Asianet Suvarna News Asianet Suvarna News

ಕೊರೋನಾ ಸವಾಲಿನ ನಡುವೆಯೂ ಜಿಡಿಪಿ ಏರಿಕೆ: ಮೋದಿ ಕಾರಣ ಎಂದ ಆರ್‌ಸಿ!

Sep 2, 2021, 3:19 PM IST

ನವದೆಹಲಿ(ಸೆ.02) ಕೊರೋನಾ ವೈರಸ್‌ ಕಾರಣದಿಂದಾಗಿ ಕಳೆದ ವರ್ಷ ಮಹಾಪತನ ಕಂಡಿದ್ದ ದೇಶದ ಜಿಡಿಪಿ, ಪ್ರಸಕ್ತ ಹಣಕಾಸು ವರ್ಷದ ಏಪ್ರಿಲ್‌ನಿಂದ ಜೂನ್‌ವರೆಗಿನ ಮೊದಲ ತ್ರೈಮಾಸಿಕದ ಅವಧಿಯಲ್ಲಿ ದಾಖಲೆಯ ಶೇ.20.1ರ ದರದಲ್ಲಿ ವೃದ್ಧಿಯಾಗಿದೆ. ಈ ಮೂಲಕ ದೇಶದ ಆರ್ಥಿಕತೆ ತ್ವರಿತವಾಗಿ ಚೇತರಿಸಿಕೊಳ್ಳುವ ಸುಳಿವು ದೊರೆತಿದೆ.

ಹೀಗಿರುವಾಗ ಕೊರೋನಾ ಸವಾಲಿನ ಮಧ್ಯೆಯೂ ಜಿಡಿಪಿ ಏರಿಕೆ ರೈತರ, ವ್ಯಾಪಾರಿ ವರ್ಗದ ಪರಿಶ್ರಮವೇ ಕಾರಣ ಎಂದು ಕೌಶಲಾಭಿವೃದ್ಧಿ &ಉದ್ಯಮಶೀಲತೆ ಮತ್ತು ಎಲೆಕ್ಟ್ರಾನಿಕ್ಸ್ & ಮಾಹಿತಿ ತಂತ್ರಜ್ಞಾನ ಸಚಿವ ರಾಜೀವ್ ಚಂದ್ರಶೇಖರ್ ಬಣ್ಣಿಸಿದ್ದಾರೆ.

ಜಿಡಿಪಿ ದಾಖಲೆಯ ಏರಿಕೆ ಹಿಂದೆ ಮೋದಿ ಸರ್ಕಾರದ ನೀತಿ, ರೈತರ ದುಡಿಮೆ: ಸಚಿವ ರಾಜೀವ್ ಚಂದ್ರಶೇಖರ್

ಸರ್ಕಾರ ಜಾರಿಗೊಳಿಸಿದ ನೀತಿ ಭಾರತದ ಆರ್ಥಿಕತೆಯನ್ನು ಮತ್ತಷ್ಟು ಬಲಪಡಿಸುವಲ್ಲಿ ಮಹತ್ವಪೂರ್ಣ ಪಾತ್ರ ವಹಿಸಿದೆ ಎಂದಿದ್ದಾರೆ. ಇದೇ ವೇಳೆ ಜಿಡಿಪಿ ಏರಿಕೆಗೆ ಸಂತಸ ವ್ಯಕ್ತಪಡಿಸಿ ಸರಣಿ ಟ್ವೀಟ್ ಮಾಡಿರುವ ಸಚಿವರು ಇದನ್ನು ಭಾರತ ವೇಗವಾಗಿ ಅಭಿವೃದ್ಧಿಗೊಳ್ಳುತ್ತಿರುವುದಕ್ಕೆ ಉದಾಹರಣೆ ಎಂದಿದ್ದಾರೆ.