ಭಾರತದ ಯಾವ ಪ್ರದೇಶದಲ್ಲಿದೆ ಜನಸಂಖ್ಯಾ ಅಸಮತೋಲನ, ಕೇಳುತ್ತಿದೆ ಪ್ರತ್ಯೇಕತಾ ಕೂಗು!

ಮೋಹನ್ ಭಾಗವತ್ ಜನಸಂಖ್ಯಾ ಅಸಮತೋಲನ ಹೇಳಿಕೆ ನೀಡಲು ಕಾರಣವೇನು? ಕಾಂಗ್ರೆಸ್ ಭಾರತ್ ಜೋಡೋ ಯಾತ್ರೆ, ಡಿಕೆಶಿಗೆ ಇಡಿ ಸಮನ್ಸ್, ಬಿಜೆಪಿ ಕಾರ್ಯಕಾರಣಿ ಸಭೆ ಸೇರಿದಂತೆ ಇಂದಿನ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.
 

First Published Oct 6, 2022, 11:25 PM IST | Last Updated Oct 6, 2022, 11:25 PM IST

ಜನಸಂಖ್ಯಾ ಅಸಮತೋಲನ ಭಾರತಕ್ಕೆ ಶಾಪವಾಗಿದೆ. ಈ ರೀತಿಯ ಅಸಮತೋಲನದಿಂದ ಹಲವು ದೇಶಗಳು ವಿಭಜನೆಯಾಗಿದೆ. ಇದು ಭಾರತದಲ್ಲಿ ಮತ್ತೊಮ್ಮೆ ಆಗಬಾರದು. ಇದಕ್ಕೆ ಜನಸಂಖ್ಯಾ ನಿಯಂತ್ರಣ ಕಾನೂನು ಅಗತ್ಯ ಎಂದು ಆರ್‌ಎಸ್ಎಸ್ ಮುಖಂಡ ಮೋಹನ್ ಭಾಗವತ್ ಹೇಳಿದ್ದಾರೆ. ಇದಕ್ಕೆ ಮುಸ್ಲಿಮ ಮುಖಂಡರು ಭಾರಿ ವಿರೋಧ ವ್ಯಕ್ತಪಡಿಸಿದ್ದಾರೆ. ಭಾಗವತ್ ಹೇಳಿಕೆ ಹಿಂದೆ ಭಾರತದಲ್ಲಿ ತಲೆದೋರಿರುವ ಜನಸಂಖ್ಯಾ ಅಸಮತೋಲನ ಚರ್ಚೆಯಾಗುತ್ತಿದೆ. ಭಾರತದ ಕೆಲವು ಪ್ರದೇಶಗಳು ಕೆಲ ಸಮುದಾಯದ ಜನಸಂಖ್ಯಾ ಸ್ಫೋಟ ದೇಶಕ್ಕೆ ಮಾರಕವಾಗಿದೆ. ಇದರ ಭೀತಿ ಭಾರತದ ಕೆಲ ಪ್ರದೇಶಗಳಲ್ಲಿ ಈಗಾಗಲೇ ತಲೆದೋರಿದೆ.ಮೋಹನ್ ಭಾಗವತ್ ಜನಸಂಖ್ಯಾ ಅಸಮತೋಲನ ಹೇಳಿಕೆ ನೀಡಲು ಕಾರಣವೇನು? ಇದರ ಪರಿಣಾಮದಿಂದ ಯಾವೆಲ್ಲಾ ದೇಶಗಳು ವಿಭಜನೆಯಾಗಿದೆ.ಭಾರದ ಮುಂದಿರುವ ಅಪಾಯವೇನು? ಈ ಕುರಿತ ಸಂಪೂರ್ಣ ವಿವರ ಇಲ್ಲಿವೆ.

Video Top Stories