Asianet Suvarna News Asianet Suvarna News

ಮಹಾರಾಷ್ಟ್ರದ ಮತ್ತೊಬ್ಬ ಸಚಿವರಿಗೆ ಅಂಟಿದ ಕೊರೋನಾ ಸೋಂಕು..!

ಮಹಾರಾಷ್ಟ್ರದಲ್ಲಿ ಈ ಮೊದಲು ಜಿತೇಂದ್ರ ಅಹ್ವಾದ್ ಹಾಗೂ ಅಶೋಕ್ ಚೌಹ್ಹಾಣ್ ಎನ್ನುವ ಇಬ್ಬರು ಸಚಿವರು ಕೊರೋನಾ ಸೋಂಕಿಗೆ ತುತ್ತಾಗಿದ್ದರು. ಸಚಿವ ಸಂಪುಟ ಸಭೆಯಲ್ಲಿ ಧನಂಜಯ್ ಮುಂಡೆ ಪಾಲ್ಗೊಂಡಿದ್ದರು. ಇದೀಗ ಉಳಿದ ಸಚಿವರಿಗೂ ಕೊರೋನಾ ಭೀತಿ ಕಾಡಲಾರಂಭಿಸಿದೆ.
 
ಮುಂಬೈ(ಜೂ.12): ಮಹಾರಾಷ್ಟ್ರದಲ್ಲಿ ಕೊರೋನಾ ರಣಕೇಕೆ ಮುಂದುವರೆದಿದೆ. ಇದೀಗ ಮಹಾರಾಷ್ಟ್ರದ ಸಚಿವ ಧನಂಜಯ್ ಮುಂಡೆ ಅವರಿಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಇದರೊಂದಿಗೆ ಕೊರೋನಾ ಸೋಂಕಿಗೆ ತುತ್ತಾದ ಮಹಾರಾಷ್ಟ್ರ ಸರ್ಕಾರದ ಮೂರನೇ ಸಚಿವ ಎನ್ನುವ ಕುಖ್ಯಾತಿಗೆ ಪಾತ್ರರಾಗಿದ್ದಾರೆ.

ಮಹಾರಾಷ್ಟ್ರದಲ್ಲಿ ಈ ಮೊದಲು ಜಿತೇಂದ್ರ ಅಹ್ವಾದ್ ಹಾಗೂ ಅಶೋಕ್ ಚೌಹ್ಹಾಣ್ ಎನ್ನುವ ಇಬ್ಬರು ಸಚಿವರು ಕೊರೋನಾ ಸೋಂಕಿಗೆ ತುತ್ತಾಗಿದ್ದರು. ಸಚಿವ ಸಂಪುಟ ಸಭೆಯಲ್ಲಿ ಧನಂಜಯ್ ಮುಂಡೆ ಪಾಲ್ಗೊಂಡಿದ್ದರು. ಇದೀಗ ಉಳಿದ ಸಚಿವರಿಗೂ ಕೊರೋನಾ ಭೀತಿ ಕಾಡಲಾರಂಭಿಸಿದೆ.

ಎಲೆಕ್ಷನ್ ಇಲ್ಲದೇ ದೇವೇಗೌಡ ಸೇರಿದಂತೆ 4 ಅಭ್ಯರ್ಥಿಗಳು ರಾಜ್ಯಸಭೆಗೆ ಆಯ್ಕೆ

ಮಹಾರಾಷ್ಟ್ರದಲ್ಲಿ ಕೊರೋನಾ ಪೀಡಿತರ ಸಂಖ್ಯೆ ಒಂದು ಲಕ್ಷದ ಗಡಿ ದಾಟಿದೆ. ಇದರೊಂದಿಗೆ ದೇಶದಲ್ಲಿ ಅತಿಹೆಚ್ಚು ಕೊರೋನಾ ಸೋಂಕಿತರನ್ನು ಹೊಂದಿದ ರಾಜ್ಯ ಎನ್ನುವ ಕುಖ್ಯಾತಿಗೆ ಕಾರಣವಾಗಿದೆ. ಇದರ ಬೆನ್ನಲ್ಲೇ ಸಚಿವರಿಗೇ ಕೊರೋನಾ ತಗುಲಿರುವುದು ಜನರು ಮತ್ತಷ್ಟು ಆತಂಕದಿಂದ ಕಾಲ ದೂಡುವಂತೆ ಮಾಡಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

Video Top Stories