ಜೋರಾಯ್ತು ಲಕ್ಷದ್ವೀಪ ಮಾಲ್ಡೀವ್ಸ್‌ ಜಟಾಪಟಿ: 'ಬಾಯ್ಕಾಟ್‌ ಮಾಲ್ಡೀವ್ಸ್‌'ಕ್ಯಾಂಪೇನ್‌ಗೆ ಸೆಲೆಬ್ರೆಟಿಗಳ ಸಾಥ್‌

ಪ್ರಧಾನಿ ನರೇಂದ್ರ ಮೋದಿಯವರ ಲಕ್ಷದ್ವೀಪ ಭೇಟಿಯನ್ನು ಲೇವಡಿ ಮಾಡಿದ ವಿವಾದಕ್ಕೆ ಸಂಬಂಧಿಸಿದಂತೆ ಮಾಲ್ಡೀವ್ಸ್ ಸರ್ಕಾರ ಮೂವರು ಸಚಿವರನ್ನು ಅಮಾನತುಗೊಳಿಸಿದೆ. 

Share this Video

ಲಕ್ಷದ್ವೀಪಕ್ಕೆ ಭೇಟಿ ಕೊಟ್ಟಿದ್ದ ಮೋದಿ ಭಾರತೀಯರಿಗೆ ಒಂದು ಸಂದೇಶ ನೀಡಿದ್ದರು. ಅದು ಏನಂದ್ರೆ ಲಕ್ಷದ್ವೀಪದ(Lakshadweep) ಸೌಂದರ್ಯವನ್ನ ಪದಗಳಲ್ಲಿ ಹೇಳೊಕೆ ಕಷ್ಟ. ಜಗತ್ತಿನ ಬೇರೆ ಬೇರೆ ಕಡಲ ತೀರಗಳಿಗೆ ಹೋಗೋರಿಗೆ ನನ್ನದೊಂದು ಆಗ್ರಹವಿದೆ. ಲಕ್ಷದ್ವೀಪಕ್ಕೆ ಭೇಟಿ ನೀಡಿ ಅನ್ನೋದು. ಇದೇ ವಿಚಾರಕ್ಕೆ ಮಾಲ್ಡೀವ್ಸ್ ಸಚಿವರು(Ministers) ರೊಚ್ಚಿಗೆದ್ದಿದ್ದರು. ಭಾರತವು ಮಾಲ್ಡೀವ್ಸ್‌ನನ್ನು(Maldives) ಟಾರ್ಗೆಟ್ ಮಾಡುತ್ತಿದೆ ಎಂದು ಆರೋಪಿಸಿದ್ದ ಅಲ್ಲಿನ ಸಚಿವ ಅಬ್ದುಲ್ಲಾ ಮಹಜೂಮ್ ಮಜೀದ್. ಮಾಲ್ಡೀವ್ಸ್‌ನ ಬೀಚ್ ಪ್ರವಾಸೋದ್ಯಮದ ಜತೆ ಸ್ಪರ್ಧಿಸಲು ಭಾರತಕ್ಕೆ(India) ಸಾಕಷ್ಟು ಸವಾಲುಗಳಿವೆ. ಭಾರತದ ಬೀಚ್‌ಗಳು ಕೊಳಕಾಗಿವೆ ಎಂಬುದಾಗಿ ವ್ಯಂಗ್ಯವಾಡಿದ್ದರು.

ಇದನ್ನೂ ವೀಕ್ಷಿಸಿ:  News Hour: ಮಾಲ್ಡೀವ್ಸ್‌ ಅನ್ನೋ ಪುಟ್ಟ ದೇಶವನ್ನು ಕಾಪಾಡಿದ್ದೇ ಭಾರತ!

Related Video