ಪಾಕಿಸ್ತಾನಕ್ಕೆ ಗೌರವ ನೀಡೋದನ್ನ ಭಾರತ ಕಲಿಯಬೇಕು ಅಂದ್ರಲ್ಲ ಕಾಂಗ್ರೆಸ್ ನಾಯಕ ಮಣಿಶಂಕರ್ ಅಯ್ಯರ್
ಲೋಕಸಭೆ ಚುನಾವಣೆ ಹೊತ್ತಲ್ಲಿ ಕಾಂಗ್ರೆಸ್ ನಾಯಕರು ಒಬ್ಬರ ನಂತರ ಒಬ್ಬರಂತೆ ವಿವಾದಿತ ಹೇಳಿಕೆಗಳನ್ನೇ ನೀಡ್ತಿದ್ದಾರೆ.. ಸ್ಯಾಮ್ ಪಿತ್ರೋಡಾ ಬಳಿಕ ಇದೀಗ ಕಾಂಗ್ರೆಸ್‌ನ ಮಣಿಶಂಕರ್ ಅಯ್ಯರ್ ವಿವಾದ ಸೃಷ್ಟಿಸಿದ್ದು, ಬಿಜೆಪಿಗೆ ಚುನಾವಣಾ ಅಖಾಡದಲ್ಲಿ ಮತ್ತೊಂದು ಅಸ್ತ್ರ ಸಿಕ್ಕಂತಾಗಿದೆ.
ಬೆಂಗಳೂರು (ಮೇ.10): ಕಾಂಗ್ರೆಸ್‌ನ ಹಿರಿಯ ನಾಯಕ ಮಣಿಶಂಕರ್ ಅಯ್ಯರ್, ಸದಾ ಒಂದಿಲ್ಲೊಂದು ವಿವಾದದಿಂದಲೇ ಸುದ್ದಿ ಆಗ್ತಾರೆ. 2014ರಲ್ಲಿ ಮೋದಿ ಯಾವತ್ತೂ ಪ್ರಧಾನಿ ಆಗಲ್ಲ.. ಇಲ್ಲಿ ಬಂದು ಚಹಾ ವಿತರಣೆ ಮಾಡಲಿ ಅಂದಿದ್ದು ಇದೇ ಅಯ್ಯರ್..ಇವರಿಗೆ ಪಾಕಿಸ್ತಾನದ ಮೇಲಿನ ಪ್ರೇಮ ಅಷ್ಟಿಷ್ಟಲ್ಲ. ಈಗಲೂ ಚುನಾವಣೆ ವೇಳೆ ಪಾಕಿಸ್ತಾನವನ್ನೂ ಹಾಡಿ ಹೊಗಳಿ ಅಯ್ಯರ್ ಮತ್ತೊಮ್ಮೆ ಸುದ್ದಿಯಾಗಿದ್ದಾರೆ.
‘ಪಾಕ್ ಜತೆ ಹುಡುಗಾಟ ಬೇಡ.. ಅವರ ಬಳಿ ಅಣುಬಾಂಬ್ ಇದೆ’ ಎಂದು ಅವರು ಹೇಳಿರುವ ಹಳೆಯ ವಿಡಿಯೋ ಚುನಾವಣೆಯ ಹೊತ್ತಲ್ಲಿ ಬಿಜೆಪಿಗೆ ಹೊಸ ಅಸ್ತ್ರ ಸಿಕ್ಕಂತಾಗಿದೆ. ಸ್ಯಾಮ್ ಪಿತ್ರೋಡಾ ಬಳಿಕ ಮಣಿಶಂಕರ್ ಅಯ್ಯರ್ ಈಗ ವಿವಾದ ಸೃಷ್ಟಿಸಿದ್ದಾರೆ.
ಪಾಕ್ ಕೆಣಕಿದರೆ ನಮ್ಮ ಮೇಲೆ ಅಣುಬಾಂಬ್, ಬಿಜೆಪಿಗೆ ಎಚ್ಚರಿಕೆ ನೀಡಿ ವಿವಾದಕ್ಕೆ ಗುರಿಯಾದ ಮಣಿಶಂಕರ್!
ಪಾಕಿಸ್ತಾನದ ಬಳಿ ಅಣುಬಾಂಬ್‌ಗಳಿವೆ. ನಾವು ಅವರನ್ನು ಕೆಣಕಿದ್ರೆ ನಮ್ಮ ಮೇಲೆ ಅಣು ಬಾಂಬ್ ಹಾಕ್ತಾರೆ. ಭಾರತ ಸರ್ಕಾರ, ಪಾಕಿಸ್ತಾನ ಗೌರವಿಸದೇ ಹೋದರೆ ಅದಕ್ಕೆ ದೊಡ್ಡ ಬೆಲೆ ತೆರಬೇಕಾಗುತ್ತದೆ ಎಂದು ಭಾರತದಲ್ಲೇ ಕುಳಿತು ಟಿವಿ ಸಂದರ್ಶನದಲ್ಲಿ ಎಚ್ಚರಿಕೆ ನೀಡೋ ಮೂಲಕ ಮತ್ತೊಮ್ಮೆ ತಾನು ಪಾಕ್ ಪ್ರೇಮಿ ಅನ್ನೋದನ್ನ ಜಗಜ್ಜಾಹಿರುಗೊಳಿಸಿದ್ದಾರೆ.