ನರಭಕ್ಷಕ ತೋಳಗಳ ರಕ್ಕಸ ದಾಳಿ: 70 ದಿನಗಳಲ್ಲಿ 30ಕ್ಕೂ ಅಧಿಕ ಬಲಿ

ಕಾಡಿನಲ್ಲಿರಬೇಕಾದ ತೋಳಗಳು ಕಾಡಿನ ಬೆನ್ನಿಗೆ ಅಂಟಿಕೊಂಡಿರೋ ಹಳ್ಳಿಗಳಿಗೆ ದಾಂಗುಡಿ ಇಡ್ತಿದ್ದಾವೆ.. ಅಷ್ಟೇ ಅಲ್ಲ, ಮನುಷ್ಯರ ಮಾಂಸದ ರುಚಿ ಕಂಡುಕೊಂಡಿರೋ ಈ ತೋಳಗಳು, ದಿನಕ್ಕೊಬ್ಬರ ಜೀವ ತೆಗೆಯೋಕೆ ಶುರುಮಾಡ್ಕೊಂಡಿವೆ.. ಅದೆಲ್ಲದರ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ.

First Published Sep 4, 2024, 1:59 PM IST | Last Updated Sep 4, 2024, 9:52 PM IST

ಕತ್ತಲಾದ್ರೆ ಸಾಕು, ಊರಿಗೆ ಊರೇ ಜೀವ ಕೈಲಿ ಹಿಡಿದು ಕೂತುಬಿಡುತ್ತೆ. ಮಕ್ಕಳನ್ನ ಅಪ್ಪಿ ತಪ್ಪಿ ಕೂಡ ಆಚೆ ಕಳಿಸೋದಿಲ್ಲ.. ಹೆಣ್ಣುಮಕ್ಕಳು ಅಂಗಳ ದಾಟೋದಿಲ್ಲ. ದುಡಿಯೋಕೆ ಹೋದ ಗಂಡಸರೂ ಕೂಡ, ಕತ್ತಲು ಕವಿಯೋದ್ರೊಳಗೆ ಮನೆ ಸೇರ್ಕೊಂಡು,  ಚಿಲಕ ಹಾಕ್ಕೊಂಡುಬಿಡ್ತಾರೆ. ಸೂರ್ಯ ಮುಳುಗ್ತಿದ್ದ ಹಾಗೇ, ಆ ಊರುಗಳಲ್ಲಿ ಜನ ಎಚ್ಚೆತ್ತುಕೊಳ್ತಾರೆ.. ರಾತ್ರಿ ಹೊತ್ತು ಕಣ್ಣು ಮುಚ್ಚಿ ಮಲಗೋ ಬದಲು, ಕೈಲಿ ಕೋಲು, ಹಾರೆ, ಭರ್ಜಿ, ಕತ್ತಿ ಇಟ್ಕೊಂಡು ಊರನ್ನೆಲ್ಲಾ ಸುತ್ತಾಡ್ತಾರೆ. ಇದಕ್ಕೆ ಕಾರಣ ನರಭಕ್ಷಕ ತೋಳಗಳ ಗ್ಯಾಂಗ್. ಜುಲೈ ಆರಂಭವಾದಾಗಿಂದಲೂ ಈ ಊರುಗಳಲ್ಲಿ ನರಭಕ್ಷಕರ ಹಾವಳಿ ಹೆಚ್ಚಾಗಿದೆ.. ಆದ್ರೆ, ಕಳೆದ ನಾಲ್ಕೈದು ದಿನಗಳಿಂದ, ನರಭಕ್ಷಕರ ರಕ್ತದಾಹ ಮತ್ತೂ ಹೆಚ್ಚಾಗಿದೆ.. 6 ತಿಂಗಳ ಮಗುವನ್ನೇ ಆ ನರಭಕ್ಷಕರು ಆಹಾರ ಮಾಡ್ಕೊಂಡಾಗಿಂದ, ನರಭಕ್ಷಕರ ರಣಬೇಟೆಗೆ ಪೊಲೀಸರ ಜೊತೆಗೆ, ಊರಿನವರೂ ಕೈ ಜೋಡ್ಸಿದಾರೆ.. ಯೋಗಿ ಆದಿತ್ಯನಾಥ್ ಕೂಡ, ಆ ರಕ್ತದಾಹಿಗಳ ಜೀವ ತೆಗೆದಾದ್ರೂ, ಜನರ ರಕ್ಷಣೆ ಮಾಡಿ ಅಂತ ಆದೇಶಿಸಿಬಿಟ್ಟಿದ್ದಾರೆ. ಇಲ್ಲಿದೆ ನೋಡಿ ಆ ರಕ್ತದಾಹಿಗಳ ರಣಘೋರ ಕಥಾನಕ..