Prabhu Chauhan: ಉತ್ತರ ರಾಜ್ಯಗಳ ಪ್ರವಾಸದಲ್ಲಿ ಸಚಿವರು, ವಾರಣಾಸಿಯ ಕಾನ್ಹಾ ಉಪವನ ಗೋಶಾಲೆಗೆ ಭೇಟಿ

 ಉತ್ತರ ಪ್ರದೇಶ (Uttar Pradesh) ಗುಜರಾತ್ (Gujarath) ಹಾಗೂ ಮಹಾರಾಷ್ಟ್ರದ (Maharashtra) ಪ್ರವಾಸದಲ್ಲಿದ್ದಾರೆ ಸಚಿವ ಪ್ರಭು ಚವ್ಹಾಣ್.  

First Published Dec 29, 2021, 9:35 AM IST | Last Updated Dec 29, 2021, 9:35 AM IST

ಬೆಂಗಳೂರು (ಡಿ. 29): ಉತ್ತರ ಪ್ರದೇಶ (Uttar Pradesh) ಗುಜರಾತ್ (Gujarath) ಹಾಗೂ ಮಹಾರಾಷ್ಟ್ರದ (Maharashtra) ಪ್ರವಾಸದಲ್ಲಿದ್ದಾರೆ ಸಚಿವ ಪ್ರಭು ಚವ್ಹಾಣ್.  ಉತ್ತರಪ್ರದೇಶದ ವಾರಾಣಸಿಯ ಶೆಹನಶಾಪುರ ಪ್ರದೇಶದಲ್ಲಿರುವ ಕಾನ್ಹಾ ಉಪವನ ಗೋಶಾಲೆಗೆ ಮತ್ತು ಅಟಮೋಸ್‌ ಪವರ್‌ ಸಂಸ್ಥೆ ಸ್ಥಾಪಿಸಿರುವ ಗೋಬರ್‌ ಗ್ಯಾಸ್‌ ಘಟಕಕ್ಕೆ ಭೇಟಿ ನೀಡಿ ಮಾಹಿತಿ ಪಡೆದರು. 

ಇದೇ ವೇಳೆ ಕಾಶಿ ವಿಶ್ವನಾಥ ಹಾಗೂ ಕಾಲಭೈರವೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದರು. ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರ ಅನೇಕ ಪರಿಕಲ್ಪನೆಗಳು ಉತ್ತರಪ್ರದೇಶದಲ್ಲಿ ಸಾಕಾರಗೊಂಡಿವೆ ಎಂದು ಅಭಿಪ್ರಾಯಪಟ್ಟರು.

ಮಹಾರಾಷ್ಟ್ರದ ಔರಂಗಾಬಾದ್‌ನಲ್ಲಿ ಸುಮಾರು 100 ವರ್ಷಗಳಿಂದ ಜೈನ ಸಮುದಾಯ ನಿರ್ವಹಣೆ ಮಾಡುತ್ತಿರುವ ಮಹಾವೀರ ಜೈನ್‌ ಗೋಶಾಲೆಗೂ ಪ್ರಭು ಚವ್ಹಾಣ್‌ ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದ್ದಾರೆ.