ಪ್ರಧಾನಿ ಮೋದಿಗೆ ಲಸಿಕೆ ನೀಡುವ ಅವಕಾಶ ಸಿಕ್ಕಿದ್ದು ನಮ್ಮ ಸೌಭಾಗ್ಯ: ಭಾವುಕರಾದ ನರ್ಸ್
ಇಂದಿನಿಂದ ದೇಶಾದ್ಯಂತ 3 ನೇ ಹಂತದ ಲಸಿಕಾ ಅಭಿಯಾನ ಶುರುವಾಗಿದೆ. ಪ್ರಧಾನಿ ಮೋದಿ ಮೊದಲ ಹಂತದ ಲಸಿಕೆ ತೆಗೆದುಕೊಂಡರು. ಮೋದಿಯವರಿಗೆ ಲಸಿಕೆ ನೀಡಿದ ಕೇರಳ ಮೂಲದ ರೋಸಮ್ಮ ಅನಿಲ್ ಮಾತನಾಡಿದ್ದಾರೆ.
ನವದೆಹಲಿ (ಮಾ. 01): ಇಂದಿನಿಂದ ದೇಶಾದ್ಯಂತ 3 ನೇ ಹಂತದ ಲಸಿಕಾ ಅಭಿಯಾನ ಶುರುವಾಗಿದೆ. ಪ್ರಧಾನಿ ಮೋದಿ ಮೊದಲ ಹಂತದ ಲಸಿಕೆ ತೆಗೆದುಕೊಂಡರು. ಮೋದಿಯವರಿಗೆ ಲಸಿಕೆ ನೀಡಿದ ಕೇರಳ ಮೂಲದ ರೋಸಮ್ಮ ಅನಿಲ್ ಮಾತನಾಡಿದ್ದಾರೆ.
ಗ್ಯಾಸ್ ಸಿಲಿಂಡರ್ ದರ ಇಂದು 25 ರೂ ಏರಿಕೆ, ಗ್ರಾಹಕರಿಗೆ ಬರೆ ಮೇಲೆ ಬರೆ!
'ಪ್ರಧಾನಿಗೆ ಲಸಿಕೆ ನೀಡುವ ಸೌಭಾಗ್ಯ ಒಲಿದಿದ್ದು ನಮಗೆ ಸಂತೋಷ ತಂದಿದೆ. ನೀವು ಎಲ್ಲಿಂದ ಬಂದಿದ್ದೇವೆ.? ಎಷ್ಟು ಕಾಲದಿಂದ ಇಲ್ಲಿ ಸೇವೆ ಸಲ್ಲಿಸುತ್ತಿದ್ದೀರಿ.? ಎಂದು ನಮ್ಮನ್ನು ವಿಚಾರಿಸಿದರು. ಲಸಿಕೆ ನೀಡಿದ ಬಳಿಕ ನಾವು 30 ನಿಮಿಷಗಳ ಕಾಲ ಅಬ್ಸರ್ವೇಷನ್‌ನಲ್ಲಿ ಇದ್ದೆವು. ಯಾವುದೇ ಕಂಪ್ಲೆಂಟ್ ಬಂದಿಲ್ಲ. ಪ್ರಧಾನಿಯವರು ಖುಷಿಯಿಂದ ಎದ್ದು ಹೊರಡಲು ಮುನ್ನ, ಮತ್ತೊಮ್ಮೆ ನಮಗೆ ಧನ್ಯವಾದಗಳನ್ನು ತಿಳಿಸಿ ಹೊರಟರು' ಎಂದಿದ್ದಾರೆ.