
ಸಕಲ ಕ್ಷೇತ್ರದಲ್ಲಿ ಸ್ತ್ರೀಗೆ ಅವಕಾಶ, ನಾರಿಗೆ ನಮೋ ಬಲ!ಸ್ತ್ರೀ ಸ್ವಾವಲಂಬನೆಗೆ ಮೋದಿ ಸರ್ಕಾರ ಇಟ್ಟ ಹೆಜ್ಜೆಗಳೇನೇನು?
ಸಕಲ ಕ್ಷೇತ್ರದಲ್ಲಿ ಸ್ತ್ರೀಯರಿಗೆ ಅವಕಾಶ..ನಾರಿ ಶಕ್ತಿ.. ನಮೋ ಬಲ, ರಾಜಕೀಯ.. ರಕ್ಷಣೆ.. ಮಹಿಳಾ ಸಬಲೀಕರಣ ಕೇಂದ್ರದ ಸಾಧನೆ..!
ನಾರಿಶಕ್ತಿ.. ಇದನ್ನ ಸರಿಯಾಗಿ ಬಳಸಿಕೊಂಡ್ರೆ, ಅಸಾಧ್ಯವಾದದ್ದು ಯಾವುದೂ ಇರೋದಿಲ್ಲ. ಆದ್ರೆ ಆ ಶಕ್ತಿಯ ಸದ್ಭಳಿಕೆ ಮಾಡಿಕೊಳ್ಳೋಕೆ ಒಂದು ಇಚ್ಛಾಶಕ್ತಿ ಬೇಕಿತ್ತು. ಭಾರತಕ್ಕೆ ಅಂತಹದೊಂದು ಇಚ್ಛಾಶಕ್ತಿಯ ಕೊರತೆ ಕಾಣ್ತಾಯಿತ್ತು. ಆದ್ರೆ, ಕಳೆದ 11 ವರ್ಷದಲ್ಲಿ ಎಲ್ಲವೂ ಬದಲಾಗಿದೆ. ಯಾಕೆಂದ್ರೆ ಕಳೆದ 11 ವರ್ಷದಲ್ಲಿ ದೇಶದ ಚುಕ್ಕಾಣಿ ಹಿಡಿದು ನಿಂತಿರೋದು ನರೇಂದ್ರ ಮೋದಿ. ಸ್ತ್ರೀ ಸಬಲೀಕರಣಗೊಳಿಸಿ, ಆ ಮೂಲಕ ನಾರಿಶಕ್ತಿಯ ಸದ್ಭಳಿಕೆ ಮಾಡ್ಕೊಂಡು ದೇಶವನ್ನ ಅಭಿವೃದ್ಧಿಯ ಪಥದಲ್ಲಿ ಕರೆದುಕೊಂಡು ಹೋಗ್ತಿದ್ದಾರೆ ಪ್ರಧಾನಿ ನರೇಂದ್ರ ಮೋದಿ.