುದಾಯವನ್ನು ದೂಷಿಸಲಾಗುವುದಿಲ್ಲ ಮತ್ತು ಇಂತಹ ಘಟನೆಗಳ ವಿರುದ್ಧ ಎಲ್ಲರೂ ಧ್ವನಿ ಎತ್ತಬೇಕಾಗಿದೆ ಎಂದು ಭಾಗ್ವತ್‌ (RSS Chif Vijayadashami speech) ಹೇಳಿದ್ದಾರೆ.

ಆರೆಸ್ಸೆಸ್‌ ಚೀಫ್‌ ಮೋಹನ್‌ ಭಾಗವತ್‌, ರಾಷ್ಟ್ರಪಿತ ಮತ್ತು ರಾಷ್ಟ್ರ ಋಷಿ: ಇಮಾಮ್ ಉಮರ್ ಅಹ್ಮದ್ ಇಲ್ಯಾಸಿ!

ಜನಸಂಖ್ಯಾ ನೀತಿ (Population policy) ಅಗತ್ಯವಿದೆ: ಹೆಚ್ಚುತ್ತಿರುವ ಜನಸಂಖ್ಯೆಯನ್ನು ನಿಯಂತ್ರಿಸಲು ಭಾರತವು ಸಮಗ್ರ ನೀತಿಯನ್ನು ಹೊಂದಿರಬೇಕು ಮತ್ತು ಅದು ಎಲ್ಲಾ ಸಮುದಾಯಗಳಿಗೆ ಸಮಾನವಾಗಿ ಅನ್ವಯಿಸಬೇಕು ಎಂದು ಭಾಗ್ವತ್‌ ತಮ್ಮ ಭಾಷಣದಲ್ಲಿ ಹೇಳಿದರು. "50 ವರ್ಷಗಳ ಹಿಂದೆ ಇದರ ಅಸಮತೋಲನ ಉಂಟಾದಾಗ, ನಾವು ಗಂಭೀರ ಪರಿಣಾಮಗಳನ್ನು ಅನುಭವಿಸಿದ್ದೇವೆ" ಎಂದು ಅವರು ಹೇಳಿದರು. "ಇದು ನಮಗೆ ಮಾತ್ರ ಸಂಭವಿಸಿಲ್ಲ. ಇಂದಿನ ಸಮಯದಲ್ಲಿ, ಪೂರ್ವ ಟಿಮೋರ್, ದಕ್ಷಿಣ ಸುಡಾನ್ ಮತ್ತು ಕೊಸೊವೊದಂತಹ ಹೊಸ ದೇಶಗಳನ್ನು ರಚಿಸಲಾಗಿದೆ. ಆದ್ದರಿಂದ, ಜನಸಂಖ್ಯೆಯ ಅಸಮತೋಲನ ಉಂಟಾದಾಗ, ಹೊಸ ದೇಶಗಳು ಸೃಷ್ಟಿಯಾಗುತ್ತವೆ. ದೇಶಗಳು ವಿಭಜನೆಗೊಂಡಿವೆ ಎಂದರು. ಸೀಮಿತ ಸಂಪನ್ಮೂಲಗಳನ್ನು ಗಮನದಲ್ಲಿಟ್ಟುಕೊಂಡು ಜನಸಂಖ್ಯಾ ನೀತಿಯನ್ನು ರೂಪಿಸಬೇಕು ಎಂದು ಭಾಗವತ್ ಹೇಳಿದರು. "ಭಾರತದಲ್ಲಿ 57 ಕೋಟಿ ಯುವ ಜನಸಂಖ್ಯೆಯೊಂದಿಗೆ, ನಾವು ಮುಂದಿನ 30 ವರ್ಷಗಳವರೆಗೆ ಯುವ ರಾಷ್ಟ್ರವಾಗಿ ಉಳಿಯುತ್ತೇವೆ" ಎಂದು ಅವರು ಹೇಳಿದರು. “ಆದಾಗ್ಯೂ, 50 ವರ್ಷಗಳ ನಂತರ ಭಾರತಕ್ಕೆ ಏನಾಗುತ್ತದೆ? ಜನಸಂಖ್ಯೆಯನ್ನು ಪೋಷಿಸಲು ನಮಗೆ ಸಾಕಷ್ಟು ಆಹಾರವಿದೆಯೇ? ” ಎಂದು ಪ್ರಶ್ನೆ ಮಾಡಿದ್ದಾರೆ.

Follow Us:
Download App:
  • android
  • ios