ಬೆಂಗಳೂರು, (ಜೂನ್.12): ಕರ್ನಾಟಕ ರಾಜ್ಯಸಭಾಗೆ ಸ್ಪರ್ಧಿಸಿರುವ ನಾಲ್ವರು ಅಭ್ಯರ್ಥಿಗಳು ಆವಿರೋಧವಾಗಿ ಆಯ್ಕೆಯಾಗಿದ್ದಾರೆ. 

ಬಿಜೆಪಿಯ ಈರಣ್ಣ ಕಡಾಡಿ, ಅಶೋಕ್ ಗಸ್ತಿ,  ಕಾಂಗ್ರೆಸ್‌ನ ಮಲ್ಲಿಕಾರ್ಜುನ ಖರ್ಗೆ ಮತ್ತು ಜೆಡಿಎಸ್‌ನ ಎಚ್‌ಡಿ ದೇವೇಗೌಡ ಅವರು ರಾಜ್ಯಸಭೆಗೆ ಪ್ರವೇಶಿಸಿದ್ದಾರೆ. 

ಕಾಂಗ್ರೆಸ್‌ ಕಟ್ಟಾಳು ಖರ್ಗೆಗೆ ಈ ಬಾರಿ ರಾಜ್ಯಸಭೆ ವಿರೋಧ ಪಕ್ಷದ ನಾಯಕನ ಸ್ಥಾನ ಒಲಿದು ಬರುತ್ತಾ?

ಕರ್ನಾಟಕ ವಿಧಾನಸಭೆಯಿಂದ ನಾಲ್ವರು ರಾಜ್ಯಸಭಾ ಸದಸ್ಯರನ್ನು ಆಯ್ಕೆ ಮಾಡಲು ಜೂನ್ 19ರಂದು ಚುನಾವಣೆ ನಡೆಯಬೇಕಿತ್ತು. ಆದ್ರೆ, ಕಣದಲ್ಲಿ ಈ ನಾಲ್ವರು ಅಭ್ಯರ್ಥಿಗಳಿಗೆ ಪ್ರತಿಸ್ಪರ್ಧಿ ಇಲ್ಲದ ಚುನಾವಣೆ ಚುನಾವಣೆ ನಡೆಯುವುದಿಲ್ಲ.

  ಅಭ್ಯರ್ಥಿಗಳ ಚಿತ್ರಣ ಸ್ಪಷ್ಟವಾಗಿದ್ದು, ಚುನಾವಣೆ ಇಲ್ಲದೆ ನಾಲ್ವರು ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಈ ಬಗ್ಗೆ ಚುನಾವಣಾಧಿಕಾರಿ ಎಂ.ಕೆ.ವಿಶಾಲಾಕ್ಷಿ ಅಧಿಕೃತ ಘೋಷಣೆ ಮಾಡಿದ್ದಾರೆ.

ಪಕ್ಷೇತರರಾಗಿ ಸಂಗಮೇಶ್ ಚಿಕ್ಕನರಗುಂದ ಎನ್ನುವರು ನಾಮಪತ್ರ ಸಲ್ಲಿಸಿದ್ದರು. ಆದರೆ, ಸೂಚಕರಿಲ್ಲದ ಕಾರಣ ಸಂಗಮೇಶ್ ನಾಮಪತ್ರ ತಿರಸ್ಕೃತಗೊಂಡಿದೆ. ಈ ಹಿನ್ನೆಲೆಯಲ್ಲಿ ಉಳಿದ ನಾಲ್ವರು ಅಭ್ಯರ್ಥಿಗಳ ನಾಮಪತ್ರಗಳು ಸರಿ ಇದ್ದು, ಅವರು ಅವಿರೋಧವಾಗಿ ಗೆದ್ದಿದ್ದಾರೆ ಎಂದು ಚುನಾವಣಾಧಿಕಾರಿ ಸ್ಪಷ್ಟಪಡಿಸಿದರು.

"

ಕರ್ನಾಟಕ ವಿಧಾನಸಭೆಯಿಂದ ರಾಜ್ಯಸಭೆಗೆ ಒಬ್ಬ ಸದಸ್ಯ ಆಯ್ಕೆಯಾಗಲು 48 ಮತಗಳು ಬೇಕು. ಕಾಂಗ್ರೆಸ್ ಒಂದು ಸ್ಥಾನದಲ್ಲಿ ಗೆಲ್ಲುವುದು ನಿಶ್ಚಿತ. ಬಿಜೆಪಿ ಸುಲಭವಾಗಿ ಎರಡು ಸ್ಥಾನ ಗೆಲ್ಲಲಿದೆ. ಇಲ್ಲಿಗೆ ಮೂರು ಸ್ಥಾನ ಭರ್ತಿ ಆಯಿತು. ಇನ್ನು ನಾಲ್ಕನೇ ಸ್ಥಾನ ಯಾರಿಗೆ? ಎಂಬುದು ಕುತೂಹಲಕ್ಕೆ ಕಾರಣವಾಗಿತ್ತು.

ನಂತರ ದೇವೇಗೌಡರು ಅವರು ಜೆಡಿಎಸ್‌ನ 36 ಮತಗಳ ಜೊತೆಗೆ ಕಾಂಗ್ರೆಸ್ ಹೆಚ್ಚುವರಿ ಮತಗಳು ಸಹ ಸಿಗಲಿವೆ. ಈ ಹಿನ್ನೆಲೆಲ್ಲಿ ದೇವೇಗೌಡ್ರ ಗೆಲುವಿನ ಹಾದಿ ಸುಗಮವಾಗಿದ್ದು, ಜೂನ್ 19ರಂದು ನಡೆಯಬೇಕಿದ್ದ ಚುನಾವಣೆ ರದ್ದಾಗುತ್ತದೆ.