ಅಮುಲ್‌-ಕೆಎಂಎಫ್ ವಿಲೀನ ಕರ್ನಾಟಕದ ಹಾಲಿಗೆ ಹುಳಿ ಹಿಂಡುವ ಯತ್ನ: ಹೆಚ್‌ಡಿಕೆ ಕಿಡಿ

ಅಮುಲ್‌'ನೊಂದಿಗೆ ಕೆಎಂಎಫ್ ಸಂಸ್ಥೆ ವಿಲೀನ ವಿಚಾರವಾಗಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹೇಳಿಕೆ ವಿರುದ್ಧ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಕಿಡಿ ಕಾರಿದ್ದಾರೆ.
 

Share this Video
  • FB
  • Linkdin
  • Whatsapp

ಅಮಿತ್‌ ಶಾ ವಿರುದ್ಧ ಹೆಚ್‌ಡಿಕೆ ಆಕ್ರೋಶ ವ್ಯಕ್ತಪಡಿಸಿದ್ದು, KMF ಸಂಸ್ಥೆ ವಿಲೀನ ಕನ್ನಡಿಗರಿಗೆ ಮಾಡುವ ಅನ್ಯಾಯ ಎಂದು ಟ್ವೀಟ್‌ ಮಾಡಿದ್ದಾರೆ. ಇದು ಕರ್ನಾಟಕದ ಹಾಲಿಗೆ ಗುಜರಾತಿನ ಹುಳಿ ಹಿಂಡುವ ಯತ್ನ. ಕನ್ನಡ ಮತ್ತು ಕರ್ನಾಟಕದ ಮೇಲೆ ಮೇಲೆ ಸದಾ ಪ್ರಹಾರ. ಕೇಂದ್ರ ಕನ್ನಡಿಗರ ವಿರುದ್ಧ ರಕ್ಕಸ ನೀತಿ ಮುಂದುವರೆಸಿದೆ. ಇದು ಕರ್ನಾಟಕವನ್ನು ಗುಜರಾತ್‌ ಮಾಡುವ ಧೂರ್ತ ಹುನ್ನಾರ. ಕರ್ನಾಟಕದ ಮೇಲೆ ಏಕೆ ಅಸಹನೆ, ವೈಶಮ್ಯ ಎಂದು ಕೇಳಿದ್ದಾರೆ. ನಂದಿನಿ ತಂಟೆಗೆ ಬಂದ್ರೆ ಬಿಜೆಪಿ ಭಸ್ಮವಾಗುತ್ತದೆ ಎಂದು ಟ್ವೀಟ್‌ ಮೂಲಕ ಕಿಡಿ ಕಾರಿದ್ದಾರೆ.

ಕೇಂದ್ರ ಸಚಿವ ಸಂಪುಟ ವಿಸ್ತರಣೆ ಸಾಧ್ಯತೆ: ಕರ್ನಾಟಕಕ್ಕೆ ಇದೆ ಒಂದು ಚಾನ ...

Related Video